ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ ಮಲ್ನಾಡ್
ಸೋನು ನಿಗಮ್ ಅವರನ್ನು ಬ್ಯಾನ್ ಮಾಡಬೇಕು ಎಂಬ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಗಾಯಕಿ ಶಮಿತಾ ಮಲ್ನಾಡ್ ಕೂಡ ಭಾಗಿಯಾಗಿದ್ದರು. ಬಳಿಕ ಅವರು ಟಿವಿ9 ಜೊತೆ ಮಾತನಾಡಿ ತಮ್ಮ ಅನಿಸಿಕೆ ಹಂಚಿಕೊಂಡರು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಅವರು ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿ ಮಾತನಾಡಿದ್ದನ್ನು ಗಾಯಕಿ ಶಮಿತಾ ಮಲ್ನಾಡ್ ಅವರು ಖಂಡಿಸಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಸೋನು ನಿಗಮ್ ಅವರ ಅಭಿಮಾನಿ. ಆದರೆ ಅಭಿಮಾನವೇ ಬೇರೆ. ಅವರ ಹೇಳಿಕೆಯನ್ನು ಕನ್ನಡಿಗಳಾಗಿ ನಾನು ಖಂಡಿಸುತ್ತೇನೆ. ಸಂಗೀತ ಕಾರ್ಯಕ್ರಮ ಮಾಡವಾಗ ತಾಳ್ಮೆ ಬಹಳ ಮುಖ್ಯ. ಅಭಿಮಾನಿಗಳು ಇಂಥದ್ದೇ ಹಾಡು ಹೇಳಿ ಎಂದು ಒತ್ತಾಯ ಮಾಡುವುದು ತುಂಬಾ ಸಹಜ’ ಎಂದು ಶಮಿತಾ ಮಲ್ನಾಡ್ (Shamitha Malnad) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
