ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾ ಪಾತ್ರ ಬಹಳ ಮುಖ್ಯ: ಡಿ.ಕೆ ಶಿವಕುಮಾರ್

ಬೆಂಗಳೂರು: ಆರ್.ಆರ್.ನಗರ, ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಸೋಶಿಯಲ್ ಮೀಡಿಯಾ ಘಟಕದ ಜತೆ ಸಭೆ ನಡೆಸಿದರು. ‘ಬೈಎಲೆಕ್ಷನ್‌ನಲ್ಲಿ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಮಾಡಿ’ ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾದ ಪಾತ್ರ ಮುಖ್ಯ. ಸೋಶಿಯಲ್ ಮೀಡಿಯಾ ಇನ್ನಷ್ಟು ಌಕ್ಟಿವ್ ಆಗಬೇಕು. ಸೋಶಿಯಲ್ ಮೀಡಿಯಾದಲ್ಲಿ ಮಾರ್ಕೆಟಿಂಗ್ ಮಾಡ್ತಾರೆ. ಏನೂ ಮಾಡದಿದ್ರೂ ಬಿಜೆಪಿಯವ್ರು ಮಾರ್ಕೆಟಿಂಗ್ ಮಾಡ್ತಾರೆ. ನಾವು ಹಲವು ಬಾರಿ ಈ ವಿಚಾರದಲ್ಲಿ ಎಡವಿದ್ದೇವೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟವಾಗುತ್ತದೆ ಎಂದು ಡಿಕೆಶಿ ಎಚ್ಚರಿಸಿದರು. ಬೈಎಲೆಕ್ಷನ್‌ನಲ್ಲಿ […]

ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾ ಪಾತ್ರ ಬಹಳ ಮುಖ್ಯ: ಡಿ.ಕೆ ಶಿವಕುಮಾರ್
Edited By:

Updated on: Oct 09, 2020 | 2:47 PM

ಬೆಂಗಳೂರು: ಆರ್.ಆರ್.ನಗರ, ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಸೋಶಿಯಲ್ ಮೀಡಿಯಾ ಘಟಕದ ಜತೆ ಸಭೆ ನಡೆಸಿದರು.

‘ಬೈಎಲೆಕ್ಷನ್‌ನಲ್ಲಿ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಮಾಡಿ’
ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾದ ಪಾತ್ರ ಮುಖ್ಯ. ಸೋಶಿಯಲ್ ಮೀಡಿಯಾ ಇನ್ನಷ್ಟು ಌಕ್ಟಿವ್ ಆಗಬೇಕು. ಸೋಶಿಯಲ್ ಮೀಡಿಯಾದಲ್ಲಿ ಮಾರ್ಕೆಟಿಂಗ್ ಮಾಡ್ತಾರೆ. ಏನೂ ಮಾಡದಿದ್ರೂ ಬಿಜೆಪಿಯವ್ರು ಮಾರ್ಕೆಟಿಂಗ್ ಮಾಡ್ತಾರೆ. ನಾವು ಹಲವು ಬಾರಿ ಈ ವಿಚಾರದಲ್ಲಿ ಎಡವಿದ್ದೇವೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟವಾಗುತ್ತದೆ ಎಂದು ಡಿಕೆಶಿ ಎಚ್ಚರಿಸಿದರು.

ಬೈಎಲೆಕ್ಷನ್‌ನಲ್ಲಿ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಮಾಡಿ. ನಾನು ಎಲ್ಲಾ ಗಮನಿಸುತ್ತಿದ್ದೇನೆ, ಕೆಲಸ ಮಾಡದಿದ್ರೆ ಸಹಿಸಲ್ಲ ಎಂದೂ ಸೋಶಿಯಲ್ ಮೀಡಿಯಾ ಘಟಕಕ್ಕೆ ಡಿಕೆಶಿ ಎಚ್ಚರಿಕೆ ರವಾನಿಸಿದರು.