ನೆರೆ ಪರಿಹಾರ ನೀಡಲು ಕೇಂದ್ರ ಹಿಂದೇಟು, ಆದ್ರೆ ಕರ್ನಾಟಕದಿಂದ್ಲೇ ಹೆಚ್ಚು ತೆರಿಗೆ ಸಂಗ್ರಹ!
ಬೆಂಗಳೂರು: ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿಯಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಪರಿಹಾರಾರ್ಥ ಹಣಕಾಸು ನೆರವು ನೀಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದು ಮುಂದು ನೋಡುತ್ತಿದೆ. ಆದ್ರೆ ಇತಹ ಭೀಕರ ಪರಿಸ್ಥಿತಿಯಲ್ಲೂ ಕರ್ನಾಟಕ ರಾಜ್ಯವು ಕೇಂದ್ರಕ್ಕೆ ತೆರಿಗೆ ಕಟ್ಟುವಲ್ಲಿ ಹಿಂದೆ ಬಿದ್ದಿಲ್ಲ. ನೇರ ತೆರಿಗೆ ಆದಾಯದಲ್ಲಿ 3 ರಾಜ್ಯಗಳದ್ದು ಸಿಂಹಪಾಲು ಇರುವುದಾಗಿ ವರದಿಯಾಗಿದೆ. ಆದಾಯ ತೆರಿಗೆ ಸಂಗ್ರಹ ಬಾಬತ್ತಿನಲ್ಲಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ ರಾಜ್ಯಗಳದ್ದೇ ಸಿಂಹಪಾಲು. ಮೂರೂ ರಾಜ್ಯಗಳಿಂದ ಶೇ. 61ರಷ್ಟು ಆದಾಯ ತೆರಿಗೆ […]
ಬೆಂಗಳೂರು: ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿಯಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಪರಿಹಾರಾರ್ಥ ಹಣಕಾಸು ನೆರವು ನೀಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದು ಮುಂದು ನೋಡುತ್ತಿದೆ. ಆದ್ರೆ ಇತಹ ಭೀಕರ ಪರಿಸ್ಥಿತಿಯಲ್ಲೂ ಕರ್ನಾಟಕ ರಾಜ್ಯವು ಕೇಂದ್ರಕ್ಕೆ ತೆರಿಗೆ ಕಟ್ಟುವಲ್ಲಿ ಹಿಂದೆ ಬಿದ್ದಿಲ್ಲ.
ನೇರ ತೆರಿಗೆ ಆದಾಯದಲ್ಲಿ 3 ರಾಜ್ಯಗಳದ್ದು ಸಿಂಹಪಾಲು ಇರುವುದಾಗಿ ವರದಿಯಾಗಿದೆ. ಆದಾಯ ತೆರಿಗೆ ಸಂಗ್ರಹ ಬಾಬತ್ತಿನಲ್ಲಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ ರಾಜ್ಯಗಳದ್ದೇ ಸಿಂಹಪಾಲು. ಮೂರೂ ರಾಜ್ಯಗಳಿಂದ ಶೇ. 61ರಷ್ಟು ಆದಾಯ ತೆರಿಗೆ ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ 19,17,944 ಕೋಟಿ ರೂ. ಸಂಗ್ರಹವಾಗಿದ್ದರೆ ದೆಹಲಿಯಲ್ಲಿ 6,93,275 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಕರ್ನಾಟಕವು 4,99,310 ಕೋಟಿ ರೂಪಾಯಿಯನ್ನು ಆದಾಯ ತೆರಿಗೆಯಾಗಿ ಕೇಂದ್ರಕ್ಕೆ ಪಾವತಿಸಿದೆ.