AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಡ್ ಬ್ಲಾಕ್ ದಂಧೆ ಬೇಧಿಸಿದ್ರೂ ಬೆಡ್ ಸಿಕ್ತಿಲ್ಲ; ಐಸಿಯು ಬೆಡ್ ಸಿಕ್ಕಿದ್ರೆ ನಮ್ ಮಾವ ಉಳೀತಿದ್ರು -ಮೃತ ಕುಟುಂಬಸ್ಥರ ಅಳಲು

ತೇಜಸ್ವಿ ಸೂರ್ಯ ಮಾತಿನ‌ ನಂತರ ಧೈರ್ಯ ಬಂದಿತ್ತು. ಆದ್ರೆ ಈಗಲೂ ಯಾವ ಬೆಡ್ಗಳೂ ಸಿಗ್ತಿಲ್ಲ. ಐಸಿಯು ಸಮಸ್ಯೆ ತುಂಬಾ ಇದೆ, ಐಸಿಯು ಸಿಗದೆ ನಮ್‌ ಮಾವನನ್ನ ಕಳೆದುಕೊಂಡ್ವಿ. ಬಿಬಿಎಂಪಿಗೆ ಕಾಲ್ ಮಾಡಿ‌ ಮಾಡಿ ಸಾಕಾಯ್ತು....

ಬೆಡ್ ಬ್ಲಾಕ್ ದಂಧೆ ಬೇಧಿಸಿದ್ರೂ ಬೆಡ್ ಸಿಕ್ತಿಲ್ಲ; ಐಸಿಯು ಬೆಡ್ ಸಿಕ್ಕಿದ್ರೆ ನಮ್ ಮಾವ ಉಳೀತಿದ್ರು -ಮೃತ ಕುಟುಂಬಸ್ಥರ ಅಳಲು
ಬೆಡ್ ಸಿಗದಿದ್ದಕ್ಕೆ ಮೃತ ವೃದ್ಧನ ಕುಟುಂಬಸ್ಥರ ಆಕ್ರೋಶ
ಆಯೇಷಾ ಬಾನು
|

Updated on: May 07, 2021 | 8:11 AM

Share

ಬೆಂಗಳೂರು: ಮಹಾಮಾರಿ ಕೊರೊನಾದ ಎರಡನೇ ಅಲೆಯ ಭೀಕರತೆಯಿಂದ ಜನ ತತ್ತರಿಸಿದ್ದಾರೆ. ಇದರ ನಡುವೆ ನಗರದಲ್ಲಿ ಹೆಚ್ಚಾಗಿರುವ ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಸೋಂಕಿತರನ್ನು ನರಳುವಂತೆ ಮಾಡಿದೆ. ತೇಜಸ್ವಿ ಸೂರ್ಯ ಬೆಡ್ ಬ್ಲಾಕ್ ದಂಧೆ ಬೇಧಿಸಿದ ಬಳಿಕವೂ ಬೆಡ್ ಸಮಸ್ಯೆಯಿಂದ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ. ಬೆಡ್ ಬ್ಲಾಕ್ ದಂಧೆ ಬೇಧಿಸಿದ್ರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ.

ಬೆಡ್, ಐಸಿಯು, ಆಸ್ಪತ್ರೆಗಾಗಿ ಸೋಂಕಿತರ ಕುಟುಂಬಸ್ಥರು ಪರದಾಡುತ್ತಿರುವುದು ಕಡಿಮೆಯಾಗಿಲ್ಲ. ಬೆಡ್ ಸಿಕ್ರೂ ಸೋಂಕಿತರಿಗೆ ಐಸಿಯು ಸಿಗ್ತಿಲ್ಲ. ಐಸಿಯು ವಾರ್ಡ್ ಸಿಗದೇ, ಚಿಕಿತ್ಸೆ ಸಿಗದೇ ಸೋಂಕಿತರು ಸಾವನ್ನಪ್ತಿದ್ದಾರೆ. ಇಲ್ಲೊಂದು ಕುಟುಂಬ ಐಸಿಯುಗಾಗಿ ಆಸ್ಪತ್ರೆ ಆಸ್ಪತ್ರೆ ಅಲೆದಾಡಿ ಕೊನೆಗೆ ಮನೆ ಯಜಮಾನನ್ನ ಕಳೆದುಕೊಂಡಿದೆ. ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಗರದ ಓಂ ಶಕ್ತಿ ಖಾಸಗಿ ಆಸ್ಪತ್ರೆಗೆ ಸೋಂಕಿತನನ್ನು ದಾಖಲು ಮಾಡಲಾಗಿತ್ತು.

65 ವರ್ಷದ ವೃದ್ಧನಿಗೆ 2 ವಾರ ಚಿಕಿತ್ಸೆ ಕೂಡ ನೀಡಲಾಗಿತ್ತು. ಕಳೆದ 15 ದಿನಗಳಿಂದ ಜನರಲ್ ಬೆಡ್ನಲ್ಲೇ ಚಿಕಿತ್ಸೆ ನೀಡಿ ಸೋಂಕಿತ ವೃದ್ಧ ಚೇತರಿಸಿಕೊಂಡಿದ್ದು ಡಿಸ್ಚಾರ್ಜ್ ಮಾಡ್ತೀವಿ ಅಂತಲೂ ಆಸ್ಪತ್ರೆಯವರು ಹೇಳಿದ್ರು. ಆದ್ರೆ ಡಿಸ್ಚಾರ್ಜ್ ದಿನವೇ ಮತ್ತೆ ಓವರ್ ಇನ್ಫೆಕ್ಷನ್ ಆಗಿದೆ ಅಂತ ಹೇಳಿ ಐಸಿಯುಗೆ ಶಿಫ್ಟ್ ಮಾಡಲು ವೈದ್ಯರು ತಿಳಿಸಿದ್ರು. ಆದ್ರೆ ಎಷ್ಟೇ ಹುಡಿಕಿದ್ರೂ ಎಲ್ಲೂ ಐಸಿಯು ಸಿಗದೇ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಐಸಿಯು ಬೆಡ್ ಸಿಕ್ಕಿದ್ರೆ ನಮ್ ಮಾವ ಉಳೀತಿದ್ರು. ತೇಜಸ್ವಿ ಸೂರ್ಯ ಮಾತಿನ‌ ನಂತರ ಧೈರ್ಯ ಬಂದಿತ್ತು. ಆದ್ರೆ ಈಗಲೂ ಯಾವ ಬೆಡ್ಗಳೂ ಸಿಗ್ತಿಲ್ಲ. ಐಸಿಯು ಸಮಸ್ಯೆ ತುಂಬಾ ಇದೆ, ಐಸಿಯು ಸಿಗದೆ ನಮ್‌ ಮಾವನನ್ನ ಕಳೆದುಕೊಂಡ್ವಿ. ಬಿಬಿಎಂಪಿಗೆ ಕಾಲ್ ಮಾಡಿ‌ ಮಾಡಿ ಸಾಕಾಯ್ತು. ಬಿಬಿಎಂಪಿಯಿಂದ ಯಾವುದೇ ಉಪಯೋಗವಿಲ್ಲ. ಬೆಡ್, ಐಸಿಯು ಇಲ್ದೆ ತುಂಬಾ ಜನ ಸಾಯ್ತಿದ್ದಾರೆ ಎಂದು ಬಿಬಿಎಂಪಿ ವಿರುದ್ದ ಮೃತ ವೃದ್ಧನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಗೆಹರಿತಿಲ್ಲ ವೆಂಟಿಲೇಟರ್, ಬೆಡ್ ಸಮಸ್ಯೆ: ಹಿರಿಯ ಅಧಿಕಾರಿಗಳಿಗೆ ವಲಯ ಅಧಿಕಾರಿಗಳಿಂದ ದೂರು