ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ: ತಮ್ಮದೇ ಶಾಸಕರ ಮನೆಗೆ ಮುತ್ತಿಗೆ ಹಾಕುವಂತೆ ಸಚಿವ ಮುನಿಯಪ್ಪ ಕರೆ

ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ವಿಚಾರವಾಗಿ ತೀವ್ರ ಸ್ವರೂಪದ ಹೋರಾಟ ನಡೆಸುವಂತೆ ಮಾದಿಗ ಸಮುದಾಯದ ಮುಖಂಡರಿಗೆ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಕರೆ ನೀಡಿದ್ದಾರೆ. ತಮ್ಮದೇ ಸರ್ಕಾರ ಇದ್ದರೂ ಶಾಸಕರ ಮನೆಗೆ ಮುತ್ತಿಗೆ ಹಾಕುವಂತೆ ಕರೆ ನೀಡಿದ್ದಾರೆ.

ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ: ತಮ್ಮದೇ ಶಾಸಕರ ಮನೆಗೆ ಮುತ್ತಿಗೆ ಹಾಕುವಂತೆ ಸಚಿವ ಮುನಿಯಪ್ಪ ಕರೆ
ಆಹಾರ ಇಲಾಖೆ ಸಚಿವ ಮುನಿಯಪ್ಪ
Follow us
ಪ್ರಸನ್ನ ಗಾಂವ್ಕರ್​
| Updated By: ಗಂಗಾಧರ​ ಬ. ಸಾಬೋಜಿ

Updated on: Nov 06, 2023 | 8:32 PM

ಬೆಂಗಳೂರು, ನವೆಂಬರ್​​​​ 06: ನ್ಯಾ.ಸದಾಶಿವ ಆಯೋಗದ (Justice Sadashiva Commission) ವರದಿಯಂತೆ ಒಳ ಮೀಸಲಾತಿ ವಿಚಾರವಾಗಿ ತೀವ್ರ ಸ್ವರೂಪದ ಹೋರಾಟ ನಡೆಸುವಂತೆ ಮಾದಿಗ ಸಮುದಾಯದ ಮುಖಂಡರಿಗೆ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಕರೆ ನೀಡಿದ್ದಾರೆ. ತಮ್ಮದೇ ಸರ್ಕಾರ ಇದ್ದರೂ ಶಾಸಕರ ಮನೆಗೆ ಮುತ್ತಿಗೆ ಹಾಕುವಂತೆ ಕರೆ ನೀಡಿದ್ದಾರೆ. ನ್ಯಾ.ಸದಾಶಿವ ಆಯೋಗ, ಕಾಂತರಾಜ್ ವರದಿ ವಿಚಾರವಾಗಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರ ಹೋರಾಟ ಒಗ್ಗಟ್ಟಿನಲ್ಲಿ ಸಾಗಬೇಕು ಎಂದು ಹೇಳಿದ್ದಾರೆ.

ನಿಮ್ಮ ಕ್ಷೇತ್ರಗಳ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಿ. ಹೋರಾಟ ತೀವ್ರಸ್ವರೂಪ ಕಾಣಬೇಕು, ಆಗ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ನಾನು ಸಚಿವನಾಗಿ ಈ ಮಾತು ಹೇಳ್ತಿದ್ದೇನೆ, ಹೀಗೆ ಹೇಳುವ ಸಂದರ್ಭ ಬಂದಿದೆ. ನಾನು ಈಗ ಸಚಿವನಾಗಿದ್ದೇನೆ, ನಾನಿದ್ದ ಮೇಲೆ ಬೇರೆಯವರ ಆಟ ನಡೆಯಲ್ಲ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದರು.

ಇದನ್ನೂ ಓದಿ: ಸರ್ಕಾರಕ್ಕೆ ಸಂಕಷ್ಟ: ಕಾಂತರಾಜ್, ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಒತ್ತಡ

ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿತು. ಆದರೆ ವೈಜ್ಞಾನಿಕವಾಗಿ ಒಳ ಮೀಸಲಾತಿ ಹಂಚಿಕೆ ಮಾಡಿಲ್ಲ. ಇದು ಸುಪ್ರೀಂಕೋರ್ಟ್​ನಲ್ಲಿ ನಿಲ್ಲೋದಿಲ್ಲ. ಯಾಕೆಂದರೆ ಮೀಸಲಾತಿ ಪ್ರಮಾಣ 50% ಮೀರುವ ಹಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಾರಿ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ತಮ್ಮ ಸಮುದಾಯದ ನಾಯಕರ ಬಗ್ಗೆ ಶಾಸಕಿ ರೂಪಾ ಶಶಿಧರ್ ಬೇಸರ

ಸಭೆಯಲ್ಲಿ ಶಾಸಕಿ ರೂಪಾ ಶಶಿಧರ್​ ಮಾತನಾಡಿ, ತಮ್ಮ ಸಮುದಾಯದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷದ ಸರ್ಕಾರವೇ ಅಧಿಕಾರದಲ್ಲಿದೆ. ಒಳ ಮೀಸಲಾತಿ ಸಮುದಾಯಕ್ಕೆ ಅಗತ್ಯ ಅಂತ ಗೊತ್ತಿದ್ರೂ ಒಟ್ಟಿಗೆ ಇಚ್ಛಾಶಕ್ತಿ ಪ್ರದರ್ಶನ ಆಗುತ್ತಿಲ್ಲ. ಒಳ ಮೀಸಲಾತಿ ಬೇಕು ಅಂತ ನಮ್ಮವರೇ ಒತ್ತಡ ತರಬೇಕಿತ್ತು. ಆ ಕೆಲಸವನ್ನು ನಮ್ಮ ಸರ್ಕಾರದಲ್ಲೇ ಯಾಕೆ ಯಾರೂ ಮಾಡಿಲ್ಲ ಅಂತ ಗೊತ್ತಿಲ್ಲ ಎಂದಿದ್ದಾರೆ.

ಮೀಸಲಾತಿ ತಡೆ ಹಿಡಿಯೋದು ಒಂದು ಜನಾಂಗದ ಹತ್ಯೆ ಮಾಡಿದಂತೆ: ಸದಸ್ಯ ಎಲ್.ಹನುಮಂತಯ್ಯ

ಸಭೆಯಲ್ಲಿ ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ನ್ಯಾ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ತಡೆ ಹಿಡಿಯೋದು ಒಂದು ಜನಾಂಗದ ಹತ್ಯೆ ಮಾಡಿದಂತೆ. ಒಳಮೀಸಲಾತಿ ಬಗ್ಗೆ ಮಾದಿಗ ಸಮುದಾಯದವರು ಹೊರತುಪಡಿಸಿ ಉಳಿದ ಪರಿಶಿಷ್ಟ ಸಮುದಾಯದವರು ಮೌನವಾಗಿದ್ದಾರೆ. ಇದು ನಮ್ಮ ಮುಂದೆ ಇರುವ ಇಕ್ಕಟ್ಟು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್