ಜೇನಿಗೆ ಆಸೆ ಪಟ್ಟು ಕಲ್ಲೆಸೆದರೆ ಜೇನಿನ ದಾಳಿಗೆ ಸಿದ್ಧರಾಗಿ; ಹೆಚ್.ಡಿ.ಕುಮಾರಸ್ವಾಮಿಗೆ ಅಂಬಿ ಅಭಿಮಾನಿಗಳಿಂದ ಎಚ್ಚರಿಕೆ

| Updated By: sandhya thejappa

Updated on: Jul 15, 2021 | 11:59 AM

ಅವಹೇಳನಕಾರಿ ಮಾತುಗಳನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ ಎಂದು ಅಂಬಿ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

ಜೇನಿಗೆ ಆಸೆ ಪಟ್ಟು ಕಲ್ಲೆಸೆದರೆ ಜೇನಿನ ದಾಳಿಗೆ ಸಿದ್ಧರಾಗಿ; ಹೆಚ್.ಡಿ.ಕುಮಾರಸ್ವಾಮಿಗೆ ಅಂಬಿ ಅಭಿಮಾನಿಗಳಿಂದ  ಎಚ್ಚರಿಕೆ
ಎಚ್ಚರಿಕೆ ನೀಡಿದ ಅಂಬರೀಶ್ ಅಭಿಮಾನಿಗಳು
Follow us on

ಮೈಸೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ನಾಯಕರ ವಾಕ್ಸಮರಕ್ಕೆ ಸಂಬಂಧಿಸಿ ಜೆಡಿಎಸ್ ನಾಯಕರಿಗೆ ಅಂಬರೀಶ್ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಅವಹೇಳನಕಾರಿ ಮಾತುಗಳನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ ಎಂದು ಅಂಬಿ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.ಜೇನಿಗೆ ಆಸೆ ಪಟ್ಟು ಕಲ್ಲು ಎಸೆದರೆ, ಜೇನಿನ ದಾಳಿಗೆ ಸಿದ್ಧರಾಗಿ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬರೀಶ್ ಅಭಿಮಾನಿ ಸಂಘದ ಅಧ್ಯಕ್ಷ ನಂದೀಶ್ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. 

ಜೆಡಿಎಸ್ ಕಾರ್ಯಕರ್ತನಿಂದ ಹೆಚ್​ಡಿಕೆಗೆ ಎಚ್ಚರಿಕೆ
ಜೊತೆಗೆ ರಾಜಕೀಯಕ್ಕಾಗಿ ಅಂಬರೀಶ್ ಹೆಸರಿಗೆ ಕಳಂಕ ತರಬೇಡಿ. ಈಗಾಗಲೇ ನಿಮ್ಮ ನಡೆಯಿಂದ ಪಕ್ಷಕ್ಕೆ ನಷ್ಟ ಉಂಟಾಗಿದೆ. ಹೀಗೆ ಮುಂದುವರಿದರೆ ನಮ್ಮದೇ ಪಕ್ಷದಲ್ಲಿರುವ ಅಂಬರೀಶ್ ಅಭಿಮಾನಿಗಳ ಬಂಡಾಯಕ್ಕೆ ಕಾರಣವಾಗುತ್ತೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಬನ್ನೂರಿನಲ್ಲಿ ಜೆಡಿಎಸ್ ರೈತದಳ ಅಧ್ಯಕ್ಷ ಗಿರೀಶ್ ಹೇಳಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ವಿರುದ್ಧ ಪ್ರತಿಭಟಿಸಿದ್ದ ಅಭಿಮಾನಿಗಳು
ಸುಮಲತಾ ಒಬ್ಬರೇ ಅಲ್ಲ. ಅವರ ಜೊತೆಗೆ ನಾವಿದ್ದೇವೆ. ಕುಮಾರಸ್ವಾಮಿ ಮನೆ ಮುಂದೆ ನಮಗೆ ಪ್ರೊಟೆಸ್ಟ್ ಮಾಡೋಕೆ ಕೆಪಾಸಿಟಿ ಇಲ್ವಾ? ಎಂದು ಅಂಬಿ ಅಭಿಮಾನಿಗಳು ಜುಲೈ 11 ರಂದು ಅಂಬಿ ಸ್ಮಾರಕದ ಬಳಿ ಪ್ರತಿಭಟನೆಗೆ ಮುಂದಾಗಿದ್ದರು. ಅಂಬರೀಶ್ ಇದ್ದಾಗ ಯಾರು ಮಾತನಾಡುತ್ತಿರಲಿಲ್ಲ. ಅವರ ಬಗ್ಗೆ ಮಾತನಾಡುವ ನೈತಿಕತೆ ಅವರಗಿಲ್ಲ ಎಂದು ಚಂದ್ರಶೇಖರ್, ಕುಮಾರಸ್ವಾಮಿ ಮತ್ತು ಶ್ರೀಕಂಠಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ

ಏನಮ್ಮಾ ಮಂಡ್ಯ ಗಲಾಟೆ ಎಂದ ಸಿದ್ದರಾಮಯ್ಯಗೆ ಹೀಗೆ ನಡೀತಾ ಇದೆ ಎಂದ ಸುಮಲತಾ; ನಡುವೆ ಹಾಸ್ಯ ಚಟಾಕಿ ಹಾರಿಸಿದ ಈಶ್ವರಪ್ಪ

ತಾ.ಪಂ, ಜಿ.ಪಂ ಚುನಾವಣೆಗೆ JDSನಿಂದ ಪಕ್ಷ ಸಂಘಟನೆ, ಇಂದಿನಿಂದ 3 ದಿನಗಳ ಕಾಲ ಸರಣಿ ಸಭೆ

(Humiliating words should be stopped immediately, if not Ambi fans warned JDS that we will fight state wide)

Published On - 11:30 am, Thu, 15 July 21