ಕಿಡಿ ಹೊತ್ತಿಸಿದ ಮಾಧುಸ್ವಾಮಿ ಕನಕ ಕದನ, ಇಂದು ಹುಳಿಯಾರು ಬಂದ್..!
ತುಮಕೂರು: ಹುಳಿಯಾರು ಪಟ್ಟಣದಲ್ಲಿರುವ ಸರ್ಕಲ್ವೊಂದಕ್ಕಿಟ್ಟಿದ್ದ ಕನಕದಾಸರ ಹೆಸರು ಮುಖಂಡರ ಮಧ್ಯೆ ಕಿಡಿ ಹೊತ್ತಿಸಿದೆ. ದಿನಕ್ಕೊಂದು ಹೊಸ ರೂಪ ಪಡೆದು ಇಂದು ಬಂದ್ ಆಚರಣೆಗೂ ಕಾರಣವಾಗಿದೆ. ಬಂದ್ಗೆ ಕಾರಣವಾದ ‘ಸರ್ಕಲ್ ಹೆಸರು’ ವಿವಾದ: ಕುರುಬ ಸಮುದಾಯ ಮತ್ತು ಸಚಿವ ಜೆ.ಸಿ. ಮಾಧುಸ್ವಾಮಿ ನಡುವಿನ ‘ಕನಕ ಸರ್ಕಲ್’ ವಿವಾದ ತಾರಕಕ್ಕೇರಿದೆ. ಶಮನವಾಗದೆ ಮತ್ತಷ್ಟು ಕಗ್ಗಂಟಾಗಿದೆ. ಸಚಿವರು ಕನಕದಾಸರಿಗೆ ಅವಮಾನಿಸಿದ್ದಾರೆ, ರಾಜೀನಾಮೆ ನೀಡ್ಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಸಭೆ ಸೇರಿ ಚರ್ಚಿಸಿ ಇಂದು ಹುಳಿಯಾರು ಬಂದ್ಗೆ ಕರೆ ನೀಡಿದ್ದಾರೆ. […]
ತುಮಕೂರು: ಹುಳಿಯಾರು ಪಟ್ಟಣದಲ್ಲಿರುವ ಸರ್ಕಲ್ವೊಂದಕ್ಕಿಟ್ಟಿದ್ದ ಕನಕದಾಸರ ಹೆಸರು ಮುಖಂಡರ ಮಧ್ಯೆ ಕಿಡಿ ಹೊತ್ತಿಸಿದೆ. ದಿನಕ್ಕೊಂದು ಹೊಸ ರೂಪ ಪಡೆದು ಇಂದು ಬಂದ್ ಆಚರಣೆಗೂ ಕಾರಣವಾಗಿದೆ.
ಬಂದ್ಗೆ ಕಾರಣವಾದ ‘ಸರ್ಕಲ್ ಹೆಸರು’ ವಿವಾದ: ಕುರುಬ ಸಮುದಾಯ ಮತ್ತು ಸಚಿವ ಜೆ.ಸಿ. ಮಾಧುಸ್ವಾಮಿ ನಡುವಿನ ‘ಕನಕ ಸರ್ಕಲ್’ ವಿವಾದ ತಾರಕಕ್ಕೇರಿದೆ. ಶಮನವಾಗದೆ ಮತ್ತಷ್ಟು ಕಗ್ಗಂಟಾಗಿದೆ. ಸಚಿವರು ಕನಕದಾಸರಿಗೆ ಅವಮಾನಿಸಿದ್ದಾರೆ, ರಾಜೀನಾಮೆ ನೀಡ್ಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಸಭೆ ಸೇರಿ ಚರ್ಚಿಸಿ ಇಂದು ಹುಳಿಯಾರು ಬಂದ್ಗೆ ಕರೆ ನೀಡಿದ್ದಾರೆ.
ಇತರೆ ಸಮಾಜ ಮುಖಂಡರು ಬಂದ್ಗೆ ಸಾಥ್ ನೀಡ್ತಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೂ ಅಂಗಡಿ ಮುಂಗಟ್ಟು ಮುಚ್ಚಲಿದ್ದಾರೆ. ಜತೆಗೆ ಪ್ರತಿಭಟನಾ ಱಲಿ ಹಮ್ಮಿಕೊಳ್ಳಲಾಗಿದೆ.
ಸರ್ಕಾರದ ವತಿಯಿಂದ ಕನಕ ವೃತ್ತ ನಿರ್ಮಿಸಲಾಗುವುದು ಎಂದು ಸಿಎಂ ಬಿಎಸ್ವೈ ರಿಲೀಸ್ ಮಾಡಿರೋ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹುಳಿಯಾರಿನಲ್ಲಿ ಸರ್ಕಲ್ ನಿರ್ಮಿಸಿ ಕನಕದಾಸ ವೃತ್ತ ಎಂದು ನಾಮಕರಣ ಮಾಡಲಾಗುವುದು. ವೃತ್ತಕ್ಕೆ ಕನಕದಾಸರ ಹೆಸರಿಡೋ ಗೊಂದಲ ಅನಾವಶ್ಯಕ.
ಸರ್ಕಲ್ಗೆ ಕನಕ ಎಂದು ಹೆಸರಿಡಲು ಯಾವ ಅಭ್ಯಂತರವೂ ಇಲ್ಲ. ಬಗ್ಗೆ ಸಚಿವ ಮಾಧುಸ್ವಾಮಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಈ ಸಮಯದಲ್ಲಿ ಯಾರು ಉದ್ವೇಗಕ್ಕೆ ಒಳಗಾಗೋದು ಬೇಡ. ಬೈ ಎಲೆಕ್ಷನ್ ಮುಗಿದ ಬಳಿಕ ಸರ್ಕಾರದಿಂದ ವೃತ್ತ ನಿರ್ಮಿಸಲಾಗುವುದು ಎಂದು ಬಿಎಸ್ವೈ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
Published On - 7:32 am, Thu, 21 November 19