ಮುನಿರತ್ನ ಗೆದ್ದರೆ ಅಭಿವೃದ್ಧಿಗೆ ಏನೂ ಕಮ್ಮಿಮಾಡಲ್ಲ -ಬಿಜೆಪಿ ಅಭ್ಯರ್ಥಿ ಪರ ನಟಿ ಖುಷ್ಬೂ ಮತಬೇಟೆ

  • TV9 Web Team
  • Published On - 18:57 PM, 28 Oct 2020
ಮುನಿರತ್ನ ಗೆದ್ದರೆ ಅಭಿವೃದ್ಧಿಗೆ ಏನೂ ಕಮ್ಮಿಮಾಡಲ್ಲ -ಬಿಜೆಪಿ ಅಭ್ಯರ್ಥಿ ಪರ ನಟಿ ಖುಷ್ಬೂ ಮತಬೇಟೆ

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಪರ ನಟಿ ಖುಷ್ಬೂ ಮತಯಾಚನೆ ಮಾಡಿದರು. ಕೂಲಿನಗರದಲ್ಲಿ ತಮಿಳಿನಲ್ಲಿ ನಟಿ ಖುಷ್ಬೂ ಮತಯಾಚನೆ ಮಾಡಿದರು.
ವಣಕ್ಕಂ ಅಂತಾ ತಮಿಳಿನಲ್ಲಿ ತಮ್ಮ ಭಾಷಣ ಶುರುಮಾಡಿದ ನಟಿ ಎಲ್ಲರೂ ಚೆನ್ನಾಗಿದ್ದೀರಾ ಅಂತಾ ಕೇಳಿದರು. ಮುನಿರತ್ನರಿಗೆ ಮತ ಹಾಕಿ ಗೆಲ್ಲಿಸಿ. ನಿಮಗೆ ನನ್ನ ಮೇಲೆ ಬಹಳಷ್ಟು ಅಭಿಮಾನವಿದೆ. ಆ ಅಭಿಮಾನಕ್ಕಾಗಿ ನಾನಿಲ್ಲಿ ಮುನಿರತ್ನ ಪರ ಮತಯಾಚನೆಗೆ ಬಂದಿದ್ದೇನೆ. ಮುನಿರತ್ನ ಉತ್ತಮ ಶಾಸಕ. ಮುನಿರತ್ನ ಗೆದ್ದರೆ ಅಭಿವೃದ್ಧಿಗೆ ಏನೂ ಕಮ್ಮಿ ಮಾಡಲ್ಲ ಎಂದು ಖುಷ್ಬೂ ಹೇಳಿದರು. ಮುನಿರತ್ನರಿಗೆ ದೊಡ್ಡ ಮಟ್ಟದಲ್ಲಿ ಜಯಭೇರಿ ಸಿಗುವ ವಿಶ್ವಾಸ ಇದೆ ನನಗೆ ಎಂದು ತಮಿಳಿನಲ್ಲಿ ಖುಷ್ಬೂ ಭಾಷಣ ಮಾಡಿದರು. ಈ ನಡುವೆ, ನನಗೆ ಕನ್ನಡ ಅರ್ಥ ಆಗುತ್ತೆ. ಆದ್ರೆ, ಕನ್ನಡ ಮಾತಾಡಲು ಸ್ವಲ್ಪ ಸಮಯ ಹಿಡಿಯುತ್ತೆ. ಅಷ್ಟು ಸಮಯ ಈಗ ಇಲ್ಲ ಎಂದು ಕೈಯಲ್ಲಿ ಕಟ್ಟಿರೋ ಗಡಿಯಾರ ನೋಡಿ ಖುಷ್ಬೂ ಹೇಳಿದರು.

‘ಖುಷ್ಬೂ ನನಗೆ ಒಳ್ಳೆಯದನ್ನು ಬಯಸಿಕೊಂಡು ಬರುತ್ತಿರುವ ಅಮ್ಮ’
ಇತ್ತ, ಖುಷ್ಬೂ ನನ್ನ ಪರ ಮತಯಾಚನೆಗೆ ಬಂದಿದ್ದಾರೆ. ನಿಮ್ಮ ಪರವಾಗಿ ಖುಷ್ಬೂ ಅವರಿಗೆ ಧನ್ಯವಾದ ತಿಳಿಸ್ತೇನೆ. ಖುಷ್ಬೂ ನನಗೆ ಒಳ್ಳೆಯದನ್ನು ಬಯಸಿಕೊಂಡು ಬರುತ್ತಿರುವ ಅಮ್ಮ. 22 ವರ್ಷಗಳಿಂದ ಖುಷ್ಬೂ ಅಮ್ಮನವರ ಜೊತೆ ಬಾಂಧವ್ಯ ಇದೆ. ನನ್ನ ಮೊದಲ ಸಿನಿಮಾ ಆಂಟಿ ಪ್ರೀತ್ಸೆ‌ಗೆ ಅವರು ನಾಯಕಿಯಾಗಿದ್ರು. ಆಗಿನಿಂದ ಇಲ್ಲಿಯವರೆಗೂ ಅವರ ಜೊತೆ ಉತ್ತಮ ಒಡನಾಟ ಇದೆ. ನಿಮ್ಮ ಮುನಿರತ್ನರನ್ನು ಮೂರನೇ ಬಾರಿಗೆ ಗೆಲ್ಲಿಸ್ತೀರೆಂಬ ವಿಶ್ವಾಸ ಇದೆ ಎಂದು ಬಿಜೆಪಿ ಅಭ್ಯರ್ಥಿ ಮತಯಾಚನೆ ಮಾಡಿದರು.