ರಾಷ್ಟ್ರಪತಿಯಿಂದ ಚಿನ್ನದ ಪದಕ ಪಡೆದ ವಿಜಯಪುರ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಮನ್ನಾ! ವ್ಯಾಸಂಗ ಉಚಿತ; ಉಪನ್ಯಾಸಕಿ ಹುದ್ದೆ ಖಚಿತ

ರಾಷ್ಟ್ರಪತಿಯಿಂದ ಚಿನ್ನದ ಪದಕ ಪಡೆದ ವಿಜಯಪುರ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಮನ್ನಾ! ವ್ಯಾಸಂಗ ಉಚಿತ; ಉಪನ್ಯಾಸಕಿ ಹುದ್ದೆ ಖಚಿತ
ಶಾಸಕ ಎಂ. ಬಿ. ಪಾಟೀಲ್ ಸೋನಾಲಿ ರಾಠೋಡ್​ಗೆ ಗೌರವಿಸಿದರು

ವಿಜಯಪುರದ ತಮ್ಮ ನಿವಾಸದಲ್ಲಿ ಭೇಟಿಯಾದ ಸೋನಾಲಿಗೆ ಎಂ. ಬಿ. ಪಾಟೀಲ್ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಉಚಿತ ಪ್ರವೇಶ ನೀಡಿದರು. ಜೊತೆಗೆ ಅಭ್ಯಸಿಸಿದ ಕಾಲೇಜಿನಲ್ಲಿಯೇ ಉಪನ್ಯಾಸಕ ಹುದ್ದೆಯ ಆದೇಶ ಪ್ರತಿಯನ್ನು ನೀಡಿದರು.

preethi shettigar

| Edited By: sadhu srinath

Feb 15, 2021 | 6:26 PM

ವಿಜಯಪುರ: ಕಳೆದ ವಾರ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ರಾಜ್ಯದ ಪ್ರವಾಸ ಮಾಡಿದ್ದು, ಮೂರು ದಿನಗಳ ಪ್ರವಾಸದ ವೇಳೆ ರಾಷ್ಟ್ರಪತಿ ಕೋವಿಂದ್  ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ವಿಜಯಪುರ ನಗರದ ವಿದ್ಯಾರ್ಥಿನಿ ಸೋನಾಲಿ ರಾಠೋಡ್ ಎರಡು ಚಿನ್ನದ ಪದಕಗಳನ್ನು ರಾಷ್ಟ್ರಪತಿಯಿಂದ ಪಡೆದಿದ್ದರು.

ಅದೃಷ್ಟ ಬದಲಾಯಿಸಿದ ಚಿನ್ನದ ಪದಕಗಳು: ರಾಷ್ಟ್ರಪತಿಗಳಿಂದ ಚಿನ್ನದ ಪದಕಗಳನ್ನು ಪಡೆದ ಸೋನಾಲಿ ರಾಠೋಡ್ ಜಿಲ್ಲೆಯಲ್ಲಿ ಮನೆ ಮಾತಾಗಿದ್ದು, ವಿದ್ಯಾರ್ಥಿನಿಯ ಸಾಧನೆಗೆ ಬಿಎಲ್​ಡಿಇ ಸಂಸ್ಥೆಯ ಆಧ್ಯಕ್ಷ ಹಾಗೂ ಶಾಸಕ ಎಂ. ಬಿ. ಪಾಟೀಲ್ ಮತ್ತು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿಗಳು ಅಭಿನಂದಿಸಿದ್ದರು. ಇದೀಗಾ ಬಿಎಲ್​ಡಿಇ ಸಂಸ್ಥೆಯ ಆಧ್ಯಕ್ಷ ಹಾಗೂ ಶಾಸಕ ಎಂ. ಬಿ. ಪಾಟೀಲ್ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ಉಪನ್ಯಾಕಿ ಹುದ್ದೆಯನ್ನು ಸೋನಾಲಿಗೆ ನೀಡಿದ್ದು, ಕಡು ಬಡತನದಲ್ಲಿಯೇ ಬೆಳೆದು, ಶಿಕ್ಷಣ ಪಡೆದು ನರ್ಸಿಂಗ್ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲಿಯೇ ಅಪ್ರತಿಮ ಸಾಧನೆ ತೋರಿದ ಬಿಎಲ್​ಡಿಇ ಸಂಸ್ಥೆಯ ಬಿ. ಎಂ. ಪಾಟೀಲ್ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ವಿದ್ಯಾರ್ಥಿನಿ ಸೋನಾಲಿ ದೇವಾನಂದ ರಾಠೋಡ ಅವರನ್ನು ಪ್ರಶಂಸಿಸಿ ಬಿಎಲ್​ಡಿಇ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎಂ. ಬಿ. ಪಾಟೀಲ್ ಸೋನಾಲಿಯ ಕಳೆದ ನಾಲ್ಕು ವರ್ಷಗಳ ನರ್ಸಿಂಗ್ ಕಾಲೇಜು ಶುಲ್ಕವನ್ನು ಮರು ಪಾವತಿಸಿದ್ದಾರೆ!

free education

ಉಚಿತ ಶಿಕ್ಷಣ ಮತ್ತು ಉಪನ್ಯಾಸಕಿ ಹುದ್ದೆ ಪಡೆದ ಸೋನಾಲಿ ರಾಠೋಡ್

ಸ್ನಾತಕೋತ್ತರ ಶಿಕ್ಷಣ ಉಚಿತ: ವಿಜಯಪುರದ ತಮ್ಮ ನಿವಾಸದಲ್ಲಿ ಭೇಟಿಯಾದ ಸೋನಾಲಿಗೆ ಎಂ. ಬಿ. ಪಾಟೀಲ್ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಉಚಿತ ಪ್ರವೇಶ ನೀಡಿದರು. ಜೊತೆಗೆ ಅಭ್ಯಸಿಸಿದ ಕಾಲೇಜಿನಲ್ಲಿಯೇ ಉಪನ್ಯಾಸಕ ಹುದ್ದೆಯ ಆದೇಶ ಪ್ರತಿಯನ್ನೂ ನೀಡಿದರು!

sonali gold medal

ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ಸೋನಾಲಿ ದೇವಾನಂದ ರಾಠೋಡ್

ಈ ಸಂದರ್ಭದಲ್ಲಿ ಸೋನಾಲಿ ತಂದೆ-ತಾಯಿ, ಸಹೋದರಿ, ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ, ಕಾಲೇಜು ಪ್ರಾಚಾರ್ಯರು ಶೋಲ್ಮೋನ್ ಚೋಪಡೆ, ಉಪಪ್ರಾಚಾರ್ಯ ಸುಚಿತ್ರಾ ರಾಠಿ, ಉಪನ್ಯಾಸಕ ಸಂತೋಷ ಇಂಡಿ ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಷ್ಟ್ರಪತಿಯಿಂದ ಎರಡು ಚಿನ್ನದ ಪದಕ ಪಡೆದುಕೊಂಡ ಬಿಸಿಲುನಾಡಿನ ವಿದ್ಯಾರ್ಥಿನಿ; ಮಹತ್ತರ ಸಾಧನೆಗೆ ಫುಲ್​ ಖುಷ್!​ 

Follow us on

Related Stories

Most Read Stories

Click on your DTH Provider to Add TV9 Kannada