ಮಲಗಿದ್ದ ಬೀದಿನಾಯಿ ಮೇಲೆ ಹೊಯ್ಸಳ ಹತ್ತಿಸಿದ ಪೊಲೀಸ್ ಡ್ರೈವರ್

|

Updated on: Dec 02, 2019 | 1:57 PM

ಬೆಂಗಳೂರು: ಅತ್ತ, ಹೆಚ್​ಎಸ್​ಆರ್ ಲೇಔಟ್​ನಲ್ಲಿ ಬೀದಿ ನಾಯಿ ಬೊಗಳಿದ್ದಕ್ಕೆ ಡಿಲೆವರಿ ಬಾಯ್ ಹೊಡೆದು ಸಾಯಿಸಿದ ಘಟನೆ ನಡೆದಿತ್ತು. ಆದರೆ ಇಲ್ಲಿ ರಕ್ಷಕರೇ ಭಕ್ಷಕರಾಗಿ ಬೀದಿ ನಾಯಿ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಮಾನವೀಯತೆ ಮರೆತ ಪೊಲೀಸರು ಹೊಯ್ಸಳ ವಾಹನವನ್ನು ಬೀದಿ ನಾಯಿಯ ಮೇಲೆ ಹತ್ತಿಸಿದ್ದಾರೆ. ನಿನ್ನೆ ಕೆ.ಆರ್​.ಪುರಂನಲ್ಲಿ ಉಪಚುನಾವಣಾ ಪ್ರಚಾರದ ಗಸ್ತು ತಿರುಗುವ ವೇಳೆ ಈ ಅಮಾನವೀಯ ಘಟನೆ ನಡೆದಿದೆ. ಸೌಜನ್ಯಕ್ಕೂ ಕೆಳಗೆ ಇಳಿದು ನೋಡಿಲ್ಲ: ಪೊಲೀಸರ ಗಸ್ತು ವೇಳೆ ರಸ್ತೆಯಲ್ಲಿ ನಾಯಿ ಕೂತಿತ್ತು. ನಾಯಿ ಇದ್ದದ್ದು ಗೊತ್ತಿದ್ದರೂ […]

ಮಲಗಿದ್ದ ಬೀದಿನಾಯಿ ಮೇಲೆ ಹೊಯ್ಸಳ ಹತ್ತಿಸಿದ ಪೊಲೀಸ್ ಡ್ರೈವರ್
Follow us on

ಬೆಂಗಳೂರು: ಅತ್ತ, ಹೆಚ್​ಎಸ್​ಆರ್ ಲೇಔಟ್​ನಲ್ಲಿ ಬೀದಿ ನಾಯಿ ಬೊಗಳಿದ್ದಕ್ಕೆ ಡಿಲೆವರಿ ಬಾಯ್ ಹೊಡೆದು ಸಾಯಿಸಿದ ಘಟನೆ ನಡೆದಿತ್ತು. ಆದರೆ ಇಲ್ಲಿ ರಕ್ಷಕರೇ ಭಕ್ಷಕರಾಗಿ ಬೀದಿ ನಾಯಿ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಮಾನವೀಯತೆ ಮರೆತ ಪೊಲೀಸರು ಹೊಯ್ಸಳ ವಾಹನವನ್ನು ಬೀದಿ ನಾಯಿಯ ಮೇಲೆ ಹತ್ತಿಸಿದ್ದಾರೆ. ನಿನ್ನೆ ಕೆ.ಆರ್​.ಪುರಂನಲ್ಲಿ ಉಪಚುನಾವಣಾ ಪ್ರಚಾರದ ಗಸ್ತು ತಿರುಗುವ ವೇಳೆ ಈ ಅಮಾನವೀಯ ಘಟನೆ ನಡೆದಿದೆ.

ಸೌಜನ್ಯಕ್ಕೂ ಕೆಳಗೆ ಇಳಿದು ನೋಡಿಲ್ಲ:
ಪೊಲೀಸರ ಗಸ್ತು ವೇಳೆ ರಸ್ತೆಯಲ್ಲಿ ನಾಯಿ ಕೂತಿತ್ತು. ನಾಯಿ ಇದ್ದದ್ದು ಗೊತ್ತಿದ್ದರೂ ಹೊಯ್ಸಳ ವಾಹನ ಹತ್ತಿಸಿ ಅಟ್ಟಹಾಸ ಮೆರೆದಿದ್ದಾರೆ. ಈ ವೇಳೆ ರಸ್ತೆಯಲ್ಲೇ ನಾಯಿ ಕಿರುಚಾಡಿ ನರಳಾಡಿದೆ. ಸೌಜನ್ಯಕ್ಕೂ ಕೆಳಗೆ ಇಳಿದು ನೋಡದೇ ಪೊಲೀಸರು ಸ್ಥಳದಿಂದ ಹೊರಟು ಹೋಗಿದ್ದಾರೆ. ಕೂಡಲೇ ಸ್ಥಳೀಯರು ಬೀದಿ ನಾಯಿಯನ್ನ ರಕ್ಷಿಸಿದ್ದಾರೆ. ಪೊಲೀಸರ ಈ ವರ್ತನೆಗೆ ಪ್ರಾಣಿಪ್ರಿಯರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 1:16 pm, Mon, 2 December 19