
ಬೆಂಗಳೂರು: ಐಎಂಎ ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಆಲಿ ಖಾನ್ಗೆ ಜಾಮೀನು ಮಂಜೂರಾಗಿದೆ. ಮನ್ಸೂರ್ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಆದ್ರೆ ಮನ್ಸೂರ್ ಅಲಿ ಖಾನ್ ವಿರುದ್ಧ ಸಿಬಿಐ ಕೇಸ್ ಬಾಕಿಯಿದೆ. ಹಾಗಾಗಿ, ಅರೋಪಿಗೆ ಬಿಡುಗಡೆಯ ಭಾಗ್ಯ ಸದ್ಯಕ್ಕಿಲ್ಲ. ಸಿಬಿಐ ಪ್ರಕರಣದಲ್ಲಿ ಮನ್ಸೂರ್ ಆಲಿ ಖಾನ್ಗೆ ಇನ್ನೂ ಜಾಮೀನು ಸಿಕ್ಕಿಲ್ಲ.
ED ದಾಖಲಿಸಿದ್ದ ಪ್ರಕರಣದಲ್ಲಿ ಮನ್ಸೂರ್ಗೆ ಜಾಮೀನು ಮಂಜೂರಾಗಿದೆ. ಜಾಮೀನು ಪಡೆಯಲು 5 ಲಕ್ಷ ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಜೊತೆಗೆ, ತನಿಖೆಗೆ ಸಹಕರಿಸಬೇಕು, ಸಾಕ್ಷ್ಯ ನಾಶಪಡಿಸದಂತೆ ಹೈಕೋರ್ಟ್ ಸೂಚನೆ ಸಹ ನೀಡಿದೆ. ತನಿಖೆ ಮುಗಿವವರೆಗೆ ಆಸ್ತಿಗಳನ್ನು ಮಾರಾಟ ಮಾಡುವಂತಿಲ್ಲ. ಆರೋಪಿಯೇ ತನಿಖಾ ಸಂಸ್ಥೆ ಮುಂದೆ ಶರಣಾಗಿದ್ದ. ಆತನ ಪಾಸ್ಪೋರ್ಟ್ ಪೊಲೀಸರ ವಶದಲ್ಲಿರುವ ಹಿನ್ನೆಲೆಯಲ್ಲಿ ದೇಶ ತೊರೆಯುವ ಸಾಧ್ಯತೆ ಇಲ್ಲವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
Published On - 5:32 pm, Wed, 28 October 20