ಕೊರೊನಾಗೆ ಸಂಜೀವಿನಿ ನೀಡಲು ಸಕಲ ಸಿದ್ಧತೆ.. ದೇಶಾದ್ಯಂತ ಇಂದು ಲಸಿಕೆ ಅಸಲಿ ರನ್

|

Updated on: Jan 16, 2021 | 11:41 AM

ಅತ್ತ ಪ್ರಧಾನಿ ಮೋದಿ ಚಾಲನೆ ನೀಡುತ್ತಲೇ ಕರ್ನಾಟಕದಲ್ಲೂ ಇಂದು ವ್ಯಾಕ್ಸಿನ್ ನೀಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯಾದ್ಯಂತ 243 ಕಡೆ ಲಸಿಕೆ ನೀಡಿಕೆ ನಡೆಯಲಿದೆ. ಈಗಾಗ್ಲೇ ಎಲ್ಲಾ ಜಿಲ್ಲೆಗಳಿಗೂ ಡೋಸ್​ಗಟ್ಟಲೆ ಸಂಜೀವಿನಿ ತಲುಪಿದೆ. ಕೊರೊನಾ ವಿರುದ್ಧ ವ್ಯಾಕ್ಸಿನ್ ಮಹಾ ಸಮರಕ್ಕೆ ಕರುನಾಡು ಸಜ್ಜಾಗಿದೆ.

ಕೊರೊನಾಗೆ ಸಂಜೀವಿನಿ ನೀಡಲು ಸಕಲ ಸಿದ್ಧತೆ.. ದೇಶಾದ್ಯಂತ ಇಂದು ಲಸಿಕೆ ಅಸಲಿ ರನ್
ಕೊರೊನಾ ವಿರುದ್ಧ ವ್ಯಾಕ್ಸಿನ್ ಮಹಾ ಸಮರಕ್ಕೆ ಕರುನಾಡು ಸಜ್ಜು
Follow us on

ಬೆಂಗಳೂರು: ಡೋಸ್​ಗಟ್ಟಲೆ ಕೊರೊನಾ ವ್ಯಾಕ್ಸಿನ್ ಈಗಾಗ್ಲೇ ಕರುನಾಡಿಗೂ ಬಂದಾಗಿದೆ. ರಾಜ್ಯದ ಮೂಲೆ ಮೂಲೆಗೂ ಲಸಿಕೆ ಹಂಚಿಕೆಯೂ ನಡೆದಿದೆ. ಕೋಲ್ಡ್​ ಸ್ಟೋರೇಜ್​ಗಳಲ್ಲಿ ಬ್ರಹ್ಮಾಸ್ತ್ರ ಭದ್ರವಾಗಿದೆ. ಇನ್ನೇನಿದ್ರೂ ಕಿಲ್ಲರ್ ಕೊರೊನಾ ವಿರುದ್ಧ ಸಮರ ಸಾರೋದಷ್ಟೇ ಬಾಕಿ. ಅರ್ಥಾತ್ ಕರ್ನಾಟಕದಲ್ಲೂ ವಾಕ್ಸಿನ್ ನೀಡಿಕೆಗೆ ಕೌಂಟ್​ಡೌನ್ ಶುರುವಾಗಿದೆ. ಹೆಮ್ಮಾರಿ ವಿರುದ್ಧದ ಅಂತಿಮ ಹೋರಾಟಕ್ಕೆ ಇಡೀ ರಾಜ್ಯ ಸನ್ನದ್ಧವಾಗಿದೆ.

ಬೆಂಗಳೂರಿನ 8ಕೇಂದ್ರಗಳಲ್ಲಿ ಇಂದು ಲಸಿಕೆ ನೀಡಿಕೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕಿತ್ತು. ಹೆಮ್ಮಾರಿ ಅಟ್ಟಹಾಸಕ್ಕೆ ಇಡೀ ನಗರವೇ ಸ್ತಬ್ಧವಾಗಿತ್ತು. ಆದ್ರೆ ಇದೀಗ ಬೆಂಗಳೂರಿನಿಂದ ಹೆಮ್ಮಾರಿಯನ್ನ ಹೊಡೆದೋಡಿಸೋ ಟೈಂ ಬಂದೇ ಬಿಟ್ಟಿದೆ. ಇಂದು ಬೆಂಗಳೂರಿನಲ್ಲೂ ಲಸಿಕೆ ನೀಡಿಕೆ ಕಾರ್ಯ ನಡೆಯಲಿದೆ. ನಗರದ 8 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತೆ. ವ್ಯಾಕ್ಸಿನ್ ನೀಡೋಕೆ ಬೇಕಾದ ಸಕಲ ಸಿದ್ಧತೆಗಳೂ ಈಗಾಗ್ಲೇ ಪೂರ್ಣಗೊಂಡಿದೆ.

ಬೆಂಗಳೂರಿನಲ್ಲಿ ಲಸಿಕೆ ನೀಡಿಕೆ
ವಿಕ್ಟೋರಿಯಾ ಆಸ್ಪತ್ರೆ ಬಿಎಂಸಿಆರ್​ಐನಲ್ಲಿ ಇಂದು ಕೊರೊನಾ ಲಸಿಕೆ ನೀಡಲಾಗುತ್ತೆ. ಕೋರಮಂಗಲದ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್​​ನಲ್ಲಿ ಲಸಿಕೆ ನೀಡಲಾಗುತ್ತೆ. ಸೆಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್​ಸೈನ್ಸ್​ನಲ್ಲೂ ವ್ಯಾಕ್ಸಿನ್ ನೀಡಲಾಗುತ್ತೆ. ಇನ್ನು ಮಲ್ಲೇಶ್ವರಂನ ಕೆಸಿಜಿ ಆಸ್ಪತ್ರೆ, ಇಂದಿರಾನಗರದ ಸಿ.ವಿ.ರಾಮನ್ ಆಸ್ಪತ್ರೆ, ಜಯನಗರದ ಆಸ್ಪತ್ರೆ ಮತ್ತು ಮಲ್ಲಸಂದ್ರದ UPHCನಲ್ಲಿ ಇಂದು ವ್ಯಾಕ್ಸಿನ್ ನೀಡಲಾಗುತ್ತೆ. ಇನ್ನು ಯಲಹಂಕದ ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜ್‌ನಲ್ಲೂ ಲಸಿಕೆ ನೀಡಲಾಗುತ್ತೆ.

ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಲಸಿಕೆ ನೀಡಿಕೆ
ಇಂದಿನಿಂದ ಕೊರೊನಾ ಲಸಿಕೆ ನೀಡುವಿಕೆ ಹಿನ್ನೆಲೆಯಲ್ಲಿ ಈಗಾಗ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಕ್ಸಿನ್​ ರವಾನೆಯಾಗಿದೆ. ಅದ್ರಲ್ಲೂ ಬೆಂಗಳೂರಿನ ವ್ಯಾಕ್ಸಿನ್ ಸ್ಟೋರೇಜ್​ನಿಂದ 23 ಜಿಲ್ಲೆಗಳಿಗೆ ಲಸಿಕೆ ಹಂಚಿಕೆಯಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಒಟ್ಟು 243 ಕಡೆ ಲಸಿಕೆ ನೀಡಲಾಗುತ್ತೆ. 237 ಕಡೆ ಕೊವಿಶೀಲ್ಡ್ ಮತ್ತು 6 ಕಡೆ ಕೊವ್ಯಾಕ್ಸಿನ್ ನೀಡಲಾಗುತ್ತೆ.

ಯಾವ ಜಿಲ್ಲೆಗೆ ಎಷ್ಟು ಡೋಸ್?
1.ಬಳ್ಳಾರಿ 22,160 ಡೋಸ್, 2.ಬೀದರ್​ನಲ್ಲಿ 11,180 ಡೋಸ್ 3.ಚಾಮರಾಜನಗರ 7,770 ಡೋಸ್, 4.ಚಿಕ್ಕಮಗಳೂರು 12,470 ಡೋಸ್ 5.ಚಿಕ್ಕಬಳ್ಳಾಪುರ 9,980 ಡೋಸ್, 6.ಚಿತ್ರದುರ್ಗ19,330 ಡೋಸ್ 7.ದಕ್ಷಿಣ ಕನ್ನಡ 48,450 ಡೋಸ್, 8.ದಾವಣಗೆರೆ 21,810 ಡೋಸ್ 9.ಕಲಬುರಗಿ 23,110 ಡೋಸ್, 10.ಹಾಸನದಲ್ಲಿ 21,560 ಡೋಸ್ 11.ಕೊಡಗು 7,960 ಡೋಸ್, 12.ಕೋಲಾರದಲ್ಲಿ 15,540 ಡೋಸ್ 13.ಮಂಡ್ಯದಲ್ಲಿ16,160 ಡೋಸ್, 14.ಮೈಸೂರಲ್ಲಿ 41,460 ಡೋಸ್ 15.ರಾಯಚೂರು 18,310 ಡೋಸ್, 16.ರಾಮನಗರ10,450 ಡೋಸ್
17.ಶಿವಮೊಗ್ಗದಲ್ಲಿ 26,470 ಡೋಸ್, 18.ತುಮಕೂರಲ್ಲಿ 23,810 ಡೋಸ್ 19.ಉಡುಪಿಯಲ್ಲಿ 23, 900 ಡೋಸ್, 20.ಯಾದಗಿರಿಯಲ್ಲಿ 6,000 ಡೋಸ್ 21.ಬೆಳಗಾವಿ ಸ್ಟೇಟ್ ವ್ಯಾಕ್ಸಿನ್ ಸ್ಟೋರೇಜ್ ನಿಂದ 8 ಜಿಲ್ಲೆಗಳಿಗೆ ವ್ಯಾಕ್ಸಿನ್ ವಿತರಣೆ 22.ಬಾಗಲಕೋಟೆ – 16,730 ಡೋಸ್, 23.ಬೆಳಗಾವಿ – 35,960 ಡೋಸ್ 24.ಧಾರವಾಡ – 28,380 ಡೋಸ್, 25.ಗದಗ – 10,870 ಡೋಸ್
26.ಹಾವೇರಿ – 8270 ಡೋಸ್, 27.ಕೊಪ್ಪಳ – 12,720 ಡೋಸ್ 28.ಉತ್ತರ ಕನ್ನಡ 15,090 ಡೋಸ್, 29.ವಿಜಯಪುರ 18,720 ಡೋಸ್ ವಿತರಣೆ 30.ಬೆಂಗಳೂರು ಸ್ಟೋರೇಜ್​ನಿಂದ ಒಟ್ಟು 6,47,500 ಡೋಸ್ ವಿತರಣೆ

ಇನ್ನು ರಾಜ್ಯದಲ್ಲಿ ಒಟ್ಟು 7ಲಕ್ಷದ 17 ಸಾವಿರದ 439 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಇಂದು ಒಂದೇ ದಿನ 24 ಸಾವಿರದ 300 ಕೊರೊನಾ ವಾರಿಯರ್ಸ್​ಗೆ ಲಸಿಕೆ ನೀಡುವ ಗುರಿ ಇದೆ. ಒಂದು ವಾರದೊಳಗೆ ಮೊದಲ ಹಂತದ ವಿತರಣೆ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಅಂತೂ ಹೆಮ್ಮಾರಿ ವಕ್ಕರಿಸಿ ವರ್ಷದ ಬಳಿಕ ಕೊನೆಗೂ ವ್ಯಾಕ್ಸಿನ್ ಕರುನಾಡಿನ ಕೈ ಸೇರಿದೆ. ಹೆಮ್ಮಾರಿಯನ್ನ ಹೊಡೆದೋಡಿಸೋಕೆ ಬ್ರಹ್ಮಾಸ್ತ್ರ ಸಿದ್ಧವಾಗಿದ್ದು, ಇಂದಿನಿಂದ್ಲೇ ಕಿಲ್ಲರ್ ವಿರುದ್ಧ ಮಹಾ ಸಮರ ಆರಂಭವಾಗಲಿದೆ. ಕೊರೊನಾ ವಾರಿಯರ್ಸ್​ಗೆ ಇಂದು ಲಸಿಕೆ ನೀಡೋ ಪ್ರಕ್ರಿಯೆ ಮೇಲೆ ಈಗ ಆರೂವರೆ ಕೋಟಿ ಕನ್ನಡಿಗರ ಚಿತ್ತ ನೆಟ್ಟಿದೆ.

ಮಹಾಮಾರಿ ತಡೆಗೆ ನಾಳೆಯಿಂದ ‘ಸಂಜೀವಿನಿ ಲಸಿಕೆ’ ಪರ್ವ! ಪ್ರತಿ ಲಸಿಕಾ ಕೇಂದ್ರದಲ್ಲಿ ದಿನಕ್ಕೆ100 ಮಂದಿಗೆ ಲಸಿಕೆ

Published On - 7:21 am, Sat, 16 January 21