BBMP ಬೆಂಗಳೂರಲ್ಲಿ ಮತ್ತೆ ಕೊರೊನಾ ಹಾವಳಿ: ಕಾವಲ್‌ಭೈರಸಂದ್ರದಲ್ಲಿ 40 ಕೇಸ್, ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಸೋಂಕು ದೃಢ
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಇದೀಗ, ಕಾವಲ್‌ಭೈರಸಂದ್ರದಲ್ಲಿ 40 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಜೊತೆಗೆ, ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಒಂದರ ನಿವಾಸಿಗಳಲ್ಲಿ ಸಹ ಸೋಂಕು ದೃಢಪಟ್ಟಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಇದೀಗ, ಕಾವಲ್‌ಭೈರಸಂದ್ರದಲ್ಲಿ 40 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಜೊತೆಗೆ, ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಒಂದರ ನಿವಾಸಿಗಳಲ್ಲಿ ಸಹ ಸೋಂಕು ದೃಢಪಟ್ಟಿದೆ. ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನಿನ್ನೆ ಮತ್ತು ಮೊನ್ನೆ 500 ಜನರ ಪೈಕಿ 28 ಜನರಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ ಎಂದು BBMP ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.
141 ಪ್ರೈಮರಿ ಹೆಲ್ತ್ ಸೆಂಟರ್, 341 ಟೆಸ್ಟ್ ಟೀಂ ಇದೆ. ಸೋಂಕಿತರ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ಟ್ರೇಸ್ಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಇತರೆ ಲಕ್ಷಣ ಇರುವವರೂ ಟೆಸ್ಟ್ ಮಾಡಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಕೊರೊನಾ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ದರೆ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಌಕ್ಟ್ ಅಡಿ ಕ್ರಮ ಜರುಗಿಸಲಾಗುವುದು.
ಇದಲ್ಲದೆ, ವ್ಯಾಕ್ಸಿನ್ ಹಾಕಿಸಿಕೊಂಡ್ರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜೊತೆಗೆ, ಪ್ರೈಮರಿ & ಸೆಕೆಂಡರಿ ಕಾಂಟ್ಯಾಕ್ಟ್ ಟ್ರೇಸ್ ಮಾಡಲು ಸೂಚನೆ ಕೊಡಲಾಗಿದೆ. ಕಂದಾಯ, ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು BBMP ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದರು.
ಇದನ್ನೂ ಓದಿ: Siddaramaiah | ನಾನು ಮೊನ್ನೆ ಟೈಲರ್ ಬಳಿ ನನ್ನ ಎದೆ ಚೆಕ್ ಮಾಡಿಸಿದೆ.. ನಂದು 46 ಇಂಚಿನ ಎದೆ ಎಂದ ಸಿದ್ದರಾಮಯ್ಯ