ದ್ವಿತೀಯ ಪಿಯು ಹಾಲ್ ಟಿಕೆಟ್ ತಿದ್ದುಪಡಿಗೆ ಮೇ 20ರವರೆಗೆ ಅವಕಾಶ
2nd PUC Hall Ticket 2021 ದ್ವಿತೀಯ PUC ಹಾಲ್ ಟಿಕೆಟ್ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಯಾವುದೇ ತಿದ್ದುಪಡಿ ಇದ್ದಲ್ಲಿ ಮೇ 20ರೊಳಗೆ ಮನವಿ ಸಲ್ಲಿಸಲು ಸೂಚಿಸಲಾಗಿದೆ. SATS ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಕರುಡು ಪ್ರವೇಶ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಬೆಂಗಳೂರು: ಕರ್ನಾಟಕದಲ್ಲಿ ಮಹಾಮಾರಿ ಕೊರೊನಾ ಎರಡನೇ ಅಲೆ ಭೀತಿ ಹೆಚ್ಚುತ್ತಿರುವುದರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮೇ 24ರಿಂದ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಸದ್ಯ ದ್ವಿತೀಯ ಪಿಯು ಪರೀಕ್ಷೆ ಪ್ರವೇಶ ಪ್ರತಿಯನ್ನು ಮೇ 20ರವರೆಗೆ ತಿದ್ದುಪಡಿ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.
ದ್ವಿತೀಯ PUC ಹಾಲ್ ಟಿಕೆಟ್ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಯಾವುದೇ ತಿದ್ದುಪಡಿ ಇದ್ದಲ್ಲಿ ಮೇ 20ರೊಳಗೆ ಮನವಿ ಸಲ್ಲಿಸಲು ಸೂಚಿಸಲಾಗಿದೆ. SATS ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಕರುಡು ಪ್ರವೇಶ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಪ್ರವೇಶ ಪ್ರತಿಯಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ ಅದನ್ನು ಕೆಂಪು ಶಾಯಿಯಿಂದ ಗುರುತು ಮಾಡುವಂತೆ ಸೂಚಿಸಲಾಗಿದೆ. ತಿದ್ದುಪಡಿ ಮಾಡಲು ಕಾಲೇಜು ಪ್ರಾಂಶುಪಾಲರ ಸಹಿ ಅಗತ್ಯ. ಜೊತೆಗೆ ತಿದ್ದುಪಡಿಗೆ ಪೂರಕ ದಾಖಲೆಗಳನ್ನು ಸಹ ನೀಡಬೇಕು.
ನಂತರ ಇ-ಮೇಲ್ 2puatcorrection n@gmail.com ವಿಳಾಸಕ್ಕೆ ಸಲ್ಲಿಸಬೇಕು. ತಿದ್ದುಪಡಿಗೆ ಪೂರಕ ದಾಖಲೆಗಳ PDF ಪ್ರತಿ ನೀಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಕಳಿಸಿದೆ. ಹೊಸ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಿದ ನಂತರ ಮಂಡಳಿಯು ಪಿಯುಸಿ ಪ್ರವೇಶ ಪತ್ರದ ಅಂತಿಮ ನಕಲನ್ನು ನೀಡುತ್ತದೆ. kseeb.kar.nic.in ನಲ್ಲಿ ಅಂತಿಮ ಹಾಲ್ ಟಿಕೆಟ್ ಬಿಡುಗಡೆ ಮಾಡಲಾಗುತ್ತದೆ. ಕೆಎಸ್‌ಇಇಬಿ ಹಾಲ್ ಟಿಕೆಟ್‌ನಲ್ಲಿ ಅಭ್ಯರ್ಥಿಯ ಹೆಸರು, ಪರೀಕ್ಷಾ ಕೇಂದ್ರದ ಹೆಸರು ಮತ್ತು ವಿಳಾಸ, ರೋಲ್ ಸಂಖ್ಯೆ, ಸೂಚನೆಗಳು, ವಿಷಯಗಳು ಮತ್ತು ವರದಿ ಮಾಡುವ ಸಮಯದಂತಹ ಪ್ರಮುಖ ವಿವರಗಳಿರುತ್ತವೆ.