ಕಾರವಾರ: ಇಂದು ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಚತಾ ದಿನ (International Coastal Cleanup Day) ವಾಗಿದ್ದು, ವಿಶ್ವದಾದ್ಯಂತ ಕಡಲ ತೀರಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ನಡೆಸಲಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಸ್ವಚ್ಛತಾ ಕಾರ್ಯ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Thawar Chand Gehlot) ಅವರು ಕಾರವಾರಕ್ಕೆ ಅಗಮಿಸಿದ್ದಾರೆ.
ಶುಕ್ರವಾರ ಸಂಜೆ ಗೋವಾದಿಂದ ರಸ್ತೆ ಮಾರ್ಗದಲ್ಲಿ ಬಂದ ರಾಜ್ಯಪಾಲರನ್ನು ಉತ್ತರಕನ್ನಡ ಜಿಲ್ಲಾಡಳಿತದಿಂದ ಕಾರವಾರ ತಾಲೂಕಿನ ಮಾಜಾಳಿ ಗಡಿಯಲ್ಲಿ ಗೌರವವಂದನೆ ನೀಡಿ ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಅವರನ್ನು ಅರಗಾದಲ್ಲಿರುವ ಸೀಬರ್ಡ್ ನೌಕಾನೆಲೆಗೆ ಕರೆದೊಯ್ಯಲಾಯಿತು.
ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಿದ ಅವರನ್ನು ನೌಕಾನೆಲೆಯ ಅಧಿಕಾರಿಗಳು ಗೌರವಪೂರ್ವಕವಾಗಿ ಸ್ವಾಗತಿಸಿಕೊಂಡರು. ನಂತರ ನೌಕಾ ಸೇನಾಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಅವರು ಸಮಾಲೋಚನೆ ನಡೆಸಿದರು. ಇಂದು ಟ್ಯಾಗೋರ್ ಕಡಲ ತೀರದಲ್ಲಿ ಆಯೋಜನೆಗೊಂಡಿರುವ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಚತಾ ದಿನ ಎಂದರೇನು?
ಅಂತಾರಾಷ್ಟ್ರೀಯ ಕರಾವಳಿ ಶುಚಿಗೊಳಿಸುವಿಕೆಯು ಸೆಪ್ಟೆಂಬರ್ 17 ರಂದು ನಡೆಯುವ ವಾರ್ಷಿಕ ಕಾರ್ಯಕ್ರಮವಾಗಿದೆ. ಇದು ಕರಾವಳಿ ಮತ್ತು ಜಲಮಾರ್ಗಗಳನ್ನು ಸ್ವಚ್ಛಗೊಳಿಸಲು ಪ್ರಪಂಚದಾದ್ಯಂತದ ನಾಗರಿಕರು ಒಟ್ಟಾಗಿ ಸೇರುವ ದಿನವಾಗಿದೆ. ಕರಾವಳಿ ಸ್ವಚ್ಛತಾ ದಿನವು 30 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿತು. ಇದನ್ನು ಲಿಂಡಾ ಮರನಿಸ್ ಮತ್ತು ಕ್ಯಾಥಿ ಒ’ಹರಾ ಅವರು ಆರಂಭಿಸಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 am, Sat, 17 September 22