AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈವೆಯಲ್ಲಿ ನಿಂತು ಕಳ್ಳತನ ಮಾಡುತ್ತಿದ್ದ ದರೋಡೆಕೊರರ ಬಂಧನ; ಪೊಲೀಸರ ಕಾರ್ಯಾಚರಣೆಗೆ ಜನರಿಂದ ಮೆಚ್ಚುಗೆ

ಬಂಧಿತರನ್ನ ಹುಬ್ಬಳ್ಳಿಯ ಸೆಟ್ಲ್​ಮೆಂಟ್ ನಿವಾಸಿ ಶ್ರೀನಿವಾಸ ತಿರುಪತಿ, ಸಿದ್ಧಾರ್ಥ್ ನವಲಗುಂದ, ಸುಧಾಕರ್ ಗಬ್ಬೂರ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ಬುಲೆಟ್ ಬೈಕ್, 7,500ರೂಪಾಯಿ ನಗದು ಸೇರಿದಂತೆ ಒಂದು ಏರ್ ಗನ್, ಒಂದು ಕತ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಹೈವೆಯಲ್ಲಿ ನಿಂತು ಕಳ್ಳತನ ಮಾಡುತ್ತಿದ್ದ ದರೋಡೆಕೊರರ ಬಂಧನ; ಪೊಲೀಸರ ಕಾರ್ಯಾಚರಣೆಗೆ ಜನರಿಂದ ಮೆಚ್ಚುಗೆ
ಬಂಧಿತ ಆರೋಪಿಗಳು
preethi shettigar
|

Updated on: May 07, 2021 | 11:27 AM

Share

ಹುಬ್ಬಳ್ಳಿ: ಇಡೀ ದೇಶವೇ ಕೊರೊನಾ ಎರಡನೇ ಅಲೆಗೆ ನಲುಗಿದ್ದು, ರಾಜ್ಯದಾದ್ಯಂತ ಲಾಕ್​ಡೌನ್ ಘೋಷಿಸಲಾಗಿದೆ. ಈ ನಡುವೆ ಅಗತ್ಯ ಸೇವೆಗಳ ಪೂರೈಕೆಗಾಗಿ ಗೂಡ್ಸ್ ವಾಹನಗಳ ಓಡಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗುಂಪೊಂದು ಹೈವೆಯಲ್ಲಿ ನಿಂತು ಜೀವ ಬೇದರಿಕೆ ಹಾಕಿ ಹಣ ವಸೂಲಿ ಮಾಡುತ್ತಿತ್ತು. ಹಣ ನೀಡದೆ ಇದ್ದರೆ ಅಂತವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿತ್ತು. ಸದ್ಯ ಹಾವೇರಿ ಪೊಲೀಸರು ಈ ಕೃತ್ಯಕ್ಕೆ ಪೂರ್ಣ ವಿರಾಮ ಹಾಕಿದ್ದು, ಕಳ್ಳರ ಗುಂಪನ್ನು ಬಂಧಿಸಿದೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯ ಬೆಳಗಲಿ ಕ್ರಾಸ್ ಬಳಿಯಲ್ಲಿ ರಾತ್ರಿ ವೇಳೆ ಶಿರಾಜ್ ಕೋಳೂರ ಹಾಗೂ ಆತನ ಸ್ನೇಹಿತರಿಗೆ ಮೂವರು ಸುಲಿಗೆಕೋರರು ಚಾಕುವಿನಿಂದ ಹೊಡೆದು, ಗನ್ ತೋರಿಸಿ ಕಳ್ಳತನ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹುಬ್ಬಳ್ಳಿ ಗ್ರಾಮೀಣ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಿದ್ದರು. ಅದರ ಫಲವಾಗಿ ಎರಡು ದಿನ ಕಳೆಯುವಷ್ಟರಲ್ಲಿ ಮೂವರು ಸುಲಿಗೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನ ಹುಬ್ಬಳ್ಳಿಯ ಸೆಟ್ಲ್​ಮೆಂಟ್ ನಿವಾಸಿ ಶ್ರೀನಿವಾಸ ತಿರುಪತಿ, ಸಿದ್ಧಾರ್ಥ್ ನವಲಗುಂದ, ಸುಧಾಕರ್ ಗಬ್ಬೂರ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ಬುಲೆಟ್ ಬೈಕ್, 7,500ರೂಪಾಯಿ ನಗದು ಸೇರಿದಂತೆ ಒಂದು ಏರ್ ಗನ್, ಒಂದು ಕತ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೂ ಬಂಧಿತ ಆರೋಪಿಯಲ್ಲಿ ಒಬ್ಬ ರೌಡಿಶೀಟರ್ ಆಗಿರುವುದು ತನಿಖೆಯ ನಂತರ ಬೆಳಕಿಗೆ ಬಂದಿದೆ. ಹೀಗಾಗಿ ಇವರು ಕೇವಲ ಈ ಒಂದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಅಥವಾ ಇನ್ನು ಹಲವು ದರೊಡೆ ಮಾಡಿದ್ದಾರಾ ಎನ್ನುವ ಬಗ್ಗೆಯು ತನೀಖೆ ನಡೆಯುತ್ತಿದೆ ಎಂದು ಧಾರವಾಡ ಎಸ್​ಪಿ ಪಿ.ಕೃಷ್ಣಕಾಂತ್ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ರಾತ್ರಿಯಲ್ಲಿ ಹೈವೆ ಮೇಲೆ ನಿಂತು ರಾಬರಿ ಮಾಡುತ್ತಿದ್ದ ಕಳ್ಳರ ಗುಂಪನ್ನು ಬಂಧಿಸಲಾಗಿದೆ. ಮೂರು ಜನರ ಕಳ್ಳರ ತಂಡದಿಂದ ರಾಬರಿ ಮಾಡುತ್ತಿದ್ದ ಮಾಹಿತಿ ಲಭ್ಯವಾದ ಬೆನ್ನಲ್ಲೇ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸಾರ್ವಜನಿಕರು ಭಯಪಡದೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಒಟ್ಟಿನಲ್ಲಿ ಲಾಕ್​ಡೌನ್ ಮಧ್ಯದಲ್ಲಿಯೂ ಜನರ ಸುಲಿಗೆಗಿಳಿದ್ದ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ವಿಚಾರ ಜನರ ಆತಂಕವನ್ನು ದೂರ ಮಾಡಿದೆ.

ಇದನ್ನೂ ಓದಿ:

ದಾವಣಗೆರೆಯಲ್ಲಿ ಹೆಚ್ಚಾದ ಅಡಿಕೆ ಕಳ್ಳತನ; ಒಂದು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ಪತ್ತೆ

ಕಳ್ಳತನಕ್ಕೆ ಬಂದು ಸಿಕ್ಕಿ ಬಿದ್ದ ಖದೀಮರಿಗೆ ಧರ್ಮದೇಟು.. ಸ್ವಯಂ ಚಾಕು ಇರಿದುಕೊಂಡು ಅಸ್ವಸ್ಥನಾದ ಕಳ್ಳ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!