Delta Plus ದೂರವಾದ ಆತಂಕ, ಮಹಾರಾಷ್ಟ್ರದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ಕೊರೊನಾದಿಂದ ಬಹುತೇಕರು ಗುಣಮುಖ!!

ನಮ್ಮ ದೇಶದಲ್ಲಿ ಏಪ್ರಿಲ್ ತಿಂಗಳಿನಿಂದಲೇ ಡೆಲ್ಟಾ ಪ್ಲಸ್ ಪ್ರಭೇದದ ರೂಪಾಂತರಗೊಂಡ ವೈರಸ್ ಇತ್ತು ಎಂಬುದು ಜೆನೋಮ್ ಸಿಕ್ವೇನ್ಸಿಂಗ್ ನಿಂದ ದೃಢಪಟ್ಟಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಡೆಲ್ಟಾ ಪ್ಲಸ್ ಪ್ರಭೇದದ ಸೋಂಕಿತ ವ್ಯಕ್ತಿಗಳು ಈಗಾಗಲೇ ಕೊರೊನಾದಿಂದ ಗುಣಮುಖ ಆಗಿರುವುದು ವಿಶೇಷ.

Delta Plus ದೂರವಾದ ಆತಂಕ, ಮಹಾರಾಷ್ಟ್ರದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ಕೊರೊನಾದಿಂದ ಬಹುತೇಕರು ಗುಣಮುಖ!!
ಪ್ರಾತಿನಿಧಿಕ ಚಿತ್ರ
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Jun 23, 2021 | 5:05 PM

ಭಾರತದಲ್ಲಿ ಈಗ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಏಪ್ರಿಲ್ ತಿಂಗಳಿನಿಂದಲೇ ಡೆಲ್ಟಾ ಪ್ಲಸ್ ಪ್ರಭೇದದ ರೂಪಾಂತರಗೊಂಡ ವೈರಸ್ ಇತ್ತು ಎಂಬುದು ಜೆನೋಮ್ ಸಿಕ್ವೇನ್ಸಿಂಗ್ ನಿಂದ ದೃಢಪಟ್ಟಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಡೆಲ್ಟಾ ಪ್ಲಸ್ ಪ್ರಭೇದದ ಸೋಂಕಿತ ವ್ಯಕ್ತಿಗಳು ಈಗಾಗಲೇ ಕೊರೊನಾದಿಂದ ಗುಣಮುಖ ಆಗಿರುವುದು ವಿಶೇಷ.

ನಮ್ಮ ಭಾರತದಲ್ಲಿ ಸದ್ಯ 40 ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಇವುಗಳ ಪೈಕಿ ಅರ್ಧದಷ್ಟು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಪತ್ತೆಯಾಗಿವೆ. ಮಹಾರಾಷ್ಟ್ರ ರಾಜ್ಯದಲ್ಲಿ 21 ಡೆಲ್ಟಾ ಪ್ಲಸ್ ಪ್ರಭೇದದ ಪ್ರಕರಣಗಳು ಪತ್ತೆಯಾಗಿವೆ. ವಿಶೇಷ ಅಂದ್ರೆ, ಮಹಾರಾಷ್ಟ್ರ ರಾಜ್ಯದಲ್ಲಿ ಏಪ್ರಿಲ್ 5ರಂದೇ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಇತ್ತು ಎಂಬುದು ಜೆನೋಮ್ ಸಿಕ್ವೇನ್ಸಿಂಗ್ ನಿಂದ ದೃಢಪಟ್ಟಿದೆ.

ಆದರೆ, ಕಳೆದೊಂದು ವಾರದಿಂದ ಡೆಲ್ಟಾ ಪ್ಲಸ್ ಪ್ರಭೇದದ ಜೆನೋಮ್ ಸಿಕ್ವೇನ್ಸಿಂಗ್ ಫಲಿತಾಂಶ ಬಹಿರಂಗವಾಗುತ್ತಿದೆ. ಹೀಗಾಗಿ ಭಾರತದಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಡೆಲ್ಟಾ ಪ್ಲಸ್ ಪ್ರಭೇದ ಇಲ್ಲ ಎಂದು ಸಾಬೀತಾಗುತ್ತಿದೆ. ಕೆಲ ರಾಜ್ಯಗಳಲ್ಲಿ ಕಳೆದ 2 ತಿಂಗಳಿನಿಂದ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ದೇಶದಲ್ಲಿ ಈಗ ಕೊರೊನಾ ಕೇಸ್ ಇಳಿಕೆಯ ಹಾದಿಯಲ್ಲಿರುವುದರಿಂದ ಡೆಲ್ಟಾ ಪ್ಲಸ್ ಬಗ್ಗೆ ಹೆಚ್ಚಿನ ಆತಂಕ ಬೇಡ ಎಂದು ಕೂಡ ವಿಜ್ಞಾನಿಗಳ ಒಂದು ವರ್ಗ ಪ್ರತಿಪಾದಿಸುತ್ತಿದೆ.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9) ಮಹಾರಾಷ್ಟ್ರ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಪ್ರಭೇದದ ಕೊರೊನಾ ವೈರಸ್ ಕಾಣಿಸಿಕೊಂಡಿದ್ದವರಲ್ಲಿ ಬಹುತೇಕರು ಈಗಾಗಲೇ ಕೊರೊನಾದಿಂದ ಗುಣಮುಖ ಆಗಿದ್ದಾರೆ. ಡೆಲ್ಟಾ ಪ್ಲಸ್ ಪ್ರಭೇದದಿಂದ ಸಾವು-ನೋವು ಮಹಾರಾಷ್ಟ್ರದಲ್ಲಿ ಸಂಭವಿಸಿಲ್ಲ. ಮುಂಬೈನಲ್ಲಿ ಏಪ್ರಿಲ್ 5 ಮತ್ತು 15ರಂದು ಡೆಲ್ಟಾ ಪ್ಲಸ್ ಪ್ರಭೇದದ ಎರಡು ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಕಳೆದೆರೆಡು ತಿಂಗಳಿನಿಂದ ಮುಂಬೈನಲ್ಲಿ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಇತ್ತು ಎಂಬುದು ಸಾಬೀತಾಗಿದೆ. ಥಾಣೆಯ ಓರ್ವ ನಿವಾಸಿ, 78 ವರ್ಷದ ಮತ್ತೊಬ್ಬ ಮುಂಬೈ ವ್ಯಕ್ತಿಯಲ್ಲಿ ಡೆಲ್ಟಾ ಪ್ಲಸ್ ಪ್ರಭೇದ ಪತ್ತೆಯಾಗಿತ್ತು. ಡೆಲ್ಟಾ ಪ್ಲಸ್ ಪ್ರಭೇದ ಪತ್ತೆಯಾದವರಾರು ಕೊರೊನಾ ಲಸಿಕೆ ಹಾಕಿಸಿಕೊಂಡಿರಲಿಲ್ಲ.

ಪಾಲಿಕೆಯ ಅಧಿಕಾರಿಗಳು ಹೇಳುವ ಪ್ರಕಾರ, 78 ವರ್ಷದ ವ್ಯಕ್ತಿ ಕೊರೊನಾದಿಂದ ಗುಣಮುಖ ಆಗಿದ್ದಾರೆ. ಈಗ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲ. 78 ವರ್ಷದ ವ್ಯಕ್ತಿಯ ಕುಟುಂಬದ ಮತ್ತೊಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು. ಅವರು ಈಗಾಗಲೇ ಕೊರೊನಾದಿಂದ ಗುಣಮುಖ ಆಗಿದ್ದಾರೆ. ಮುಂಬೈನ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್ ಕಾಕನಿ ಹೇಳುವ ಪ್ರಕಾರ, ನಾವು ಡೆಲ್ಟಾ ಪ್ಲಸ್ ಪ್ರಭೇದದ ಸೋಂಕು ಪತ್ತೆಯಾದವರ ಮೇಲೆ ನಿಗಾ ವಹಿಸಿದ್ದೇವೆ. ಆದರೆ, ಎರಡೂವರೆ ತಿಂಗಳ ಹಿಂದೆ ಕೊರೊನಾ ಬಂದು ಗುಣಮುಖ ಆಗಿರುವುದರಿಂದ ಈಗ ಮಾಡುವಂಥದ್ದು ಏನೂ ಇಲ್ಲ ಎಂದಿದ್ದಾರೆ.

ಮಹಾರಾಷ್ಟ್ರದ ಆರು ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪತ್ತೆಯಾಗಿತ್ತು. ರತ್ನಗಿರಿ ಜಿಲ್ಲೆಯಲ್ಲಿ 9, ಜಲಗಾಂವ್ ಜಿಲ್ಲೆಯಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ. ಬಹುತೇಕರಿಗೆ ಮೇ ತಿಂಗಳಿನಲ್ಲಿ ಕೊರೊನಾ ಸೋಂಕು ತಗುಲಿ ಈಗಾಗಲೇ ಗುಣಮುಖರಾಗಿದ್ದಾರೆ. ಆದರೆ, ಈಗ ಡೆಲ್ಟಾ ಪ್ಲಸ್ ಪ್ರಭೇದದ ಸೋಂಕು ಪತ್ತೆಯಾಗಿದ್ದವರ ಮನೆ ಬಳಿ ಈಗ ಆರೋಗ್ಯ ಇಲಾಖೆಯಿಂದ ನಿಗಾ ವಹಿಸಲಾಗುತ್ತಿದೆ. ಅವರ ಸಂಪರ್ಕದಲ್ಲಿದ್ದವರು, ನೆರೆಹೊರೆಯವರ ಕೊರೊನಾ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತಿದೆ.

ಜಲಗಾಂವ್ ಜಿಲ್ಲೆಯಲ್ಲಿ ಜೂನ್ 12, 13 ರಂದು ಕ್ಯಾಂಪ್ ನಡೆಸಿ, 165 ಮಂದಿಯ ಕೊರೊನಾ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಇಬ್ಬರಿಗೆ ಮಾತ್ರ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಆದರೆ, ಇಬ್ಬರಿಗೂ ಕೊರೊನಾ ರೋಗಲಕ್ಷಣಗಳಿಲ್ಲ. ಸಿಂಧುದುರ್ಗ ಜಿಲ್ಲೆಯಲ್ಲಿ ಒಂದು ಡೆಲ್ಟಾ ಪ್ಲಸ್ ಪ್ರಭೇದದ ಪ್ರಕರಣ ಪತ್ತೆಯಾಗಿದೆ. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪತ್ತೆಯಾಗಿದ್ದವರು, ವಾಸ ಇದ್ದ ವಸತಿ ಕಾಂಪ್ಲೆಕ್ಸ್ ಸೇರಿದಂತೆ ಸುತ್ತಮುತ್ತಲ ಆರು ಕಾಂಪ್ಲೆಕ್ಸ್ ನಲ್ಲಿರುವ ಎಲ್ಲರ ಕೊರೊನಾ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಇನ್ನೂ ಜಲಗಾಂವ್ ಜಿಲ್ಲೆಯಲ್ಲಿ ಎಲ್ಲ ಏಳು ಮಂದಿ ಡೆಲ್ಟಾ ಪ್ಲಸ್ ಪ್ರಭೇದದ ಸೋಂಕಿತರು ವಿಚಖೇಡಾ ಎಂಬ ಒಂದೇ ಗ್ರಾಮದವರು. ಈ ಗ್ರಾಮದಲ್ಲಿ 1,200ಜನಸಂಖ್ಯೆ ಇದೆ. ಈ ಏಳು ಮಂದಿಯು ಮೇ, 5 ರಂದು ಟೆಸ್ಟಿಂಗ್ ನಡೆಸಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಇವರ ಸ್ಯಾಂಪಲ್ ಗಳನ್ನು ಜಲಗಾಂವ್ ಮೆಡಿಕಲ್ ಕಾಲೇಜು ಹಾಗೂ ಪುಣೆಗೆ ಜೆನೋಮ್ ಸಿಕ್ವೇನ್ಸಿಂಗ್ ಗಾಗಿ ಕಳಿಸಲಾಗಿತ್ತು.

60 ವರ್ಷದ ಎಲೆಕ್ಟ್ರಿಷಿಯನ್ ಗೆ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಇರೋದು ದೃಢಪಟ್ಟಿತ್ತು. ಹಾಲು ಮಾರಾಟ ಮಾಡುವ ವ್ಯಕ್ತಿಯ ಪತ್ನಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ, ಹಾಲು ಮಾರುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಇನ್ನೂ ಇಬ್ಬರು ಸೂರತ್ ಗೆ ಜ್ಯುವೆಲ್ಲರಿ ಕೆಲಸಕ್ಕಾಗಿ ಹೋಗಿದ್ದರು. ಜಲಗಾಂವ್ ಜಿಲ್ಲೆಯ ಸಹಾಯಕ ಆರೋಗ್ಯ ಅಧಿಕಾರಿ ಡಾಕ್ಟರ್ ಡಿ.ಎಸ್.ಪಟೋಡೆ ಹೇಳುವ ಪ್ರಕಾರ, ಯಾರಿಗೂ ಕೊರೊನಾದ ಲಕ್ಷಣಗಳಿಲ್ಲ. ಕೊರೊನಾ ಹರಡುವಿಕೆಯಲ್ಲೂ ಬಾರಿ ಏರಿಕೆಯೇನೂ ಕಂಡು ಬಂದಿಲ್ಲ ಎಂದಿದ್ದಾರೆ.

ಸಿಂಧುದುರ್ಗ ಜಿಲ್ಲೆಯಲ್ಲಿ ಓರ್ವ ಶಿಕ್ಷಕರಿಗೆ ಡೆಲ್ಟಾ ಪ್ಲಸ್ ಪ್ರಭೇದದ ಸೋಂಕು ಇದಿದ್ದು ಜೆನೋಮ್ ಸಿಕ್ವೇನ್ಸಿಂಗ್ ನಿಂದ ದೃಢಪಟ್ಟಿದೆ. ಮೇ, 22 ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಆದರೆ, ಶಿಕ್ಷಕ ಈಗಾಗಲೇ ಕೊರೊನಾದಿಂದ ಗುಣಮುಖ ಆಗಿದ್ದಾರೆ. ಶಿಕ್ಷಕರ ಸಂಪರ್ಕದಲ್ಲಿದ್ದ ಮೂವರು ಹೈ ರಿಸ್ಕ್ ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲಿತ್ತು. ಎಲ್ಲರೂ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖ ಆಗಿದ್ದಾರೆ. ಶಿಕ್ಷಕನ ಕುಟುಂಬ ಸೇರಿದಂತೆ 225 ನಿವಾಸಿಗಳ ಕೊರೊನಾ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ ಎಂದು ಡಾಕ್ಟರ್ ಮಹೇಶ್ ಹೇಳಿದ್ದಾರೆ.

ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಪ್ರಭೇದದ ಸೋಂಕು ತಗುಲಿದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಜೊತೆಗೆ ಕೊರೊನಾ ವೈರಸ್ ಕೂಡ ವೇಗವಾಗಿ ಹರಡಿಲ್ಲ. ಡೆಲ್ಟಾ ಪ್ಲಸ್ ಪ್ರಭೇದದ ಸೋಂಕು ಇದ್ದವರು ಕೂಡ ಈಗಾಗಲೇ ಕೊರೊನಾದಿಂದ ಗುಣಮುಖ ಆಗಿದ್ದಾರೆ. ಹೀಗಾಗಿ ಡೆಲ್ಟಾ ಪ್ಲಸ್ ಪ್ರಭೇದದ ಬಗ್ಗೆ ಬಾರಿ ಭಯ, ಆತಂಕ ಬೇಡ. ಜನರು ತಮ್ಮ ಎಚ್ಚರಿಕೆಯಲ್ಲಿ ತಾವಿದ್ದರೇ ಎಲ್ಲರಿಗೂ ಒಳ್ಳೆಯದು. ಕೊರೊನಾ ತಡೆ ಪ್ರೋಟೋಕಾಲ್ ಅನುಸರಿಸಿಕೊಂಡು ಹೋಗುವುದು ಒಳ್ಳೆಯದು.

(maharashtra 21 patients recovered from delta corona plus virus)

ಷೇರುಪೇಟೆಯಲ್ಲಿ ಪತರಗುಟ್ಟಿದ ಅದಾನಿ ಕಂಪನಿಯ ಷೇರು ಬೆಲೆ; ಮೂರು ಗಂಟೆಯಲ್ಲಿ 92 ಸಾವಿರ ಕೋಟಿ ರೂ ಗಂಟು ನಷ್ಟ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ