Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರದೆ ಮೇಲೆ ಕುಟುಂಬದ ದರ್ಶನ: ಜೈಲುಹಕ್ಕಿಗಳ ಮಾನಸಿಕ ಒತ್ತಡ ಕಳೆಯುತ್ತಿದೆ ಇ-ಮುಲಾಕಾತ್

ಕಾರಾಗೃಹದಲ್ಲಿರುವ ಬಂಧಿಗಳಿಗೆ ಅವರ ಕುಟುಂಬದರವನ್ನು ಸಂಪರ್ಕಿಸಲು ಈ ಮುಲಾಕಾತ್ ಆ್ಯಪ್ ಸಹಕಾರಿಯಾಗಿದೆ. ಈ ಯೋಜನೆಯನ್ನು ಬಿಸಿಲನಾಡು ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ.

ಪರದೆ ಮೇಲೆ ಕುಟುಂಬದ ದರ್ಶನ: ಜೈಲುಹಕ್ಕಿಗಳ ಮಾನಸಿಕ ಒತ್ತಡ ಕಳೆಯುತ್ತಿದೆ ಇ-ಮುಲಾಕಾತ್
ವರ್ಚುವಲ್ ವ್ಯವಸ್ಥೆಯ ಮೂಲಕ ಕುಟುಂಬವನ್ನು ಸಂಪರ್ಕಿಸುತ್ತಿರುವ ಜೈಲುಹಕ್ಕಿ (ಸಾಂಕೇತಿಕ ಚಿತ್ರ)
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 17, 2020 | 3:32 PM

ರಾಯಚೂರು: ಬಂಧಿಖಾನೆಗಳಲ್ಲಿರುವ ವಿಚಾರಣಾಧೀನ ಖೈದಿಗಳಿಗೆ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಕಳೆದ ಮಾರ್ಚ್​ನಿಂದ ಸಂಬಂಧಿಕರ ಭೇಟಿಯನ್ನು ನಿರ್ಬಂಧಿಸಲಾಗಿತ್ತು. ಆದರೆ ಎರಡು ದಿನಗಳ ಹಿಂದಷ್ಟೇ, ರಾಜ್ಯ ಸರ್ಕಾರ ಇ-ಮುಲಾಕಾತ್ ವ್ಯವಸ್ಥೆಯಡಿ ಆನ್​ಲೈನ್ ಮೂಲಕ ವಿಚಾರಣಾಧೀನ ಖೈದಿಗಳು ಕುಟುಂಬದ ಸದಸ್ಯರ ಜತೆಗೆ ಸಮಾಲೋಚನೆ ನಡೆಸುವ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ಬಿಸಿಲನಾಡು ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ಸರ್ಕಾರದ ನಿಯಮಾವಳಿಗಳ ಅನುಸಾರ ಅನುಷ್ಠಾನಗೊಳಿಸಲಾಗಿದೆ.

ಖೈದಿಗಳನ್ನು ಸಂಪರ್ಕಿಸಲು ಏನು ಮಾಡಬೇಕು? ಸಂಬಂಧಿಗಳು ಇ-ಮುಲಾಕಾತ್ ಆ್ಯಪ್ ಡೌನ್​ಲೌಡ್ ಮಾಡಿಕೊಂಡು ಅಲ್ಲಿ ಕೇಳಲಾದ ಮಾಹಿತಿಯನ್ನು ಒದಗಿಸಬೇಕು. ಕಾರಾಗೃಹ ಇಲಾಖೆಯು ಸಂಬಂಧಿಕರ ಮೊಬೈಲಿಗೆ ಒಟಿಪಿ ಕಳಿಸಿ ನೋಂದಣಿ ಮಾಡುತ್ತದೆ. ಎಂದು? ಯಾವ ಸಮಯಕ್ಕೆ ಅವರು ಬಂಧಿತ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಲು ಅವಕಾಶ ದೊರೆಯುತ್ತದೆ ಎಂಬ ಮಾಹಿತಿ ಕುಟುಂಬದವರಿಗೆ ರವಾನೆಯಾಗುತ್ತದೆ. ಅದೇ ಸಮಯಕ್ಕೆ ಸರಿಯಾಗಿ ಕಾರಾಗೃಹದಲ್ಲಿರುವ ವ್ಯಕ್ತಿಯನ್ನು ಜಿಲ್ಲಾ ಕಾರಾಗೃಹದ ಹಿರಿಯ ಅಧಿಕಾರಿಗಳು ಲ್ಯಾಪ್​ಟಾಪ್ ಬಳಿ ಕರೆತರುತ್ತಾರೆ. ಈ ಮೂಲಕ ಕುಟುಂಬದವರನ್ನು ವರ್ಚುವಲ್ ಆಗಿ ಜೈಲುಹಕ್ಕಿಗಳನ್ನು ಭೇಟಿ ಆಗಬಹುದು.

ಮಾನಸಿಕ ಒತ್ತಡ ನಿವಾರಣೆ ಕಳೆದ 9 ತಿಂಗಳಿಂದ ಕುಟುಂಬದ ಸದಸ್ಯರ ಸಂಪರ್ಕ ಕಳೆದುಕೊಂಡು ಮಾನಸಿಕವಾಗಿ ಒತ್ತಡದಲ್ಲಿರುವ ಖೈದಿಗಳಿಗೆ ಇ-ಮುಲಾಕಾತ್ ನೆರವಾಗುತ್ತಿದೆ. ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ಒಟ್ಟು 171 ಖೈದಿಗಳಿದ್ದಾರೆ. ಈ ಪೈಕಿ 164 ಮಂದಿ ಪುರುಷರು ಮತ್ತು 7 ಮಹಿಳೆಯರು. ತಮ್ಮ ಸಂಬಂಧಿಕರ ಭೇಟಿಗೆ ಬ್ರೇಕ್ ಬಿದ್ದಿದ್ದರಿಂದ ಅನೇಕರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಇಂಥವರಿಗೆ ಒ-ಮುಲಾಕಾತ್ ನೆರವಾಗಿದೆ. ದೇಶದ ನಾನಾ ಕಡೆಗೆ ಎರಡನೇ ಅಲೆಯಲ್ಲಿ ಸೊಂಕು ಹರಡುತ್ತಿರುವ ಮಾತು ವ್ಯಾಪಕವಾಗಿದೆ. ಚಳಿಗಾಲದಲ್ಲಿ ಇದರ ತೀವ್ರತೆ ಹೆಚ್ಚಾಗುವ ಭೀತಿಯು ಎದುರಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಕಾರಾಗೃಹದಲ್ಲಿರುವ ಬಂಧಿಗಳಿಗೆ ಅವರ ಕುಟುಂಬದರವನ್ನು ಸಂಪರ್ಕಿಸಲು ಈ ಮುಲಾಕಾತ್ ಆ್ಯಪ್ ಸಹಕಾರಿಯಾಗಿದೆ.

ಸರ್ಕಾರದ ಸೂಚನೆಗಳ ಅನ್ವಯ ಇ-ಮುಲಾಕಾತ್ ಮೂಲಕ ಜೈಲುಹಕ್ಕಿಗಳಿಗೆ ಅವರ ಕುಟುಂಬದವರೊಂದಿಗೆ ಸಂಪರ್ಕ ಕಲ್ಪಿಸಿಕೊಡಲಾಗುತ್ತಿದೆ. ಸರ್ಕಾರದ ಆದೇಶದಂತೆ ರಾಯಚೂರು ಜಿಲ್ಲಾ ಕಾರಾಗೃಹದಲ್ಲೂ ಈ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಜೈಲು ಅಧೀಕ್ಷಕರಾದ ಬಿ.ಆರ್.ಅಂದಾನಿ.

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ