AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಯುವಕನ ಭೀಕರ ಹತ್ಯೆ; ರುಂಡ, ಮುಂಡ ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆ

ದೇವರಗುಡಿಹಾಳ ಅರಣ್ಯ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವಕನ ರುಂಡ ಪತ್ತೆಯಾಗಿದ್ದು, ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಮುಂಡ ಪತ್ತೆಯಾಗಿದೆ. ಮಧ್ಯಾಹ್ನ ಹೊತ್ತಿಗೆ ರುಂಡ ಪತ್ತೆಯಾದರೆ ರಾತ್ರಿ ವೇಳೆ ಮುಂಡ ಸಿಕ್ಕಿದೆ.

ಹುಬ್ಬಳ್ಳಿಯಲ್ಲಿ ಯುವಕನ ಭೀಕರ ಹತ್ಯೆ; ರುಂಡ, ಮುಂಡ ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆ
ಶ್ವಾನದಳ ದಿಂದ ಶೋಧ ಕಾರ್ಯ ನಡೆಸುತ್ತಿರುವ ಪೊಲೀಸರು
Follow us
sandhya thejappa
|

Updated on: Apr 13, 2021 | 10:46 AM

ಹುಬ್ಬಳ್ಳಿ: ಅವಳಿ ನಗರದಲ್ಲಿ ಯುವಕನ ಭೀಕರ ಕೊಲೆಯಾಗಿದ್ದು, ರುಂಡ, ಮುಂಡ ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾಗಿದೆ. ದೇವರಗುಡಿಹಾಳ ಅರಣ್ಯ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವಕನ ರುಂಡ ಪತ್ತೆಯಾಗಿದ್ದು, ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಮುಂಡ ಪತ್ತೆಯಾಗಿದೆ. ಮಧ್ಯಾಹ್ನ ಹೊತ್ತಿಗೆ ರುಂಡ ಪತ್ತೆಯಾದರೆ ರಾತ್ರಿ ವೇಳೆ ಮುಂಡ ಸಿಕ್ಕಿದೆ. ಯುವಕನ ರುಂಡ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಕೊಲೆ ಮಾಡಿ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕೇಶ್ವಾಪುರ ಮತ್ತು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಈ ಪ್ರಕರಣ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ. ಸುನೀಲ್ ಹತ್ಯೆ ಪ್ರಕರಣ; ಬ್ಯಾಟರಾಯನಪುರ ಪೊಲೀಸರಿಂದ 6 ಆರೋಪಿಗಳ ಬಂಧನ ಬೆಂಗಳೂರು: ರೌಡಿ ಶೀಟರ್ ಸುನೀಲ್ ಅಲಿಯಾಸ್ ಕಾಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಟರಾಯನಪುರ ಪೊಲೀಸರು ಸುಮಾರು ಆರು ಅರೋಪಿಗಳನ್ನು ಬಂಧಿಸಿದ್ದಾರೆ. ಬ್ಯಾಟರಾಯನಪುರದ ಕಸ್ತೂರಿ ನಗರದಲ್ಲಿ ಏಪ್ರಿಲ್ 10 ರಂದು ಸುನೀಲ್ ಹತ್ಯೆಯಾಗಿತ್ತು. ಮಾರಕಾಸ್ತ್ರಗಳಿಂದ ಸುನೀಲ್​ನನ್ನು ಕೊಚ್ಚಿ ಕೊಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ನಾಗ, ಜೋಗಯ್ಯ ಸೇರಿದಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ

Black Lives Matter: ಜಾರ್ಜ್​ ಫ್ಲೈಡ್​ನನ್ನು ಕೊಂದ ನಗರದಲ್ಲೇ ಮತ್ತೋರ್ವ ಕಪ್ಪು ವರ್ಣೀಯನ ಕೊಲೆ, ಮಿನಿಯಾಪೊಲೀಸ್​ ಉದ್ವಿಗ್ನ

ಬೆಳಗಿನ ಜಾವ ಕುಡುಕ ಪತಿಯಿಂದ ಜಗಳ, ಹತ್ಯೆಗೈದ ಪತ್ನಿ.. ಪರಾರಿಯಾದ ಮಹಿಳೆಯ ಹಿಡಿದು ಠಾಣೆಗೆ ತಂದ ಪೊಲೀಸರು

(Youth murdered in Hubli and body head found in separate places)