ಅಣ್ಣಮ್ಮನ ಆಶೀರ್ವಾದದಿಂದ ಕೊರೊನಾ ಕಡಿಮೆಯಾಗುವ ನಂಬಿಕೆ ಇದೆ, ನಿಯಮ ಪಾಲನೆ ಮಾಡದಿದ್ದರೆ ಕಠಿಣ ಕ್ರಮ: ಯಡಿಯೂರಪ್ಪ

| Updated By: Digi Tech Desk

Updated on: May 07, 2021 | 9:19 AM

Karnataka Lockdown: ರಾಜ್ಯದಲ್ಲಿ ಸರಿಯಾಗಿ ಲಾಕ್‌ಡೌನ್ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಬಿಗಿಯಾದ ಕ್ರಮ ಅನಿವಾರ್ಯವಾಗಬಹುದು. ಆದರೆ, ಅಣ್ಣಮ್ಮನ ಆಶೀರ್ವಾದದಿಂದ ಕೊರೊನಾ ಕಡಿಮೆಯಾಗಿ, ಜನ ನೆಮ್ಮದಿಯಿಂದ ಜೀವನ ಮಾಡುತ್ತಾರೆಂಬ ನಂಬಿಕೆ ಇದೆ: ಮುಖ್ಯಮಂತ್ರಿ ಯಡಿಯೂರಪ್ಪ

ಅಣ್ಣಮ್ಮನ ಆಶೀರ್ವಾದದಿಂದ ಕೊರೊನಾ ಕಡಿಮೆಯಾಗುವ ನಂಬಿಕೆ ಇದೆ, ನಿಯಮ ಪಾಲನೆ ಮಾಡದಿದ್ದರೆ ಕಠಿಣ ಕ್ರಮ: ಯಡಿಯೂರಪ್ಪ
ಬಿ.ಎಸ್​.ಯಡಿಯೂರಪ್ಪ
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿದ್ದು, ಸೋಂಕು ತಡೆಗಟ್ಟುವುದಕ್ಕೆ ರಾಜ್ಯ ಸರ್ಕಾರ ಲಾಕ್​ಡೌನ್ ಮಾದರಿಯ ಕರ್ಫ್ಯೂ ಹೇರಿಕೆ ಮಾಡಿದೆ. ಅಷ್ಟಾದರೂ ಜನರು ಸರಿಯಾಗಿ ನಿಯಮ ಪಾಲನೆ ಮಾಡುತ್ತಿಲ್ಲವಾದ್ದರಿಂದ ಆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಸರಿಯಾಗಿ ಲಾಕ್‌ಡೌನ್ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಬಿಗಿಯಾದ ಕ್ರಮ ಅನಿವಾರ್ಯವಾಗಬಹುದು ಎಂದಿದ್ದಾರೆ. ಇದೇ ವೇಳೆ, ಅಣ್ಣಮ್ಮನ ಆಶೀರ್ವಾದದಿಂದ ಕೊರೊನಾ ಕಡಿಮೆಯಾಗಿ, ಜನ ನೆಮ್ಮದಿಯಿಂದ ಜೀವನ ಮಾಡುತ್ತಾರೆಂಬ ನಂಬಿಕೆ ಇದೆ ಎಂಬ ಆಶಾವಾದದ ಮಾತುಗಳನ್ನೂ ಆಡಿದ್ದಾರೆ.

ಕರ್ನಾಟಕದಲ್ಲಿ ಎರಡನೇ ಅಲೆ ಹತೋಟಿಗೆ ಬರಬೇಕೆಂದರೆ ಸಂಪೂರ್ಣ ಲಾಕ್​ಡೌನ್ ಅತ್ಯಗತ್ಯ ಎಂದು ಅನೇಕ ತಜ್ಞರು ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಬಿಗಿಯಾದ ಕ್ರಮ ಜಾರಿ ಮಾಡುವ ಬಗ್ಗೆ ಇಂದು ಅಥವಾ ನಾಳೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿರುವುದು ಪೂರ್ಣ ಪ್ರಮಾಣದ ಲಾಕ್​ಡೌನ್​ ಹೇರುವ ಕುರಿತಾದ ಮುನ್ಸೂಚನೆಯಾ ಎಂಬ ಅನುಮಾನ ಮೂಡಿಸಿದೆ.

ತೇಜಸ್ವಿ ಸೂರ್ಯ ಬಗ್ಗೆ ಹಗುರವಾಗಿ ಮಾತನಾಡಬಾರದು
ಬಿಬಿಎಂಪಿ ಬೆಡ್ ಬ್ಲಾಕಿಂಗ್ ದಂಧೆಯ ಬಗ್ಗೆ ಧ್ವನಿ ಎತ್ತಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸರ್ಕಾರದ ಪರವಾಗಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಹಗರಣವನ್ನು ಬೆಳಕಿಗೆ ತಂದಿರುವುದು ಉತ್ತಮ ಕಾರ್ಯ ಎಂದಿದ್ದಾರೆ. ಜತೆಗೆ, ತೇಜಸ್ವಿ ಸೂರ್ಯ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆ ಹಾಗೂ ದೂಷಣೆಗಳ ಬಗ್ಗೆ ಪ್ರತಿಕ್ರಿಯಿಸಿ, ಅವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:
Covid-19 Karnataka Update: ಕರ್ನಾಟಕದಲ್ಲಿ ಇಂದು ಒಂದೇ ದಿನ 49,058 ಜನರಲ್ಲಿ ಕೊರೊನಾ ಸೋಂಕು, 328 ಜನರು ನಿಧನ 

ಕೋಮು ವೈಷಮ್ಯ ಆರೋಪ; ತೇಜಸ್ವಿ ಸೂರ್ಯ ಹಾಗೂ ಮೂವರು ಶಾಸಕರ ವಿರುದ್ಧ ಜೆಡಿಎಸ್​ ಯುವ ನಾಯಕಿಯಿಂದ ದೂರು

Published On - 9:00 am, Fri, 7 May 21