AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುವ ಮಕ್ಕಳಿಗೂ ಹಾರ್ಟ್​ ಪ್ರಾಬ್ಲಂ, ಇದಕ್ಕೆ ಪೋಷಕರೇ ಕಾರಣ!

ಬೆಂಗಳೂರು: ಹಾರ್ಟ್ ಚೆನ್ನಾಗಿದ್ರೆ ಓಕೆ. ಒಂದು ಸಾರಿ ಬಡಿತ ನಿಂತು ಹೋಯ್ತೋ ಮುಗಿದೇ ಹೋಯ್ತು. ಅದ್ರಲ್ಲೂ ಹಾರ್ಟ್ ಅಟ್ಯಾಕ್ ಅದ್ಯಾರಿಗೆ ಬರುತ್ತೆ. ಯಾವ ಟೈಂನಲ್ಲಿ ಬರುತ್ತೆ ಗೊತ್ತಾಗಲ್ಲ. ಇದೀಗ ಸಿಲಿಕಾನ್ ಸಿಟಿ ಮಂದಿಯನ್ನ ಹಾರ್ಟ್ ಪ್ರಾಬ್ಲಂ ಕಾಡ್ತಿದೆ. ಏರಿಕೆಯಾಗ್ತಿದೆ ಹೃದಯ ಸಂಬಂಧಿ ಕಾಯಿಲೆ! ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ಕಾಯಿಲೆಗಳು ಅಟ್ಯಾಕ್ ಮಾಡ್ತಿವೆ. ಬೆಂಗಳೂರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿದೆ. ವೈದ್ಯರ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಹಾರ್ಟ್ ಡಿಸೀಸ್​ಗಳು […]

ಹುಟ್ಟುವ ಮಕ್ಕಳಿಗೂ ಹಾರ್ಟ್​ ಪ್ರಾಬ್ಲಂ, ಇದಕ್ಕೆ ಪೋಷಕರೇ ಕಾರಣ!
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 20, 2019 | 10:43 PM

Share

ಬೆಂಗಳೂರು: ಹಾರ್ಟ್ ಚೆನ್ನಾಗಿದ್ರೆ ಓಕೆ. ಒಂದು ಸಾರಿ ಬಡಿತ ನಿಂತು ಹೋಯ್ತೋ ಮುಗಿದೇ ಹೋಯ್ತು. ಅದ್ರಲ್ಲೂ ಹಾರ್ಟ್ ಅಟ್ಯಾಕ್ ಅದ್ಯಾರಿಗೆ ಬರುತ್ತೆ. ಯಾವ ಟೈಂನಲ್ಲಿ ಬರುತ್ತೆ ಗೊತ್ತಾಗಲ್ಲ. ಇದೀಗ ಸಿಲಿಕಾನ್ ಸಿಟಿ ಮಂದಿಯನ್ನ ಹಾರ್ಟ್ ಪ್ರಾಬ್ಲಂ ಕಾಡ್ತಿದೆ.

ಏರಿಕೆಯಾಗ್ತಿದೆ ಹೃದಯ ಸಂಬಂಧಿ ಕಾಯಿಲೆ! ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ಕಾಯಿಲೆಗಳು ಅಟ್ಯಾಕ್ ಮಾಡ್ತಿವೆ. ಬೆಂಗಳೂರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿದೆ. ವೈದ್ಯರ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಹಾರ್ಟ್ ಡಿಸೀಸ್​ಗಳು ಶೇಖಡಾ 15 ರಿಂದ 20 ಪರ್ಸೆಂಟ್ ಹೆಚ್ಚಾಗ್ತಿದೆ. ಅದರಲ್ಲೂ ಮಕ್ಕಳಲ್ಲಿ ಹಾಗೂ ಯುವ ಪೀಳಿಗೆಯಲ್ಲಿ ಹಾರ್ಟ್ ಹೆಚ್ಚಾಗಿ ಡ್ಯಾಮೇಜ್ ಆಗ್ತಿರೋದು ಆತಂಕಕ್ಕೆ ಕಾರಣವಾಗಿದೆ.

ಹುಟ್ಟುವ ಮಕ್ಕಳಿಗೂ ಹಾರ್ಟ್ ಪ್ರಾಬ್ಲಂ! ಇತ್ತೀಚಿನ ದಿನಗಳಲ್ಲಿ ಹುಟ್ಟುವ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಿ ಕಾಡುತ್ತಿದೆ. ಈಗಿನ ಮಾಡ್ರನ್ ಯುಗದಲ್ಲಿ ತಾಯಂದಿರ ಲೈಫ್ ಸ್ಟೈಲ್​ ಕೂಡ ಮುಂದೆ ಹುಟ್ಟೋ ಮಕ್ಕಳ ಹಾರ್ಟ್ ಡಿಸೀಸ್​​ಗಳಿಗೆ ಕಾರಣವಾಗುತ್ತಿದೆ.​ ಹೆಣ್ಣು ಮಕ್ಕಳು ಇತ್ತೀಚೆಗೆ ಕುಡಿತ, ಸಿಗರೇಟ್, ಡ್ರಗ್ಸ್ ಸೇವನೆಯಿಂದ ಮಕ್ಕಳಿಗೆ ಸಮಸ್ಯೆಗಳು ಎದುರಾಗಲಿದೆ.

30 ವರ್ಷ ದಾಟಿದ ನಂತರ ಮದುವೆಯಾಗುವೆಯಾದರೆ ಮಕ್ಕಳ ಹಾರ್ಟ್​ಗೆ ತೊಂದರೆಯಾಗಲಿದೆ. ಒಂದು ವೇಳೆ ಗರ್ಭಿಣಿಯರು ಸಿಕ್ಕ ಸಿಕ್ಕ ಮೆಡಿಸನ್ ತೆಗೆದುಕೊಂಡರೂ ಹೃದಯ ಸಂಬಂಧಿ ಕಾಯಿಲೆ ಅಟ್ಯಾಕ್ ಮಾಡಲಿದೆ. ವಂಶ ಪಾರಂಪರ್ಯದಿಂದಲೂ ಕೆಲ ಮಕ್ಕಳಿಗೆ ಹೃದಯದ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂದು ಡಾಕ್ಟರ್ಸ್ ನಡೆಸಿರೋ ಸಮೀಕ್ಷೆ ಹೇಳಿದೆ.

ಇನ್ನೊಂದು ಶಾಕಿಂಗ್ ವಿಷ್ಯ ಅಂದ್ರೆ, ಪೋಷಕರು ಸಿಗರೇಟ್, ಮದ್ಯಸೇವನೆ ಸೇರಿದಂತೆ ವಿವಿಧ ಚಟಕ್ಕೆ ದಾಸರಾಗಿದ್ರೆ ಮಕ್ಕಳಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಒಂದು ಚೂರು ನಿರ್ಲಕ್ಷ್ಯ ಮಾಡಿದ್ರೂ ಜೀವಕ್ಕೆ ಕುತ್ತು ಬರಲಿದೆ ಅಂತಾರೆ ಹಿರಿಯ ವೈದ್ಯರು.

Published On - 10:42 pm, Wed, 20 November 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ