ಹನುಮನ ಅನುಗ್ರಹ ಇದ್ದರೆ ಖಂಡಿತ ಸಚಿವನಾಗುತ್ತೇನೆ.. ಲಾಬಿ ಮಾಡಲ್ಲ: ಶಾಸಕ ಸೋಮಶೇಖರ ರೆಡ್ಡಿ
ತಮ್ಮ ಪುತ್ರ ರಾಜಕೀಯಕ್ಕೆ ಬರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸೋಮಶೇಖರ ರೆಡ್ಡಿ, ನನ್ನ ಪುತ್ರ ರಾಜಕೀಯಕ್ಕೆ ಬರೋದು ನನಗಿಷ್ಟವಿಲ್ಲ. ಆದರೆ ಅವನು ರಾಜಕೀಯಕ್ಕೆ ಬರುವ ಇಚ್ಛನೆಯನ್ನು ವ್ಯಕ್ತಪಡಿಸಿದ್ದಾನೆ ಎಂದು ಹೇಳಿದರು.
ಬಳ್ಳಾರಿ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪುತ್ರನೊಂದಿಗೆ ದೆಹಲಿಗೆ ತೆರಳಿರುವ ಬೆನ್ನಲ್ಲೇ ಸಚಿವಾಕಾಂಕ್ಷಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ದೆಹಲಿ ತಲುಪಿರುವ ಯಡಿಯೂರಪ್ಪ ಕರ್ನಾಟಕ ಭವನಕ್ಕೆ ತೆರಳಿದ್ದಾರೆ.
ಇದೇ ಹೊತ್ತಲ್ಲಿ ಸಚಿವ ಸ್ಥಾನ ಸಿಗುವ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಸೋಮಶೇಖರ ರೆಡ್ಡಿ, ನಾನು ಮಂತ್ರಿಗಿರಿಗಾಗಿ ಯಾವ ಕಾರಣಕ್ಕೂ ಲಾಬಿ ಮಾಡಲ್ಲ. ಕಾಸಪುರ ಹನುಮನ ಅನುಗ್ರಹ ದೊರೆತರೆ ಖಂಡಿತವಾಗಿಯೂ ಸಚಿವ ಸ್ಥಾನ ನನಗೆ ಸಿಕ್ಕೇ ಸಿಗುತ್ತದೆ. ಪಕ್ಷದ ಹೈಕಮಾಂಡ್ ಗುರುತಿಸಿ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ನನಗೆ ಇಷ್ಟ ಇಲ್ಲ ! ಇನ್ನು ತಮ್ಮ ಪುತ್ರ ರಾಜಕೀಯಕ್ಕೆ ಬರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸೋಮಶೇಖರ ರೆಡ್ಡಿ, ನನ್ನ ಪುತ್ರ ರಾಜಕೀಯಕ್ಕೆ ಬರೋದು ನನಗಿಷ್ಟವಿಲ್ಲ. ಆದರೆ ಅವನು ರಾಜಕೀಯಕ್ಕೆ ಬರುವ ಇಚ್ಛನೆಯನ್ನು ವ್ಯಕ್ತಪಡಿಸಿದ್ದಾನೆ. ಹಾಗೇ ಮಹಾನಗರ ಪಾಲಿಕೆಯ ಮುಂದಿನ ಚುನಾವಣೆಯಲ್ಲಿ ಆತ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದೂ ಹೇಳಿದ್ದಾರೆ. ಹಾಗೇ, ಬಳ್ಳಾರಿ ನಗರಕ್ಕೆ ಸ್ಮಾರ್ಟ್ ಸಿಟಿ ಗರಿ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಕ್ರಾಂತಿಗೂ ಮುನ್ನವೇ ಸಂಪುಟ ವಿಸ್ತರಣೆಯಾಗುತ್ತಾ? ಇಂದು ದೆಹಲಿಗೆ ಹಾರಲಿದ್ದಾರೆ ಸಿಎಂ ಯಡಿಯೂರಪ್ಪ..
Published On - 12:05 pm, Sun, 10 January 21