ಬೆಂಗಳೂರು: ನಿನ್ನೆ ರಾತ್ರಿ ಸಾವಿಗೀಡಾದ ಸಿಐಡಿ ಡಿವೈಎಸ್‌ಪಿ ಲಕ್ಷ್ಮೀ ಮತ್ತು ನವೀನ್‌ರದ್ದು ಪಕ್ಕಾ ಲವ್ ಸ್ಟೋರಿ. ಇಬ್ಬರೂ ಪ್ರೀತಿಸಿ, ಮನೆಯವರನ್ನೂ ಒಪ್ಪಿಸಿ ಮದುವೆಯಾಗಿದ್ದವರು. ಲಕ್ಷ್ಮೀ ಮತ್ತು ನವೀನ್ ಪಿಇಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆಯೇ ಇವರಿಬ್ಬರಿಗೂ ಪ್ರೇಮಾಂಕುರವಾಗಿತ್ತು.
ಕಾಲೇಜಿನಲ್ಲಿದ್ದಾಗಲೇ ಪ್ರೀತಿಯಲ್ಲಿ ಬಿದ್ದಿದ್ರು ಡಿವೈಎಸ್‌ಪಿ:
ಕಾಲೇಜಿನಲ್ಲಿ ಓದುವಾಗಲೇ ಪ್ರೀತಿಯಲ್ಲಿ ಬಿದ್ದಿದ್ದ ಇವರಿಬ್ಬರೂ ಸುಮಾರು ನಾಲ್ಕು ವರ್ಷ ಪ್ರೀತಿಸಿ ಬಳಿಕ ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದರು. ಲಕ್ಷ್ಮಿ ಬೋವಿ ಸಮುದಾಯದವರಾಗಿದ್ದು, ನವೀನ್ ನಾಯ್ಡು ಜನಾಂಗದವರು. ಹೀಗಾಗಿ ಮೊದಲಿಗೆ ಇವರಿಬ್ಬರ ಮನೆಯಲ್ಲಿ ಇವರ ಪ್ರೀತಿಯನ್ನು ನಿರಾಕರಿಸಲಾಗಿತ್ತು.
ಕೆಎಸ್ ಪಿಎಸ್ ಆಯ್ಕೆ ಮಾಡಿಕೊಂಡು ಬೆಂಗಳೂರಿಗೆ ಬಂದರು. ನವೀನ್ ದುಬೈ ಕೆಲಸದ ಬಳಿಕ ಅಮೇಜಾನ್ನಲ್ಲಿ ಕೆಲಸ ಮಾಡಿದ್ರು. ನಂತರ ಆ ಕಂಪನಿ ಸಹ ತೊರೆದು ಮತ್ತೊಂದು ಕಡೆ ಕೆಲಸಕ್ಕೆ ಹೋದ್ರು. ಈ ರೀತಿ ಇವರಿಬ್ಬರ ಸಂಸಾರ ಸಾಗುತ್ತಿತ್ತು. ಈ ಮಧ್ಯೆ, ಕೆಲಸದ ವಿಚಾರಕ್ಕೆ ಸಂಬಂಧಿಸಿ ನವೀನ್ ಹೈದ್ರಾಬಾದ್ಗೆ ತೆರಳಿದ್ದಾರೆ.
ಇದೇ ವೇಳೆ ಸಿಐಡಿ DySP Lakshmi ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಈ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
DySP ಲಕ್ಷ್ಮೀ ಅನುಮಾನಾಸ್ಪದ ಸಾವು: ಲಕ್ಷ್ಮೀ ಸ್ನೇಹಿತ ಸೇರಿದಂತೆ ನಾಲ್ವರು ಪೊಲೀಸ್ ವಶಕ್ಕೆ
Published On - 2:47 pm, Thu, 17 December 20