AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raichur News: ಟಿಕೆಟ್ ನೀಡಲು ಸೀಟ್​ ಮೇಲೆ ಹತ್ತಿ ಕೂತ ಕಂಡಕ್ಟರ್, ಶಕ್ತಿ ಯೋಜನೆಯಿಂದ ಭಾರೀ ಫಜೀತಿ

ಪ್ರಯಾಣಿಕರಿಗೆ ಟಿಕೆಟ್ ನೀಡಲು ಸ್ಥಳವಿಲ್ಲದೇ ಕೊನೆಗೆ ಸೀಟ್ ಮೇಲಿನ ರಾಡ್ ಮೇಲೆ ಕುಳಿತು ಟಿಕೆಟ್ ನೀಡಿದ್ದಾರೆ. ಸದ್ಯ ಕಂಡಕ್ಟರ್​ನ ಪಜೀತಿಯ ವಿಡಿಯೋ ವೈರಲ್ ಆಗಿದೆ.

Raichur News: ಟಿಕೆಟ್ ನೀಡಲು ಸೀಟ್​ ಮೇಲೆ ಹತ್ತಿ ಕೂತ ಕಂಡಕ್ಟರ್, ಶಕ್ತಿ ಯೋಜನೆಯಿಂದ ಭಾರೀ ಫಜೀತಿ
ಟಿಕೆಟ್ ನೀಡಲು ಸೀಟ್​ ಮೇಲೆ ಹತ್ತಿ ಕೂತ ಕಂಡಕ್ಟರ್
ಭೀಮೇಶ್​​ ಪೂಜಾರ್
| Edited By: ಆಯೇಷಾ ಬಾನು|

Updated on: Jul 20, 2023 | 3:16 PM

Share

ರಾಯಚೂರು: ಶಕ್ತಿ ಯೋಜನೆ ಹೆಸರಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಭಾಗ್ಯ ಸಿಕ್ಕಿದೆ(Free Bus Travel For Women Scheme). ಹೀಗಾಗಿ ಎಲ್ಲಾ ಸರ್ಕಾರಿ ಬಸ್​ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ಸರ್ಕಾರದ ಶಕ್ತಿ ಯೋಜನೆ ಎಫೆಕ್ಟ್​ನಿಂದಾಗಿ ರಾಯಚೂರಿನ(Raichur) ಗ್ರಾಮೀಣ ಭಾಗದ ಬಸ್​ಗಳಲ್ಲಿ ಕಂಡಕ್ಟರ್​ಗಳು ಪರದಾಡುವಂತಾಗಿದೆ. ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಪ್ರಯಾಣಿಕರಿಗೆ ಟಿಕೆಟ್ ನೀಡಲು ಹರಸಾಹಸ ಪಡುತ್ತಿರುವುದು ಕಂಡು ಬಂದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್-ಅಂಕಲಿಮಠ-ಮುದೇನೂರು ಮಾರ್ಗದಲ್ಲಿ ಬಸ್ ಫುಲ್ ರಶ್‌ ಆಗಿದೆ. ಈ ಹಿನ್ನೆಲೆ ಟಿಕೆಟ್ ಕೊಡಲಾಗದೇ ಬಸ್ ಕಂಡಕ್ಟರ್ ಪರದಾಡಿದ್ದಾರೆ. ಪ್ರಯಾಣಿಕರಿಗೆ ಟಿಕೆಟ್ ನೀಡಲು ಸ್ಥಳವಿಲ್ಲದೇ ಕೊನೆಗೆ ಸೀಟ್ ಮೇಲಿನ ರಾಡ್ ಮೇಲೆ ಕುಳಿತು ಟಿಕೆಟ್ ನೀಡಿದ್ದಾರೆ. ಸದ್ಯ ಕಂಡಕ್ಟರ್​ನ ಪಜೀತಿಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಿಗೆ ದಾವಣಗೆರೆ ಲಿಂಕ್? ಮತ್ತೊಬ್ಬ ಸಿಸಿಬಿ ವಶಕ್ಕೆ

ಮುದಗಲ್-ಮುದೇನೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಶಕ್ತಿ ಯೋಜನೆ ಜಾರಿಯಾದ ಒಂದು ತಿಂಗಳಲ್ಲಿ 16 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ.

ಜುಲೈ 4 ರಂದು 70 ಲಕ್ಷ ಮಹಿಳಾ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದು ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಭೀಮೇಶ್​​ ಪೂಜಾರ್
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More