ಕಿಡಿ ಹೊತ್ತಿಸಿದ ಮಾಧುಸ್ವಾಮಿ ಕನಕ ಕದನ, ಇಂದು ಹುಳಿಯಾರು ಬಂದ್..!

|

Updated on: Nov 21, 2019 | 10:35 AM

ತುಮಕೂರು: ಹುಳಿಯಾರು ಪಟ್ಟಣದಲ್ಲಿರುವ ಸರ್ಕಲ್​ವೊಂದಕ್ಕಿಟ್ಟಿದ್ದ ಕನಕದಾಸರ ಹೆಸರು ಮುಖಂಡರ ಮಧ್ಯೆ ಕಿಡಿ ಹೊತ್ತಿಸಿದೆ. ದಿನಕ್ಕೊಂದು ಹೊಸ ರೂಪ ಪಡೆದು ಇಂದು ಬಂದ್ ಆಚರಣೆಗೂ ಕಾರಣವಾಗಿದೆ. ಬಂದ್​ಗೆ ಕಾರಣವಾದ ‘ಸರ್ಕಲ್ ಹೆಸರು’ ವಿವಾದ: ಕುರುಬ ಸಮುದಾಯ ಮತ್ತು ಸಚಿವ ಜೆ.ಸಿ. ಮಾಧುಸ್ವಾಮಿ‌ ನಡುವಿನ ‘ಕನಕ ಸರ್ಕಲ್’ ವಿವಾದ ತಾರಕಕ್ಕೇರಿದೆ. ಶಮನವಾಗದೆ ಮತ್ತಷ್ಟು ಕಗ್ಗಂಟಾಗಿದೆ. ಸಚಿವರು ಕನಕದಾಸರಿಗೆ ಅವಮಾನಿಸಿದ್ದಾರೆ, ರಾಜೀನಾಮೆ ನೀಡ್ಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಸಭೆ ಸೇರಿ ಚರ್ಚಿಸಿ ಇಂದು ಹುಳಿಯಾರು ಬಂದ್​ಗೆ ಕರೆ ನೀಡಿದ್ದಾರೆ. […]

ಕಿಡಿ ಹೊತ್ತಿಸಿದ ಮಾಧುಸ್ವಾಮಿ ಕನಕ ಕದನ, ಇಂದು ಹುಳಿಯಾರು ಬಂದ್..!
Follow us on

ತುಮಕೂರು: ಹುಳಿಯಾರು ಪಟ್ಟಣದಲ್ಲಿರುವ ಸರ್ಕಲ್​ವೊಂದಕ್ಕಿಟ್ಟಿದ್ದ ಕನಕದಾಸರ ಹೆಸರು ಮುಖಂಡರ ಮಧ್ಯೆ ಕಿಡಿ ಹೊತ್ತಿಸಿದೆ. ದಿನಕ್ಕೊಂದು ಹೊಸ ರೂಪ ಪಡೆದು ಇಂದು ಬಂದ್ ಆಚರಣೆಗೂ ಕಾರಣವಾಗಿದೆ.

ಬಂದ್​ಗೆ ಕಾರಣವಾದ ‘ಸರ್ಕಲ್ ಹೆಸರು’ ವಿವಾದ:
ಕುರುಬ ಸಮುದಾಯ ಮತ್ತು ಸಚಿವ ಜೆ.ಸಿ. ಮಾಧುಸ್ವಾಮಿ‌ ನಡುವಿನ ‘ಕನಕ ಸರ್ಕಲ್’ ವಿವಾದ ತಾರಕಕ್ಕೇರಿದೆ. ಶಮನವಾಗದೆ ಮತ್ತಷ್ಟು ಕಗ್ಗಂಟಾಗಿದೆ. ಸಚಿವರು ಕನಕದಾಸರಿಗೆ ಅವಮಾನಿಸಿದ್ದಾರೆ, ರಾಜೀನಾಮೆ ನೀಡ್ಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಸಭೆ ಸೇರಿ ಚರ್ಚಿಸಿ ಇಂದು ಹುಳಿಯಾರು ಬಂದ್​ಗೆ ಕರೆ ನೀಡಿದ್ದಾರೆ.

ಇತರೆ ಸಮಾಜ ಮುಖಂಡರು ಬಂದ್​ಗೆ ಸಾಥ್ ನೀಡ್ತಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೂ ಅಂಗಡಿ ಮುಂಗಟ್ಟು ಮುಚ್ಚಲಿದ್ದಾರೆ. ಜತೆಗೆ ಪ್ರತಿಭಟನಾ ಱಲಿ ಹಮ್ಮಿಕೊಳ್ಳಲಾಗಿದೆ.

ಸರ್ಕಾರದ ವತಿಯಿಂದ ಕನಕ ವೃತ್ತ ನಿರ್ಮಿಸಲಾಗುವುದು ಎಂದು ಸಿಎಂ ಬಿಎಸ್​ವೈ ರಿಲೀಸ್ ಮಾಡಿರೋ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹುಳಿಯಾರಿನಲ್ಲಿ ಸರ್ಕಲ್ ನಿರ್ಮಿಸಿ ಕನಕದಾಸ ವೃತ್ತ ಎಂದು ನಾಮಕರಣ ಮಾಡಲಾಗುವುದು. ವೃತ್ತಕ್ಕೆ ಕನಕದಾಸರ ಹೆಸರಿಡೋ ಗೊಂದಲ ಅನಾವಶ್ಯಕ.

ಸರ್ಕಲ್​ಗೆ ಕನಕ ಎಂದು ಹೆಸರಿಡಲು ಯಾವ ಅಭ್ಯಂತರವೂ ಇಲ್ಲ. ಬಗ್ಗೆ ಸಚಿವ ಮಾಧುಸ್ವಾಮಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಈ ಸಮಯದಲ್ಲಿ ಯಾರು ಉದ್ವೇಗಕ್ಕೆ ಒಳಗಾಗೋದು ಬೇಡ. ಬೈ ಎಲೆಕ್ಷನ್ ಮುಗಿದ ಬಳಿಕ ಸರ್ಕಾರದಿಂದ ವೃತ್ತ ನಿರ್ಮಿಸಲಾಗುವುದು ಎಂದು ಬಿಎಸ್​ವೈ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

Published On - 7:32 am, Thu, 21 November 19