ಕರ್ನಾಟಕದ ದೇವಸ್ಥಾನಗಳಿಗೆ ಶಕ್ತಿ ತುಂಬಿದ ನಾರಿಯರು, ದೇವಾಲಯಗಳ ಆದಾಯದಲ್ಲಿ ಭಾರೀ ಏರಿಕೆ

| Updated By: Rakesh Nayak Manchi

Updated on: Jul 21, 2023 | 7:54 PM

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿ ನಂತರ ಕರ್ನಾಟಕದ ಹಲವು ದೇವಾಲಯಗಳ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ. ಮ್ಯಾನ್ಯುಯಲ್ ಹುಂಡಿ ತೆರೆದರೆ ದೇವಾಲಯಗಳು ಇನ್ನಷ್ಟು ಶ್ರೀಮಂತವಾಗಲಿದೆ.

ಕರ್ನಾಟಕದ ದೇವಸ್ಥಾನಗಳಿಗೆ ಶಕ್ತಿ ತುಂಬಿದ ನಾರಿಯರು, ದೇವಾಲಯಗಳ ಆದಾಯದಲ್ಲಿ ಭಾರೀ ಏರಿಕೆ
ಶಕ್ತಿ ಯೋಜನೆ ಜಾರಿ ನಂತರ ಕರ್ನಾಟಕದ ವಿವಿಧ ದೇವಾಲಯಗಳ ಆದಾಯದಲ್ಲಿ ಹೆಚ್ಚಳ
Follow us on

ಬೆಂಗಳೂರು, ಜುಲೈ 21: ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಶಕ್ತಿ ಯೋಜನೆ (Shakti Scheme) ಜಾರಿ ನಂತರ ಕರ್ನಾಟಕದ ವಿವಿಧ ದೇವಾಲಯಗಳ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ. ಇ-ಹುಂಡಿ ಮೂಲಕವೇ ಭರ್ಜರಿ ಆದಾಯ ಬಂದಿದ್ದು, ಮ್ಯಾನ್ಯುಯಲ್ ಹುಂಡಿ ತೆರೆದರೆ ದೇವಾಲಯಗಳು ಇನ್ನಷ್ಟು ಶ್ರೀಮಂತ ಎನಿಸಿಕೊಳ್ಳಲಿವೆ.

ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ನಂತರ ಮಹಿಳೆಯರು ಹೆಚ್ಚಿನ ಸಂಖ್ಯೆಗಳಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ದೇವಸ್ಥಾನಗಳಲ್ಲಿ ಹೆಚ್ಚಿನ ಕಾಣಿಗೆ ಸಂಗ್ರಹವಾಗಿದೆ. 58 ದೇಗುಲಗಳಿಗೆ ಇ-ಹುಂಡಿ ಮೂಲಕವೇ 19 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆದಾಯದಲ್ಲಿ ಭಾರೀ ಏರಿಕೆ ಯಾಗಿದೆ. ಸದ್ಯ ಮ್ಯಾನ್ಯುಯಲ್ ಹುಂಡಿಗಳನ್ನು ತೆರೆದಿಲ್ಲ. ಒಂದೊಮ್ಮೆ ತೆರೆದರೆ ಆದಾಯದಲ್ಲಿ ಮತ್ತಷ್ಟು ಏರಿಕೆಯಾಗಲಿದೆ.

ಇದನ್ನೂ ಓದಿ: Raichur News: ಟಿಕೆಟ್ ನೀಡಲು ಸೀಟ್​ ಮೇಲೆ ಹತ್ತಿ ಕೂತ ಕಂಡಕ್ಟರ್, ಶಕ್ತಿ ಯೋಜನೆಯಿಂದ ಭಾರೀ ಫಜೀತಿ

2022ರ ಜೂನ್ 11 ರಿಂದ ಜುಲೈ 15ರ ವರೆಗೆ ಹೋಲಿಕೆ ಮಾಡಿದರೆ 2023 ರ ಜೂನ್ 11 ರಿಂದ ಜುಲೈ 15ರ ವರೆಗೆ ದೇವಸ್ಥಾನಗಳ ಆದಾಯದಲ್ಲಿ ಹೆಚ್ಚಳಕಂಡಿದೆ. ಹಾಗಿದ್ದರೆ ಇ-ಹುಂಡಿ ಮೂಲಕ ಯಾವ್ಯಾವ ದೇವಾಲಯಗಳಿಗೆ ಎಷ್ಟೆಷ್ಟು ಆದಾಯ ಸಂಗ್ರಹವಾಗಿದೆ?

ಕುಕ್ಕೆ ಸುಬ್ರಮಣ್ಯ ದೇವಾಲಯ

  • ಕಳೆದ ವರ್ಷ (ಜೂನ್ 11-15) 11.13 ಕೋಟಿ ರೂ.
  • ಈ ವರ್ಷ (ಜೂನ್ 11 – 15) 11.16 ಕೋಟಿ ರೂ.

ಮೈಸೂರಿನ ಚಾಮುಂಡೇಶ್ವರಿ

  • ಕಳೆದ ವರ್ಷ (ಜೂನ್ 11-15) 48.01 ಲಕ್ಷ ರೂ.
  • ಈ ವರ್ಷ (ಜೂನ್ 11-15) ₹3.63 ಕೋಟಿ ರೂ.

ಯಡಿಯೂರು ಸಿದ್ದಲಿಂಗೇಶ್ವರ

  • ಕಳೆದ ವರ್ಷ (ಜೂನ್ 11-15) 1.20 ಕೋಟಿ ರೂ.
  • ಈ ವರ್ಷ (ಜೂನ್ 11-15) 1.48 ಕೋಟಿ ರೂ.

ನಂಜನಗೂಡು ಶ್ರೀಕಂಠೇಶ್ವರ

  • ಕಳೆದ ವರ್ಷ (ಜೂನ್ 11-15) 1.05 ಕೋಟಿ ರೂ.
  • ಈ ವರ್ಷ (ಜೂನ್ 11-15) 1.27 ಕೋಟಿ ರೂ.

ಕೊಪ್ಪಳ ಜಿಲ್ಲೆ ಹುಲಿಗೆಮ್ಮದೇವಿ

  • ಕಳೆದ ವರ್ಷ (ಜೂನ್ 11-15) 1.02 ಕೋಟಿ ರೂ.
  • ಈ ವರ್ಷ (ಜೂನ್ 11-15) 1.41 ಕೋಟಿ ರೂ.

ಬೆಂಗಳೂರು ಬನಶಂಕರಿ

  • ಕಳೆದ ವರ್ಷ (ಜೂನ್ 11-15) 65.82 ಲಕ್ಷ ರೂ.
  • ಈ ವರ್ಷ (ಜೂನ್ 11-15) 83.64 ಲಕ್ಷ ರೂ.

ದಕ್ಷಿಣ ಕನ್ನಡ ಜಿಲ್ಲೆಯ ಮಹಾಲಿಂಗೇಶ್ವರ ದೇವಸ್ಥಾನ

  • ಕಳೆದ ವರ್ಷ (ಜೂನ್ 11-15) 43.33 ಲಕ್ಷ ರೂ.
  • ಈ ವರ್ಷ (ಜೂನ್ 11-15) 48.09 ಲಕ್ಷ ರೂ.

ಶ್ರೀರಂಗಪಟ್ಟಣ ನಿಮಿಷಾಂಬ ದೇವಾಲಯ

  • ಕಳೆದ ವರ್ಷ (ಜೂನ್ 11-15) 20.76 ಲಕ್ಷ ರೂ.
  • ಈ ವರ್ಷ (ಜೂನ್ 11-15) 27.98 ಲಕ್ಷ ರೂ.

ಕನಕಪುರದ ಕಬ್ಬಾಳಮ್ಮ

  • ಕಳೆದ ವರ್ಷ (ಜೂನ್ 11-15) 13.96 ಲಕ್ಷ ರೂ.
  • ಈ ವರ್ಷ (ಜೂನ್ 11-15) 19.64 ಲಕ್ಷ ರೂ.

ಹೀಗೆ ವಿವಿಧ ದೇವಾಲಯಗಳ ಆದಾಯದಲ್ಲಿ ಭಾರೀ ಏರಿಕೆ ಕಂಡಿದೆ. ಶಕ್ತಿ ಯೋಜನೆ ಜಾರಿಯಾದ ಒಂದು ತಿಂಗಳಲ್ಲೇ ಆದಾಯದಲ್ಲಿ ಭಾರೀ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆದಾಯ ಸಂಗ್ರಹವಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ