ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಮ್ಮೆ ಕೊರೊನಾ ಹೈ ಅಲರ್ಟ್ ಮಂತ್ರ ಜಪಿಸುತ್ತಿದೆ ಆರೋಗ್ಯ ಇಲಾಖೆ. ಬ್ರಿಟನ್ ಹೊಸ ರೂಪಾಂತರಿ ವೈರಸ್ ಬಗ್ಗೆ ಏರ್‌ಪೋರ್ಟ್‌ನಲ್ಲಿ ಕಟ್ಟೆಚ್ಚರ ವಹಿಸಲಾಗ್ತಿದೆ. ಇದ್ರ ಬೆನ್ನಲ್ಲೇ ಈಗ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನೂತನ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಕರುನಾಡಿಗೂ ಕಂಟಕದ ಭೀತಿ ಎದುರಾಗಿದೆ. ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗಿದೆ.
ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಪ್ರಯಾಣದ ಹಿನ್ನೆಲೆ ಇರುವವರಿಗೆಲ್ಲಾ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಅವ್ರ ಬಳಿ ನೆಗೆಟಿವ್ ರಿಪೋರ್ಟ್ ಇದ್ರೂ ಇಲ್ಲಿಗೆ ಬಂದ ನಂತ್ರ ಕಡ್ಡಯಾವಾಗಿ ಆರ್‌ಟಿಪಿಸಿಆರ್ ಮಾಡಿಸಲೇಬೇಕು. ಪಾಸಿಟಿವ್ ಬಂದವ್ರಿಗೆ 14ನ ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಎಲ್ಲಾ ಪಾಸಿಟಿವ್ ಸ್ಯಾಂಪಲ್‌ಗಳನ್ನ ನಿಮ್ಹಾನ್ಸ್‌ಗೆ ಜೆನೆಟಿಕ್ ಪರೀಕ್ಷೆಗೆ ರವಾನೆ ಮಾಡಲಾಗುತ್ತೆ. ನೆಗೆಟಿವ್ ಬಂದವರು 14 ದಿನ ಹೋಮ್ ಕ್ವಾರಂಟೈನ್ ಆಗಲೇಬೇಕು. ಅವ್ರಿಗೂ 7ನೇ ದಿನ ಮತ್ತೊಮ್ಮೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುವುದು ಅಂತ ಆರೋಗ್ಯ ಇಲಾಖೆ ಹೇಳಿದೆ.
ಕೇರಳದಿಂದ ಬಂದವರಿಗೂ ಕೊರೊನಾ ಟೆಸ್ಟ್ ಕಡ್ಡಾಯ
ಇನ್ನು ಕೇರಳದಿಂದ ಬಂದವರಿಗೂ ಕೊರೊನಾ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಪಾಸಿಟಿವ್ ಕಂಡು ಬಂದ್ರೆ ಅವರ ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುತ್ತೆ. ಕೇರಳದಿಂದ ಬರುವವರು ಶಿಕ್ಷಣಕ್ಕಾಗಿ, ಪ್ರವಾಸಕ್ಕಾಗಿ, ರೆಸಾರ್ಟ್‌ಗಳಲ್ಲಿ ಉಳಿದುಕೊಳ್ಳುವವರಾಗಲಿ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಅದು ಕೂಡ 72 ಗಂಟೆಯೊಳಗೆ ಟೆಸ್ಟ್ ಮಾಡಿಸಿರೋ ರಿಪೋರ್ಟ್ ಇರಬೇಕು. ಇದ್ರ ನಡುವೆ ಬೊಮ್ಮನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. 1052 ಜನರಿಗೆ ಟೆಸ್ಟ್ ಮಾಡಲಾಗಿದ್ದು, 103 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಒಟ್ನಲ್ಲಿ ಕೊರೊನಾ ಮಹಾಮಾರಿ ಕಂಟಕ ಮತ್ತೆ ಶುರುವಾಗಿದೆ. ಬೇರೆ ಬೇರೆ ದೇಶಗಳಿಂದ ಮತ್ತೊಮ್ಮೆ ನಮ್ಮ ರಾಜ್ಯಕ್ಕೆ ಎಂಟ್ರಿಕೊಟ್ರೆ ಹೇಗಪ್ಪ ಅನ್ನೋ ಭಯ ಆವರಿಸಿದೆ. ಇದರಿಂದಾಗಿ ಏರ್‌ಪೋರ್ಟ್‌ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗ್ತಿದೆ.
Published On - 7:07 am, Wed, 17 February 21