Delta Plus Variant ಮೈಸೂರಿನಲ್ಲಿ ಮತ್ತೆ 3 ಡೆಲ್ಟಾ ಪ್ಲಸ್ ಕೇಸ್‌ಗಳು ಪತ್ತೆ, ಆತಂಕ ಹೆಚ್ಚಿಸುತ್ತಿದೆ ಈ ವೈರಸ್

Delta Plus Case in Mysuru ನಿನ್ನೆಯಷ್ಟೇ ಮೈಸೂರು, ಬೆಂಗಳೂರಿನಲ್ಲಿ ತಲಾ ಒಂದು ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿತ್ತು. ಈಗ ಮೈಸೂರಿನಲ್ಲಿ ಮತ್ತೆ 3 ಡೆಲ್ಟಾ ಪ್ಲಸ್ ವೈರಸ್ ಕೇಸ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಟಿವಿ9ಗೆ ಆರೋಗ್ಯ ಇಲಾಖೆಯ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಮೇ ತಿಂಗಳಿನಲ್ಲಿ 20ಕ್ಕೂ ಹೆಚ್ಚು ಸ್ಯಾಂಪಲ್ಸ್ ಕಳಿಸಲಾಗಿತ್ತು.

Delta Plus Variant ಮೈಸೂರಿನಲ್ಲಿ ಮತ್ತೆ 3 ಡೆಲ್ಟಾ ಪ್ಲಸ್ ಕೇಸ್‌ಗಳು ಪತ್ತೆ, ಆತಂಕ ಹೆಚ್ಚಿಸುತ್ತಿದೆ ಈ ವೈರಸ್
ಮೈಸೂರು
Follow us
TV9 Web
| Updated By: ಆಯೇಷಾ ಬಾನು

Updated on: Jun 24, 2021 | 8:08 AM

ಮೈಸೂರು: ಸಾವಿರಾರು ಸಾವು ನೋವಿಗೆ ಕಾರಣವಾಗಿರೋ ಕೊರೊನಾ ಎರಡನೇ ಅಲೆ ಅಬ್ಬರ ಇನ್ನೇನು ತಗ್ಗುತ್ತಿದೆ ಅನ್ನುವಷ್ಟರಲ್ಲಿ ಮತ್ತೊಂದು ರೂಪಾಂತರಿ ಅಟ್ಯಾಕ್ ಮಾಡಿದೆ. ಬೇರೆ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದ ಹೊಸ ರೂಪಾಂತರಿ ಡೆಲ್ಟಾ ಪ್ಲಸ್ ಕರುನಾಡಿಗೇ ಬಂದಪ್ಪಳಿಸಿದೆ. ಅದ್ರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಮೊದಲ ಡೆಲ್ಟಾ ಪ್ಲಸ್ ಕೇಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲೂ ಡೇಂಜರಸ್ ಡೆಲ್ಟಾ ಆತಂಕ ಮನೆಮಾಡಿದೆ.

ನಿನ್ನೆಯಷ್ಟೇ ಮೈಸೂರು, ಬೆಂಗಳೂರಿನಲ್ಲಿ ತಲಾ ಒಂದು ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿತ್ತು. ಈಗ ಮೈಸೂರಿನಲ್ಲಿ ಮತ್ತೆ 3 ಡೆಲ್ಟಾ ಪ್ಲಸ್ ವೈರಸ್ ಕೇಸ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಟಿವಿ9ಗೆ ಆರೋಗ್ಯ ಇಲಾಖೆಯ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಮೇ ತಿಂಗಳಿನಲ್ಲಿ 20ಕ್ಕೂ ಹೆಚ್ಚು ಸ್ಯಾಂಪಲ್ಸ್ ಕಳಿಸಲಾಗಿತ್ತು. ಈ ಸ್ಯಾಂಪಲ್ಸ್ ಪೈಕಿ ಮೂವರಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದ್ದು ಸದ್ಯ ಮೂವರು ಡೆಲ್ಟಾ ಪ್ಲಸ್ ಸೋಂಕಿತರು ಗುಣಮುಖರಾಗಿದ್ದಾರೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ತಮಿಳುನಾಡಿನಿಂದ ಮೈಸೂರಿಗೆ ಬಂದ ವ್ಯಕ್ತಿಗೆ ಡೆಲ್ಟಾ ಪ್ಲಸ್..? ಮೂಲಗಳ ಪ್ರಕಾರ ನಿನ್ನೆ ಪತ್ತೆಯಾದ ಆ ವ್ಯಕ್ತಿ ತಮಿಳುನಾಡಿನಿಂದ ಮೈಸೂರಿಗೆ ಬಂದಿದ್ದ ಎನ್ನಲಾಗಿದೆ. NCBS ಅಂದ್ರೆ ಜಿನೋಮಿಕ್ ಸಿಕ್ವೆನ್ಸ್ ಪರೀಕ್ಷೆಯಲ್ಲಿ ಈ ವ್ಯಕ್ತಿಗೆ ಡೆಲ್ಟಾ ಪ್ಲಸ್ ಪಾಸಿಟಿವ್ ಬಂದಿದೆ. ಆದ್ರೆ ಮೈಸೂರಿನ ಡಿಹೆಚ್ಓ ಮಾಹಿತಿ ಪ್ರಕಾರ, ಆ ವ್ಯಕ್ತಿ ಮೈಸೂರಿನಲ್ಲೇ ಇದ್ದ, ಡೆಲ್ಟಾ ಪ್ಲಸ್ ಬಂದಿರೋ ವ್ಯಕ್ತಿ ಎಲ್ಲೂ ಹೋಗಿಲ್ಲ ಅಂತಾ ಹೇಳ್ತಿದ್ದಾರೆ. ಅಷ್ಟೇ ಅಲ್ಲ ಆ ವ್ಯಕ್ತಿಯ ದೇಹದಲ್ಲೇ ವೈರಸ್ ರೂಪಾಂತರವಾಗಿರೋ ಬಗ್ಗೆ ಶಂಕೆ ವ್ಯಕ್ತಪಡಿಸ್ತಿದ್ದರು.

ಎರಡೇ ದಿನಗಳಲ್ಲಿ ಡಬಲ್, 4ವರ್ಷದ ಮಗುವಿಗೂ ಅಟ್ಯಾಕ್..! ಇತ್ತ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಕೇಸ್ ಪತ್ತೆಯಾಗ್ತಿದ್ದಂತೆ ದೇಶದ ಕೆಲ ರಾಜ್ಯಗಳಲ್ಲೂ ಡೆಲ್ಟಾ ಪ್ಲಸ್ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಎರಡು ದಿನಗಳ ಹಿಂದೆ 20ರ ಆಸುಪಾಸಿನಲ್ಲಿದ್ದ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ ನಿನ್ನೆಗೆ ಡಬಲ್ ಆಗಿದ್ದು, ಸುಮಾರು 40 ಜನರಿಗೆ ಡೆಲ್ಟಾ ಪ್ಲಸ್ ಅಟ್ಯಾಕ್ ಆಗಿದ್ಯಂತೆ. ಇದೇ ವೇಳೆ ಕೇರಳದ 4 ವರ್ಷದ ಮಗುವಿಗೂ ಡೆಲ್ಟಾ ಪ್ಲಸ್ ಅಟ್ಯಾಕ್ ಆಗಿದೆ ಎನ್ನಲಾಗಿದೆ.

ಇನ್ನು ಸದ್ಯ ಪತ್ತೆಯಾಗಿರೋದು ಒಂದೆರಡು ಕೇಸ್ ಅಂತಾ ಮೈಮರೆತ್ರೆ, 2ನೇ ಅಲೆಯಲ್ಲಾಗಿರೋ ದುರಂತಕ್ಕಿಂತಲೂ ಹೆಚ್ಚಿನ ಬೆಲೆ ನಾವು-ನೀವು ತೆರಬೇಕಾಗುತ್ತೆ. ಹೀಗಾಗೇ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ವಾರ್ನಿಂಗ್ ಕೊಟ್ಟಿದೆ. ಡೆಲ್ಟಾ ಪ್ಲಸ್ ಭೀಕರವಾಗಿದ್ದು, ಇದುವರೆಗೂ ವಿವಿಧ ರಾಜ್ಯಗಳಲ್ಲಿ 40 ಡೆಲ್ಟಾ ಪ್ಲಸ್ ಕೇಸ್ ಪತ್ತೆಯಾಗಿವೆ. ಹೀಗಾಗಿ ಈ ರೂಪಾಂತರಿ ವೈರಸ್ ಪತ್ತೆಯಾದವರ ಟ್ರಾವೆಲ್ ಹಿಸ್ಟರಿ ಪರಿಶೀಲನೆ ನಡೆಸಲು ಸೂಚಿಸಿದೆ. ರಾಜ್ಯ ಸರ್ಕಾರವೂ ಈ ವಿಚಾರದಲ್ಲಿ ತುಂಬಾನೇ ಸಿರಿಯಸ್ ಆಗಿದ್ದು, ಪ್ರತಿ ಜಿಲ್ಲೆಗಳಲ್ಲೂ ಱಂಡಮ್ ಟೆಸ್ಟ್ ಮಾಡೋಕೆ ನಿರ್ಧಾರ ಮಾಡಿದೆ.

ರೂಪಾಂತರಗೊಂಡ ಕೊರೊನಾ ವೈರಸ್ ಡೆಲ್ಟಾ ಪ್ಲಸ್, ಕೊರೊನಾ ಹಿಂದಿನ ರೂಪಾಂತರಕ್ಕಿಂತಲೂ ಮಿಂಚಿನ ವೇಗದಲ್ಲಿ ಹರಡುತ್ತೆ ಅಂತಾ ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಅಲ್ಲದೇ ಅತ್ಯಂತ ಪರಿಣಾಮಕಾರಿ ಅಂತಾ ಎಚ್ಚರಿಕೆ ಕೊಟ್ಟಿದೆ. ಅದೇಗೆ ಅಂದ್ರೆ, ಡೆಲ್ಟಾ ಪ್ಲಸ್ ಒಂದು ಸಲ ಹೊಕ್ಕಿದ್ರೆ ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತೆ. ಉಸಿರಾಟದ ಸಮಸ್ಯೆಯನ್ನ ಉಲ್ಬಣಗೊಳಿಸಿಬಿಡುತ್ತೆ. ಅಲ್ಲದೇ ಲಸಿಕೆಯಿಂದ ಹೆಚ್ಚಾದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಶಕ್ತಿ ಡೆಲ್ಟಾ ಪ್ಲಸ್‌ಗಿದ್ದು, ದೇಹದಲ್ಲಿರೋ ಆ್ಯಂಟಿಬಾಡಿಯನ್ನು ಕುಂದಿಸುವ ಗುಣ ಡೆಲ್ಟಾ ಪ್ಲಸ್ಿಗಿದೆಯಂತೆ. ಆಘಾತಕಾರಿ ವಿಚಾರ ಏನಂದ್ರೆ, ಎರಡನೇ ಅಲೆಯಲ್ಲೇ ಡೆಲ್ಟಾ ಪ್ಲಸ್ ದಾಳಿ ಶುರು ಮಾಡಿರೋ ಶಂಕೆ ವ್ಯಕ್ತಪಡಿಸಿರೋ ವೈದ್ಯರು, ಮೂರನೇ ಅಲೆಗೆ ಡೆಲ್ಟಾಪ್ಲಸ್ ಕಾರಣವಾಗಬಹುದು ಅಂತಾ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Delta Plus ದೂರವಾದ ಆತಂಕ, ಮಹಾರಾಷ್ಟ್ರದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ಕೊರೊನಾದಿಂದ ಬಹುತೇಕರು ಗುಣಮುಖ!!

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ