50 ಲಕ್ಷ ರೂ. ಖರ್ಚು ಮಾಡಿ ಮದ್ವೆ: ಮೂರೇ ವರ್ಷದಲ್ಲಿ ಮಹಿಳಾ ಟೆಕ್ಕಿ ದುರಂತ ಸಾವು

ನಾನಾ ಕನಸುಗಳನ್ನ ಕಟ್ಟಿಕೊಂಡು ಮದುವೆಯಾಗಿದ್ದ ಇನ್ಫೋಸಿಸ್ ಮಹಿಳಾ ಉದ್ಯೋಗಿ ಮೂರೇ ವರ್ಷಗಳಲ್ಲಿ ದುರಂತ ಸಾವು ಕಂಡಿದ್ದಾರೆ.ಕಷ್ಟಪಟ್ಟು ಓದಿ ಇನ್ಫೋಸಿಸ್​​ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಳು. ಬಳಿಕ ಅರಾಮ್ ಆಗಿ ಜೀವನ ನಡೆಸಬೇಕೆಂದು ಮದುವೆ ಆಗಿದ್ದು, ಒಂದು ಮಗು ಸಹ ಇತ್ತು. ಜತೆಗೆ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದಳು. ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ಆಕೆಯ ಸಾವಿನ ಸುದ್ದಿ ಕಂಗಾಲಾಗಿಸಿದೆ.

50 ಲಕ್ಷ ರೂ. ಖರ್ಚು ಮಾಡಿ ಮದ್ವೆ: ಮೂರೇ ವರ್ಷದಲ್ಲಿ ಮಹಿಳಾ ಟೆಕ್ಕಿ ದುರಂತ ಸಾವು
Techie Shilpa

Updated on: Aug 28, 2025 | 9:09 PM

ಬೆಂಗಳೂರು (ಆಗಸ್ಟ್  28): ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ (infosys techie shilpa) (27) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಸುದ್ಧಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಟೆಕ್ಕಿಯನ್ನು ಶಿಲ್ಪಾ ಎಂದು ಗುರುತಿಸಲಾಗಿದೆ. ಶಿಲ್ಪಾ, ಪ್ರವೀಣ್ ಎಂಬಾತನನ್ನು 3 ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಒಂದು ಮಗು ಸಹ ಆಗಿತ್ತು. ಜೊತೆಗೆ ಇನ್ನೊಂದು ಮಗುವನ ನಿರೀಕ್ಷೆದ್ದರು. ಆದ್ರೆ ಒಂದುವರೆ ತಿಂಗಳು ಗರ್ಭಿಣಿಯಾಗಿದ್ದ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರವೀಣ್ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆ ಎಂದು ಶಿಲ್ಪಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಶಿಲ್ಪಾ ಬಿಟೆಕ್ ಓದಿದ್ರೆ ಪ್ರವೀಣ್​ ಕೂಡ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶಿಲ್ಪಾ ಪೋಷಕರು ಸಾಫ್ಟವೇರ್​ ಗಂಡ ಎಂದು 130 ಗ್ರಾಂ ಚಿನ್ನ ಕೊಟ್ಟು, 35 ಲಕ್ಷದಷ್ಟು ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದ್ರೆ ಪ್ರವೀಣ್ ಹಣದಾಹ ಮಾತ್ರ ತೀರಿಲ್ವಂತೆ. ಮದುವೆಯಾದ ಮೇಲೂ ಹಣಕ್ಕಾಗಿ ಪೀಡಿಸುತ್ತಿದ್ದ. ಈ ಮಧ್ಯೆ ಸಾಫ್ಟವೇರ್ ಕೆಲಸ ಬಿಟ್ಟು ಶಿಲ್ಪಾ ಪೋಷಕರಿಂದ 5 ಲಕ್ಷ ಹಣ ತೆಗೆದುಕೊಂಡು ಪಾನಿಪೂರಿ ವ್ಯಾಪಾರ ಶುರು ಮಾಡಿದ್ದ. ಆದ್ರೆ ಪತ್ನಿಗೆ ಕಾಟ ಮಾತ್ರ ತಪ್ಪಿರಲಿಲ್ವಂತೆ.

ಇದನ್ನೂ ಓದಿ: ಆತ್ಮಹತ್ಯೆಗೂ ಮುನ್ನ ಕುಣಿಕೆ ಜತೆ ಸೆಲ್ಫೀ! ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

2 ದಿನಗಳ ಹಿಂದೆ ಕರೆ ಮಾಡಿದ್ದ ಪ್ರವೀಣ್, ನಿಮ್ಮ ಮಗಳಿಗೆ ಹಾರ್ಟ್ ಆಟ್ಯಾಕ್ ಆಗಿದೆ ಬನ್ನಿ ಎಂದು ಹೇಳಿದ್ದನಂತೆ. ಪೋಷಕರು ಬಂದು ನೋಡಿದ್ರೆ ಮಂಚದ ಮೇಲೆ ಮಗಳ ಶವವಾಗಿ ಬಿದ್ದಿದ್ದಾಳೆ ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ. ಸದ್ಯ ಸುದ್ದುಗುಂಟೆ ಪಾಳ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪ್ರವೀಣ್​ನನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಶಿಲ್ಪಾ ತಾಯಿ ಶಾರದಾ ಮಾತನಾಡಿ, ‘ನನ್ನ ಮಗಳಿಗೆ ಪ್ರತಿದಿನ ಕಿರುಕುಳ ಕೊಡುತ್ತಿದ್ದರು. ಇತ್ತೀಚೆಗೆ ₹10 ಲಕ್ಷ ಹಣವನ್ನೂ ನೀಡಿದ್ದೆವು. ಆದರೆ ಕಿರುಕುಳ ನಿಲ್ಲಲಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಇಂತಹ ಘಟನೆ ಬೇರೆ ಹೆಣ್ಣುಮಕ್ಕಳಿಗೆ ಆಗಬಾರದು’ ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೆ, ತಮ್ಮ ಅಳಿಯ ಪ್ರವೀಣ್ ಕಳೆದ 3 ತಿಂಗಳಿಂದ ತನ್ನೊಂದಿಗೆ ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ