ಅಪ್ಪಿತಪ್ಪಿಯೂ ದಿಲ್ಲಿ ಬಿಟ್ಟು ಕದಲುವ ಮನಸ್ಥಿತಿ, ಪರಿಸ್ಥಿತಿಯಲ್ಲಿಲ್ಲ ಡಿಕೆಶಿ! ಯಾಕೆ?

|

Updated on: Oct 24, 2019 | 12:40 PM

ಬೆಂಗಳೂರು: ಕಾಂಗ್ರೆಸ್​ನ ವರ್ಚಸ್ವೀ ನಾಯಕ ಡಿ.ಕೆ.‌ ಶಿವಕುಮಾರ್ ಅವರು ಬೆಂಗಳೂರು ಬಿಟ್ಟು 50 ದಿನಗಳೇ ಆಗುತ್ತಿವೆ. ಯಾವತ್ತೂ ಅವರು ಇಷ್ಟು ದಿನ ಕರ್ನಾಟಕ ಬಿಟ್ಟು ಹೋಗಿಲ್ಲ. ಕಾರಣವೇನೇ ಇರಲಿ ಈ ಮಧ್ಯೆ, ನಿನ್ನೆ ಕೋರ್ಟ್​ ಅವರಿಗೆ ಜಾಮೀನು ನೀಡಿ, ನೀವು ಸದ್ಯಕ್ಕೆ ಸ್ವತಂತ್ರರು. ಎಲ್ಲಿಗೆ ಬೇಕಾದರೂ ಹೋಗಬಹುದು, ಆದ್ರೆ ದೇಶವನ್ನೇ ಬಿಟ್ಟು ಹೋಗುವ ಹಾಗಿಲ್ಲ ಎಂದು ಹೇಳಿದೆ. ಸರಿ, ಸಾಕ್ಷಾತ್​ ಕೋರ್ಟ್ ಹೀಗೆ ಹೇಳಿದ ಮೇಲೆ ಡಿಕೆಶಿ, ನಿನ್ನೆ ತಿಹಾರ್​ ಜೈಲಿನಿಂದ ಹೊರಬಂದು ಸೀದಾ ಇಂದಾದರೂ ಬೆಂಗಳೂರಿಗೆ […]

ಅಪ್ಪಿತಪ್ಪಿಯೂ ದಿಲ್ಲಿ ಬಿಟ್ಟು ಕದಲುವ ಮನಸ್ಥಿತಿ, ಪರಿಸ್ಥಿತಿಯಲ್ಲಿಲ್ಲ ಡಿಕೆಶಿ! ಯಾಕೆ?
Follow us on

ಬೆಂಗಳೂರು: ಕಾಂಗ್ರೆಸ್​ನ ವರ್ಚಸ್ವೀ ನಾಯಕ ಡಿ.ಕೆ.‌ ಶಿವಕುಮಾರ್ ಅವರು ಬೆಂಗಳೂರು ಬಿಟ್ಟು 50 ದಿನಗಳೇ ಆಗುತ್ತಿವೆ. ಯಾವತ್ತೂ ಅವರು ಇಷ್ಟು ದಿನ ಕರ್ನಾಟಕ ಬಿಟ್ಟು ಹೋಗಿಲ್ಲ. ಕಾರಣವೇನೇ ಇರಲಿ ಈ ಮಧ್ಯೆ, ನಿನ್ನೆ ಕೋರ್ಟ್​ ಅವರಿಗೆ ಜಾಮೀನು ನೀಡಿ, ನೀವು ಸದ್ಯಕ್ಕೆ ಸ್ವತಂತ್ರರು. ಎಲ್ಲಿಗೆ ಬೇಕಾದರೂ ಹೋಗಬಹುದು, ಆದ್ರೆ ದೇಶವನ್ನೇ ಬಿಟ್ಟು ಹೋಗುವ ಹಾಗಿಲ್ಲ ಎಂದು ಹೇಳಿದೆ.

ಸರಿ, ಸಾಕ್ಷಾತ್​ ಕೋರ್ಟ್ ಹೀಗೆ ಹೇಳಿದ ಮೇಲೆ ಡಿಕೆಶಿ, ನಿನ್ನೆ ತಿಹಾರ್​ ಜೈಲಿನಿಂದ ಹೊರಬಂದು ಸೀದಾ ಇಂದಾದರೂ ಬೆಂಗಳೂರಿಗೆ ಬಂದು ತಮ್ಮ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಆದ್ರೆ ಡಿಕೆಶಿ ಸುತರಾಂ ಬೆಂಗಳೂರಿಗೆ ಬರುವ ಮೂಡ್​​ನಲ್ಲಿ ಇಲ್ಲ. ಅಪ್ಪಿತಪ್ಪಿಯೂ ದಿಲ್ಲಿ ಬಿಟ್ಟು ಕದಲುವ ಮನಸ್ಥಿತಿ/ ಪರಿಸ್ಥಿತಿ ಅವರದ್ದಾಗಿಲ್ಲ. ಏಕೆಂದ್ರೆ ಅವರನ್ನು ಇಷ್ಟು ದಿನ ತಿಹಾರ್​ ಜೈಲಿಗೆ ಕಳುಹಿಸಿದ್ದ ಜಾರಿ ನಿರ್ದೇಶನಲಾಯವಾಗಲಿ ಅಥವಾ ಸಿಬಿಐ ಆಗಲಿ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಹೊಂಚುಹಾಕುತ್ತಿದೆ. ಮತ್ತೆ ವಶಕ್ಕೆ ತೆಗೆದುಕೊಳ್ಳಲು. ಇಂತಹ ಪರಿಸ್ಥಿತಿ ಇರುವಾಗ ಡಿಕೆಶಿ ತಾನೇ ಹೇಗೆ ಕರ್ನಾಟಕಕ್ಕೆ ಮರಳುತ್ತಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ಅಗ್ರಜನಿಗೆ ಭುಜಕ್ಕೆ ಭುಜ ಕೊಟ್ಟು, ಕಷ್ಟಕಾಲದಲ್ಲಿ ತನಗೆ ಕಾಪು ನೀಡುತ್ತಿರುವ ತಮ್ಮ ಡಿ.ಕೆ.‌ ಸುರೇಶ್​ ಮನೆಯಲ್ಲೇ ಸದ್ಯಕ್ಕೆ ಶಿವಕುಮಾರ್ ವಾಸ್ತವ್ಯ ಹೂಡಿದ್ದಾರೆ. ಶಿವಕುಮಾರ್ ವಿಶ್ರಾಂತಿ ಪಡೆಯುತ್ತಿದ್ದು, ಇವತ್ತು ವಕೀಲರನ್ನು ಭೇಟಿ ಮಾಡಲಿದ್ದಾರೆ. ಅವರು ಏನು ಹೇಳುತ್ತಾರೋ ಹಾಗೆ ತಮ್ಮ ಮುಂದಿನ ಹೆಜ್ಜೆ ಇಡಲಿದ್ದಾರೆ ಎಂದು ಸ್ವತಃ ಸುರೇಶ್​ ಹೇಳಿದ್ದಾರೆ. ಅತ್ತ ಸಿಬಿಐ, ತನ್ನ ಕುಣಿಕೆಯನ್ನು ಕೈಯಲ್ಲಿ ಹಿಡಿದು ನಿಂತಿದೆ ಎನ್ನಲಾಗಿದೆ. ಹಾಗಾಗಿ ಡಿಕೆ ಶಿವಕುಮಾರ್​ ಕರ್ನಾಟಕದತ್ತ ತಲೆ ಹಾಕುವ ಆಲೋಚನೆಯನ್ನೂ ಮಾಡಿದಂತಿಲ್ಲ.

Published On - 11:01 am, Thu, 24 October 19