ಬಾಂಗ್ಲಾದೇಶ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಅಂತಿಮ ಘಟ್ಟ ತಲುಪಿದ ಪೊಲೀಸರ ತನಿಖೆ, ಹಲವು ಅಂಶಗಳು ಲಭ್ಯ

| Updated By: sandhya thejappa

Updated on: Jun 24, 2021 | 8:40 AM

ಪ್ರಕರಣದಲ್ಲಿ ಭಾಗಿಯಾಗಿದ್ದ ಅರೋಪಿಗಳು ಹಾಗು ಸಂತ್ರಸ್ತೆ ಎಲ್ಲರೂ ಬಾಂಗ್ಲಾದೇಶದವರು. ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದಿದ್ದರು ಎನ್ನುವುದು ಬಹಿರಂಗವಾಗಿದೆ. ಹಣದ ವಿಚಾರಕ್ಕೆ ಯುವತಿ ಮೇಲೆ ಹಲ್ಲೆ ಮಾಡಿ ಕೃತ್ಯವೆಸಗಿದ್ದಾರೆ. ಕೃತ್ಯ ಸಂಬಂಧ ಒಟ್ಟು ಹನ್ನೊಂದು ಅರೋಪಿಗಳ ವಿರುದ್ಧ ಚಾರ್ ಶೀಟ್ ಸಿದ್ಧತೆಯಾಗಿದೆ.

ಬಾಂಗ್ಲಾದೇಶ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಅಂತಿಮ ಘಟ್ಟ ತಲುಪಿದ ಪೊಲೀಸರ ತನಿಖೆ, ಹಲವು ಅಂಶಗಳು ಲಭ್ಯ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬಾಂಗ್ಲಾದೇಶ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ತನಿಖೆ ಅಂತಿಮಘಟ್ಟ ತಲುಪಿದ್ದು, ತನಿಖೆ ಪೂರ್ಣ ಗೊಳಿಸಿ ಎರಡು, ಮೂರು ದಿನದಲ್ಲಿ ಚಾರ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ. ಪ್ರಕರಣ ಸಂಬಂಧ ಹನ್ನೊಂದು ಅರೋಪಿಗಳ ವಿರುದ್ಧ ಪೊಲೀಸರು ಚಾರ್ ಶೀಟ್ ತಯಾರಿ ಮಾಡಿದ್ದಾರೆ. ಅತ್ಯಾಚಾರ ನಡೆಸಿದವರು, ಹಲ್ಲೆ ಮಾಡಿದವರು ಹಾಗೂ ಘಟನೆ ಸಮಯದಲ್ಲಿ ಸ್ಥಳದಲ್ಲಿದ್ದ ಎಲ್ಲರ ವಿರುದ್ಧ ಚಾರ್ ಶೀಟ್ ತಯಾರಿಯಾಗಿದೆ.

ತನಿಖೆ ವೇಳೆ ಚಾರ್ ಶೀಟ್​ನಲ್ಲಿರುವ ಅಂಶಗಳು ಟಿವಿ9ಗೆ ಲಭ್ಯ

ಪ್ರಕರಣದಲ್ಲಿ ಭಾಗಿಯಾಗಿದ್ದ ಅರೋಪಿಗಳು ಹಾಗು ಸಂತ್ರಸ್ತೆ ಎಲ್ಲರೂ ಬಾಂಗ್ಲಾದೇಶದವರು. ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದಿದ್ದರು ಎನ್ನುವುದು ಬಹಿರಂಗವಾಗಿದೆ. ಹಣದ ವಿಚಾರಕ್ಕೆ ಯುವತಿ ಮೇಲೆ ಹಲ್ಲೆ ಮಾಡಿ ಕೃತ್ಯವೆಸಗಿದ್ದಾರೆ. ಕೃತ್ಯ ಸಂಬಂಧ ಒಟ್ಟು ಹನ್ನೊಂದು ಅರೋಪಿಗಳ ವಿರುದ್ಧ ಚಾರ್ ಶೀಟ್ ಸಿದ್ಧತೆಯಾಗಿದೆ. ತನಿಖೆ ವೇಳೆ ಒಟ್ಟು ಮೂವತ್ತಕ್ಕು ಹೆಚ್ಚು ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಈ ಪೈಕಿ ಆರು ಜನ ಪ್ರತ್ಯಕ್ಷ ಸಾಕ್ಷಿಗಳಿಂದ 164 ಹೇಳಿಕೆಗಳನ್ನು ದಾಖಲು ಮಾಡಿಸಲಾಗಿದೆ.

ಕೃತ್ಯ ನಡೆದ ಸ್ಥಳ ಹಾಗು ವಿಡಿಯೋದಲ್ಲಿ ಪ್ರಮುಖ ಸಾಕ್ಷಿಗಳು ಪತ್ತೆ

ಎಲ್ಲರು ಕೃತ್ಯ ನಡೆದ ಸಮಯದಲ್ಲಿ ಒಟ್ಟಿಗೆ ಇದ್ದರು ಎಂಬುದಕ್ಕೆ ವಿಡಿಯೋ ಹಾಗು ಮೊಬೈಲ್ ನೆಟ್ವರ್ಕ್​ನಿಂದ ಖಚಿತವಾಗಿದೆ. ಎಲ್ಲರೂ ಬಾಂಗ್ಲಾದೇಶದವರೆ ಎಂಬುದಕ್ಕೆ ದಾಖಲೆಗಳು ಲಭ್ಯವಾಗಿದೆ. ಅರೋಪಿಗಳು ಬಾಂಗ್ಲಾದೇಶದಲ್ಲಿ ಇರುವವರ ಜೊತೆಗೆ ನಿರಂತರ ಫೋನ್ ಸಂಪರ್ಕದಲ್ಲಿದ್ದರು. ಯುವತಿಗೆ ನಡೆಸಿದ್ದ ಮೆಡಿಕಲ್ ಟೆಸ್ಟ್ ಹಾಗು ಅರೋಪಿತರಿಗೆ ನಡೆಸಿದ್ದ ಮೆಡಿಕಲ್ ಟೆಸ್ಟ್​ನಲ್ಲಿ ಕೃತ್ಯ ನಡೆದಿರುವುದು ಖಚಿತವಾಗಿದೆ. ಕೂದಲು, ರಕ್ತ, ಉಗುರಿನ ಮಾದರಿಗಳನ್ನು ಕಲೆ ಹಾಕಲಾಗಿತ್ತು. ಕಲೆ ಹಾಕಿದ್ದ ಮಾದರಿಗಳಿಂದಲು ಅತ್ಯಾಚಾರ ನಡೆದಿರುವುದು ಹಾಗು ನಡೆಸಿರುವ ಅರೋಪಿಗಳು ಇವರೆ ಎಂಬುದು ಪಕ್ಕಾ ಆಗಿದೆ.

ಮಾಂಸ ದಂಧೆ
ಬಾಂಗ್ಲಾದೇಶದಿಂದ ಬಂದು ಮಾಂಸ ದಂಧೆ ನಡೆಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅರೋಪಿ ಹಾಗು ಸಂತ್ರಸ್ತೆ ಎಲ್ಲರು ಒಂದೆ ಗುಂಪಿನವರು. ಎಲ್ಲರು ರಫೀ ಎಂಬುವವನ ಮೂಲಕ ಭಾರತಕ್ಕೆ ಅಗಮಿಸಿದ್ದರು. ಬಳಿಕ ಬೆಂಗಳೂರು, ಗೋವಾ, ಹೈದರಾಬಾದ್, ಚೆನ್ನೈ, ಕೇರಳದಲ್ಲಿ ಮಾಂಸ ದಂಧೆ ನಡಸಿದ್ದಾರೆ. ಮಸಾಜ್ ಪಾರ್ಲರ್ ಹೆಸರಿನಲ್ಲಿ ದಂಧೆ ನಡೆಸಿದ್ದಾರೆ. ಸಂತ್ರಸ್ತ ಯುವತಿ ಕೂಡಾ ದಂಧೆಯಲ್ಲಿ ಭಾಗಿಯಾಗಿದ್ದಳು ಎನ್ನುವುದಕ್ಕೆ ಸಾಕ್ಷಿಯಿದೆ.

ಸಂತ್ರಸ್ತ ಯುವತಿ ಕೇರಳಗೆ ನಾಲ್ವರು ಯುವತಿಯರನ್ನು ಕರೆದುಕೊಂಡು ಹೋಗಿದ್ದಳು. ನಾಲ್ವರು ಯುವತಿಯರನ್ನು ಕರೆದುಕೊಂಡು ಹೋಗಿದ್ದ ಕಾರಣ ಅರೋಪಿಗಳಿಗೆ ಲಾಸ್ ಅಗಿತ್ತು. ಇದೇ ಕಾರಣಕ್ಕೆ ಸಂತ್ರಸ್ತೆಯನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದರು. ಕಾಲಿನಿಂದ ಗುಪ್ತಾಂಗಕ್ಕೆ ಹಲ್ಲೆ ಮಾಡಿದ್ದರು. ಬಳಿಕ ಗಾಜಿನ ಬಾಟಲಿಯನ್ನು ಹಾಕಿ ವಿಕೃತಿ ಮೆರೆದಿದ್ದರು. ತನಿಖೆ ವೇಳೆ ಅರೋಪಿಗಳು ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿ ವಿಡಿಯೋ ಮಾಡಿಕೊಂಡಿರುವುದು ಪತ್ತೆಯಾಗಿದೆ. ಸದ್ಯ ತನಿಖೆಯಲ್ಲಿ ಕಂಡುಬಂದ ಸಂಪೂರ್ಣ ಮಾಹಿತಿ, ಸಾಕ್ಷಿಗಳ ಸಹಿತ ರಾಮಮೂರ್ತಿ ನಗರ ಪೊಲೀಸರು ಚಾರ್ ಶೀಟ್ ಸಲ್ಲಿಸಲಿದ್ದಾರೆ.

ಇದನ್ನೂ ಓದಿ

ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಬೃಹತ್ ಮಾನವ ಕಳ್ಳಸಾಗಣೆ ಜಾಲ ಬಹಿರಂಗ

ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಮೇಲೆ ಅತ್ಯಾಚಾರ ಪ್ರಕರಣದ ಬಂಧಿತರಿಗೆ ಆಧಾರ್ ಕಾರ್ಡ್ ಸಿಕ್ಕಿದ್ದೇಗೆ?

(investigation into the rape of  Bangladesh young woman has reached its final stage)

Published On - 8:39 am, Thu, 24 June 21