ಹುಬ್ಬಳ್ಳಿ: ಏಪ್ರಿಲ್ 10 ರಂದು ಹುಬ್ಬಳ್ಳಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು ನಿಯಾಜ್ ಅಹ್ಮದ್ ಕಟಿಗಾರ, ತೌಸಿಫ್ ಚಿನ್ನಾಪುರ, ಅಲ್ತಾಫ್ ಮುಲ್ಲಾ ಮತ್ತು ಅಮನ್ ಗಿರಣಿವಾಲೆ ಎಂದು ತಿಳಿದುಬಂದಿದೆ. ದೇವರಗುಡಿಹಾಳ ಅರಣ್ಯ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವಕನ ರುಂಡ ಪತ್ತೆಯಾಗಿದ್ದು, ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಮುಂಡ ಪತ್ತೆಯಾಗಿತ್ತು. ಏಪ್ರಿಲ್ 12ರ ಮಧ್ಯಾಹ್ನ ಹೊತ್ತಿಗೆ ರುಂಡ ಪತ್ತೆಯಾದರೆ, ರಾತ್ರಿ ವೇಳೆ ಮುಂಡ ಸಿಕ್ಕಿತ್ತು.
ಆರೋಪಿ ನಿಯಾಜ್ ಮತ್ತು ಶನಾಯ್ ಕಾಟವೆ ಪ್ರೀತಿಸುತ್ತಿದ್ದರು. ಇದನ್ನು ಶನಾಯ್ ಸಹೋದರ ರಾಕೇಶ್ ವಿರೋಧಿಸಿದ್ದ. ಈ ಹಿನ್ನೆಲೆ ನಿಯಾಜ್ ತನ್ನ ಸಂಗಡಿಗರ ಜೊತೆ ಸೇರಿ ರಾಕೇಶ್ನ ಹತ್ಯೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ. ಕೊಲೆ ಬಳಿಕ ರಾಕೇಶ್ನ ರುಂಡ ಮತ್ತು ಮುಂಡವನ್ನು ಬೇರೆ ಮಾಡಿ, ದೇಹ ಸುಟ್ಟು ಹಾಕಿ ಎಸೆಯಲು ಆರೋಪಿಗಳು ಮುಂದಾಗಿದ್ದರು. ಸಾಕ್ಷ್ಯಾ ನಾಶಕ್ಕಾಗಿ ಕ್ರೂರವಾಗಿ ಕೊಲೆ ಮಾಡಿದ್ದ ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ
ಹುಬ್ಬಳ್ಳಿಯಲ್ಲಿ ಯುವಕನ ಭೀಕರ ಹತ್ಯೆ; ರುಂಡ, ಮುಂಡ ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆ
ಬಳ್ಳಾರಿಯಿಂದ ಕೆನಡಾಕ್ಕೆ ಹೊರಟ ಬೀದಿ ನಾಯಿ! ನಾಯಿಮರಿಯನ್ನು ದತ್ತು ಪಡೆದ ಕೆನಡಾದ ಮಹಿಳೆ
(Hubli brutal Murder case police arrested four accused)