AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Black Lives Matter: ಜಾರ್ಜ್​ ಫ್ಲೈಡ್​ನನ್ನು ಕೊಂದ ನಗರದಲ್ಲೇ ಮತ್ತೋರ್ವ ಕಪ್ಪು ವರ್ಣೀಯನ ಕೊಲೆ, ಮಿನಿಯಾಪೊಲೀಸ್​ ಉದ್ವಿಗ್ನ

ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದ ಜಾರ್ಜ್​ ಫ್ಲೈಡ್​ನ ಕೊಲೆಯ ನಂತರ ಮಿನಿಯಾಪೊಲಿಸ್​ ನಗರದಲ್ಲಿ ಮತ್ತೆ ಕಪ್ಪು ವರ್ಣೀಯನೊಬ್ಬನನ್ನು ಪೊಲೀಸರು ಗುಂಡಿಟ್ಟು ಕೊಂದ ವರದಿ ಬಂದಿದೆ.

Black Lives Matter: ಜಾರ್ಜ್​ ಫ್ಲೈಡ್​ನನ್ನು ಕೊಂದ ನಗರದಲ್ಲೇ ಮತ್ತೋರ್ವ ಕಪ್ಪು ವರ್ಣೀಯನ ಕೊಲೆ, ಮಿನಿಯಾಪೊಲೀಸ್​ ಉದ್ವಿಗ್ನ
ಸಂಗ್ರಹ ಚಿತ್ರ
ಡಾ. ಭಾಸ್ಕರ ಹೆಗಡೆ
| Edited By: |

Updated on:Apr 12, 2021 | 1:27 PM

Share

ಅಮೇರಿಕದ ಅಧ್ಯಕ್ಷ ಚುನಾವಣೆಗೆ ಮುನ್ನ, ಕಳೆದ ವರ್ಷದ ಮೇ ತಿಂಗಳಿನಲ್ಲಿ ನಡೆದ ಜಾರ್ಜ್ ಫ್ಲೈಡ್ ಎಂಬ ಕಪ್ಪು ವರ್ಣೀಯನ ಹತ್ಯೆ ನಡೆಯಿತಲ್ಲ. ಆ ಜಾಗದಿಂದ 16 ಕಿಲೋ ಮೀಟರ್ ದೂರದಲ್ಲಿ ಮತ್ತೋರ್ವ ಕಪ್ಪು ವರ್ಣೀಯನನ್ನು ರವಿವಾರ ಗುಂಡಿಟ್ಟು ಸಾಯಿಸಲಾಗಿದೆ. ಇದ ಕೂಡ ಮಿನಿಯಾಪೊಲೀಸ್ ನಗರದ ಭಾಗದಲ್ಲಿ ನಡೆದಿರುವುದು ವಿಶೇಷವಾಗಿದೆ. ನಿನ್ನೆಯ ಘಟನೆಯಲ್ಲಿ ಸತ್ತಿರುವ ವ್ಯಕ್ತಿಯನ್ನು 20-ವರ್ಷದ ಡಾಂಟೇ ರೈಟ್ ಎಂದು ಗುರುತಿಸಲಾಗಿದೆ, ಈ ಘಟನೆಯ ಬೆನ್ನಲ್ಲೆ ಆ ನಗರದಲ್ಲಿ ಉದ್ವಗ್ನ ಪರಿಸ್ಥಿತಿ ಉದ್ಭವಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ತಾವು ಹೇಳಿದಂತೆ ಕೇಳಿಲ್ಲ ಎಂಬ ಸಿಟ್ಟಿಗೆ ಮಿನಿಯಾಪೊಲೀಸ್ ನಗರದ ಪೊಲೀಸರು ಫ್ಲೈಡ್ನನ್ನು ಉಸಿರುಗಟ್ಟಿಸಿ ಸಾಯಿಸಿದ್ದರು. ಅದಾದ ನಂತರ, ಇಡೀ ಅಮೇರಿಕಾ ಮಾತ್ರವಲ್ಲ ಯುರೋಪಿನಲ್ಲಿ ಬ್ಲಾಕ್ ಲೈವ್ಸ್ ಮ್ಯಾಟರ್ ಎಂಬ ಚಳುವಳಿ ನಡೆಯಿತು. ಅಮೇರಿಕ, ಹಿಂದೆಂದು ಕಂಡರಿಯದ ಹಿಂಸಾಚಾರವನ್ನು ನೋಡುವಂತಾಯಿತು.

ರವಿವಾರದ ಘಟನೆಯ ವಿವರ ಏನು? ಮಿನಿಯಾಪೊಲೀಸ್ ನಗರದ ಹೊರವಲಯದ ಬ್ರೂಕ್ಲಿನ್ ಉಪನಗರದಲ್ಲಿ, ಮಧ್ಯಾಹ್ನ 2 ಗಂಟೆ ಹೊತ್ತಿಗೆ ಕಾರೊಂದು ನಿಂತಿರುತ್ತದೆ. ಬಹಳ ದಿನಗಳಿಂದ ಕೋರ್ಟ್ ವಾರೆಂಟ್ ಇದ್ದರೂ ತಲೆ ತಪ್ಪಿಸಿಕೊಂಡು ಓಡಾಡುತ್ತಿರುವ ವ್ಯಕ್ತಿ ಅಲ್ಲಿಗೆ ಬಂದಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಬ್ರೂಕ್ಲಿನ್ ನಗರದ ಪೊಲೀಸರು ಮಿನ್ನಾಸೋಟಾ ನಗರ ಅಪರಾಧಿ ಹುಡುಕಾಟ ತಂಡ (Minnesota Bureau of Crime Apprehension) ಕ್ಕೆ ನೀಡುತ್ತಾರೆ. ಆ ಮಾಹಿತಿ ಆಧರಿಸಿ, ಮಿನ್ನಾಸೋಟಾ ನಗರ ಅಪರಾಧಿ ಹುಡುಕಾಟ ತಂಡದ ಸದಸ್ಯರು ಅಲ್ಲಿಗೆ ಬರುತ್ತಾರೆ, ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೊಲೀಸರ ಹೇಳಿಕೆ ಪ್ರಕಾರ, ತಾವು ಆ ಡ್ರೈವರ್ಗೆ ನಿಲ್ಲಲ್ಲಿ ಹೇಳಿದೆವು ಮತ್ತು ತಮಗೆ ಸಹಕಾರ ನೀಡಲು ಹೇಳದೆವು. ಆದರೆ, ಆತ ಇದ್ದಕ್ಕಿದ್ದಂತೆ ತನ್ನ ಕಾರನ್ನು ಸ್ಟಾರ್ಟ್ ಮಾಡಿಕೊಂಡು ಹೊರಟ. ಆಗ ಓರ್ವ ಅಧಿಕಾರಿ ಹಾರಿಸಿದ ಗುಂಡು ರೈಟ್ಗೆ ತಗುಲಿದೆ. ಆದರೆ, ಕಾರಿನ ಡ್ರೈವರ್ ಸುಮಾರು ದೂರ ಚಲಿಸಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ. ಆತನ ಜೊತಯಿದ್ದ ಓರ್ವ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ರು ತಿಳಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ, ಪೊಲೀಸ್ ಸ್ಟೇಶನ್ ಮುಂದೆ ಜಮಾಯಿಸಿದ್ದ ಕಪ್ಪು ವರ್ಣೀಯ ಜನ ಬ್ಲಾಕ್ ಲೈವ್ಸ್ ಮ್ಯಾಟರ್ ಎಂದು ಕೂಗಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಆ ರಾಜ್ಯದ ರಾಜ್ಯಪಾಲ (governor), ಟಾಮ್ ವಾಲ್ಝ ಈ ಕುರಿತು ಟ್ವೀಟ್ ಮಾಡಿ ತಾನು ಪರಿಸ್ಥತಿಯನ್ನು ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.

ಬ್ಲಾಕ್​  ಲೈವ್ಸ್ ಮ್ಯಾಟರ್ ಕೇಸು ಕಳೆದ ವರ್ಷ ಸತ್ತ ಜಾರ್ಜ್ ಫ್ಲೈಡ್ ಕುಟುಂಬಕ್ಕೆ ಈಗಾಗಲೇ 20 ಮಿಲಿಯನ್ ಡಾಲರ್ ಹಣವನ್ನು ಅಲ್ಲಿನ ಆಡಳಿತ ನೀಡಿದೆ. ಈಗ ಫ್ಲೈಡ್ ಅವರ ಸಾವಿನ ಕೇಸಿನ ವಿಚಾರಣೆ ಕೋರ್ಟ್ ನಲ್ಲಿ ಪ್ರಾರಂಭಾವಾಗಿದೆ. ಈ ಕೇಸಿನಲ್ಲಿ, ಫ್ಲಾಯ್ಡ್ನನ್ನು ಮಲಗಿಸಿ ಆತನ ಕುತ್ತಿಗೆ ಮೇಲೆ ತನ್ನ ಮೊಣಕಾಲು ಊರಿ ಒತ್ತಿದ್ದ ಕೊಂದಿರುವ ಅಧಿಕಾರಿಯ ವಿರುದ್ಧ ಅತ್ಯಂತ ತೀವ್ರತರದ ಆರೋಪ ಮಾಡಲಾಗಿದೆ.

ಇದನ್ನೂ ಓದಿ:

2020ರ ಟ್ವೀಟ್​ ಪರ್ಸನ್ ಟ್ರಂಪ್, ಟಾಪ್​ 10ರಲ್ಲಿ ಬಿಡೆನ್-ಮೋದಿಗೂ ಸ್ಥಾನ

Published On - 1:25 pm, Mon, 12 April 21

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು