ಬೆಳಗಾವಿ, ಫೆ.24: ಕಳೆದ ಮೂರು ದಿನಗಳಿಂದ ಬೆಳಗಾವಿ (Belagavi) ಜಿಲ್ಲೆಯಲ್ಲಿ ಅಪಘಾತ (Accident) ಪ್ರಕರಣಗಳು ಹೆಚ್ಚಾಗಿವೆ. ವಾಹನ ಚಾಲನೆ ವೇಳೆ ಚಾಲಕರಿಂದಾಗಿರುವ ಬೇಜವಾಬ್ದಾರಿತನ, ನಿರ್ಲಕ್ಷ್ಯಕ್ಕೆ ಹಲವು ಮಂದಿ ಪ್ರಾಣಗಳೆದುಕೊಂಡಿದ್ದಾರೆ (Death). ಮೂರೇ ದಿನದಲ್ಲಿ 25 ಜನರು ಮೃತಪಟ್ಟಿದ್ದಾರೆ. ಬೈಕ್ ಅಪಘಾತ, ಕಾರು ಅಪಘಾತ ಸೇರಿದಂತೆ ಜಿಲ್ಲೆಯಲ್ಲಿ ಹತ್ತು ಪ್ರಕರಣಗಳಲ್ಲಿ ಸುಮಾರು 25 ಜನ ಬಲಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬಿಡಿ ಗ್ರಾಮದ ಬಳಿ 10 ಜನ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಸ್ಥಳದಲ್ಲಿಯೇ 6 ಜನ ಮೃತಪಟ್ಟಿದ್ದು ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಮೃತರು ಹಾಗೂ ಗಾಯಾಳುಗಳು ಧಾರವಾಡ ಜಿಲ್ಲೆಯವರು ಎಂದು ತಿಳಿದುಬಂದಿದೆ. ಗೋಲಿಹಳ್ಳಿಗೆ ಆರಕ್ಷತೆಗೆ ತೆರಳುವ ವೇಳೆ ಅಪಘಾತವಾಗಿತ್ತು. ಕಾರು ವೇಗವಾಗಿ ಮರಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿತ್ತು.
ಮತ್ತೊಂದೆಡೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಕೋಡ ಗ್ರಾಮದ ಬಳಿ ಅತಿ ವೇಗದಿಂದ ಬಂದ ಎರಡು ಬೈಕ್ ಹಾಘೂ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಗುರ್ಲಾಪುರದಿಂದ ಮುಗಳಖೋಡ ಕಡೆ ಹೋಗುತ್ತಿದ್ದ ಕಾರು ಅಪಘಾತದಿಂದ ಕಾರಲ್ಲಿದ್ದ ನಾಲ್ವರು ಮೃತಪಟ್ಟಿದ್ದರು. ಪ್ರತ್ಯೇಕ ಬೈಕ್ ಮೇಲಿದ್ದ ಇಬ್ಬರು ಕೂಡ ಪ್ರಾಣಕಳೆದುಕೊಂಡಿದ್ದರು. ಹಾರೋಗೆರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ತಂದೆ ಮೂರು ಮಕ್ಕಳು ಸಾವನ್ನಪ್ಪಿದ್ದರು. ಶವಗಳನ್ನ ಕಾರಿನಿಂದ ತೆಗೆಯಲು ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಕಾರಿನ ವಿಚಾರಕ್ಕೆ ಕಿರಿಕ್: ಒಡಹುಟ್ಟಿದ ಸಹೋದರನ ಮೇಲೆ ಪೆಟ್ರೋಲ್ ಸುರಿದು ಸಾಯಿಸಿದ ಅಣ್ಣ
ಇನ್ನು ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಮೂವರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಬಳಿ ನಡೆದ ಅಪಘಾತದಲ್ಲಿ ಮೂರು ಜನ ಪ್ರಯಾಣಿಕರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿದ್ದವು. ಮುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಹುಕ್ಕೇರಿ ತಾಲೂಕಿನ ಯಮಕನಮರಡಿ ಬಳಿ ಬೈಕ್ಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರರಾದ ಗದಗಯ್ಯಾ ಹಿರೇಮಠ ಹಾಗೂ ಬಾಳಪ್ಪ ಹೂಗಾರ ಮೃತಪಟ್ಟಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿಪ್ಪಾಣಿಯಲ್ಲಿ ಆಟೋ ರಿಕ್ಷಾ ಪಲ್ಟಿಯಾಗಿ ಮಹಿಳೆ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಬಸ್ ಡಿಕ್ಕಿಯಾಗಿ ಓರ್ವ ಬೈಕ್ ಸವಾರ ಸಾವು. ಹೀಗೆ ಜಿಲ್ಲೆಯಲ್ಲಿ ಬೈಕ್ ಅಪಘಾತದಲ್ಲಿ, ಕಾರು, ಲಾರಿ, ಬಸ್ ಡಿಕ್ಕಿಯಾಗಿ 25 ಜನ ಮೃತಪಟ್ಟಿದ್ದು ಪೊಲೀಸರು ಶಾಕ್ ಆಗಿದ್ದಾರೆ.
ರಾಜ್ಯದ ಪ್ರಮಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:10 am, Sat, 24 February 24