Parking Policy 2.0: ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್ ನೀತಿ; ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡುವುದೇ ಉದ್ದೇಶ

ನಗರಾಡಳಿತ ಪಾರ್ಕಿಂಗ್ ನಿರ್ವಹಣೆಯನ್ನು ತನ್ನ ಪ್ರಮುಖ ಕಾರ್ಯದಲ್ಲಿ ಒಂದನ್ನಾಗಿ ಪರಿಗಣಿಸಬೇಕು. ಸಮರ್ಥ ಮತ್ತು ವ್ಯವಸ್ಥಿತವಾಗಿ ಪಾರ್ಕಿಂಗ್​ ಸೇವೆ ಒದಗಿಸಬೇಕು ಎಂದು ಹೊಸ Parking Policyಯಲ್ಲಿ ಉಲ್ಲೇಖಿಸಿಲಾಗಿದೆ.

Parking Policy 2.0: ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್ ನೀತಿ; ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡುವುದೇ ಉದ್ದೇಶ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 15, 2021 | 6:08 PM

ಬೆಂಗಳೂರು: ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್​) ಸಿದ್ಧ ಪಡಿಸಿರುವ ಪರಿಷ್ಕೃತ ಪಾರ್ಕಿಂಗ್​ ನೀತಿ 2.0ಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಅದರ ಅನ್ವಯ ಇನ್ನು ಮುಂದೆ ವಾಹನ ಪಾರ್ಕಿಂಗ್​ ಉಚಿತವಲ್ಲ. ಮನೆ ಮುಂದೆ ಕಾರು ಪಾರ್ಕ್​ ಮಾಡಲೂ ಸಹ ಅನುಮತಿ ಪಡೆಯಬೇಕು. ಮೆಟ್ರೋ ರೈಲು ಸಂಚಾರ, ಫ್ಲೈ ಓವರ್​ಗಳ ನಿರ್ಮಾಣ ಸೇರಿ ವಿವಿಧ ವ್ಯವಸ್ಥೆಗಳನ್ನು ಜಾರಿಗೊಳಿಸಿದ್ದರೂ, ಸಂಚಾರ ದಟ್ಟಣೆ ಸರಿದೂಗಿಸಲು ಸಾಧ್ಯವಾಗಿಲ್ಲ. ಹಾಗಾಗಿ ನಗರದಲ್ಲಿ ವಾಹನ ಸಂಚಾರ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಪಾರ್ಕಿಂಗ್ ನೀತಿ 2.0ನ್ನು ಜಾರಿಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಜನಸಂಖ್ಯೆ ಮಾತ್ರವಲ್ಲ, ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. 2020ರ ಮೇ ತಿಂಗಳಲ್ಲೇ ನೋಂದಣಿ ಮಾಡಿಸಿದ ವಾಹನಗಳ ಸಂಖ್ಯೆ 94 ಲಕ್ಷ ಮೀರಿದೆ. ಹಾಗೇ, ನೋಂದಣಿಯ ವಾರ್ಷಿಕ ಏರಿಕೆ ದರ ಶೇ.10ಕ್ಕಿಂತಲೂ ಜಾಸ್ತಿಯಾಗಿದೆ ಎಂದು ರಾಜ್ಯ ಸರ್ಕಾರ ಈ ಹಿಂದೆಯೇ ತಿಳಿಸಿದೆ.

ಇಷ್ಟು ದಿನಗಳವರೆಗೆ ನಗರದಾದ್ಯಂತ ಪಾರ್ಕಿಂಗ್ ವ್ಯವಸ್ಥೆ ಅನಿಯಂತ್ರಿತವಾಗಿತ್ತು. ಅದರಲ್ಲೂ ರಸ್ತೆ ಮೇಲೆ, ಇಕ್ಕಟ್ಟಿನ ಜಾಗದಲ್ಲಿ ಅತಿರೇಕದ ಪಾರ್ಕಿಂಗ್​ ಮಾಡಲಾಗುತ್ತಿದೆ. ಹೀಗೆ ಬಹುತೇಕ ಜಾಗದಲ್ಲಿ ಪಾರ್ಕಿಂಗ್​​ ಶುಲ್ಕ ವಿಧಿಸಲಾಗುತ್ತಿರಲಿಲ್ಲ. ಕೆಲವು ಆಯ್ದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕ್​ ಮಾಡಲು ಮಾತ್ರ ಹಣ ಕೊಡಬೇಕಿತ್ತು. ಆದರೆ ಹೀಗೆ ಅಸಂಬದ್ಧವಾಗಿ ವಾಹನಗಳನ್ನು ಪಾರ್ಕಿಂಗ್​ ಮಾಡುವುದರಿಂದ ಉಳಿದ ಸವಾರರಿಗೆ ತೊಂದರೆಯಾಗುತ್ತಿತ್ತು. ಖಾಸಗಿ ವಾಹನಗಳ ಹೆಚ್ಚಳದಿಂದ ಉಂಟಾಗುತ್ತಿರುವ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆಯನ್ನು ನೀಗಿಸುವುದನ್ನು ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಪಾರ್ಕಿಂಗ್ ಪಾಲಿಸಿ 2.0 ರೂಪಿಸಲಾಗಿದೆ.

2012ರಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯ ಬೆಂಗಳೂರಿಗಾಗಿ ಆರಂಭಿಕ ಪಾರ್ಕಿಂಗ್ ನೀತಿಯನ್ನು ಸಿದ್ಧಪಡಿಸಿತ್ತು. ಅದನ್ನು ಅದೇ ವರ್ಷ ಮಾರ್ಚ್​​ನಲ್ಲಿ ಬಿಬಿಎಂಪಿ ಕೌನ್ಸಿಲ್​ ಅಂಗೀಕರಿಸಿತು. 2012ನಿಂದ ಪಾರ್ಕಿಂಗ್ ನೀತಿಯನ್ನು ರೂಪಿಸಿದಾಗ್ಯೂ ವಾಹನ ಪಾರ್ಕಿಂಗ್​ ಬೇಡಿಕೆ ಹೆಚ್ಚಾಗಿದೆ. ಹಾಗೇ, ಸ್ವರೂಪವೂ ಬದಲಾಗುತ್ತಿದೆ. 2012ರಲ್ಲಿ ಆರಂಭಿಕ ಪಾರ್ಕಿಂಗ್​ ನೀತಿ ರೂಪುಗೊಂಡ ಬಳಿಕ, ಮೆಟ್ರೋ ವ್ಯವಸ್ಥೆ ಜಾರಿಯಾಯಿತು. ಅಗ್ರಿಗೇಟರ್​ ರನ್ ಟ್ಯಾಕ್ಸಿ ಬಳಕೆ ಜನಪ್ರಿಯವಾಯಿತು. ಎಲ್ಲರ ಕೈಗೆಟುಕವಂತಹ ಶೇರ್ಡ್ ಸೈಕಲ್​, ಬೈಕ್​ಗಳ ಬಳಕೆ ಹೆಚ್ಚಾಯಿತು. ಅದೆಲ್ಲಕ್ಕಿಂತ ಮುಖ್ಯವಾಗಿ ಖಾಸಗಿ ವಾಹನ ಹೊಂದುವವರ ಸಂಖ್ಯೆ ಹೆಚ್ಚಾಯಿತು. ಇದೆಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು, ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು. ಈ ಮೂಲಕ ಮೆಟ್ರೋ, ಬಸ್ ಸಾರಿಗೆಯನ್ನು ಹೆಚ್ಚಿಸಬೇಕು ಎಂಬ ಉದ್ದೇಶದಿಂದ, 2012ರ ಪಾರ್ಕಿಂಗ್​ ನೀತಿಯನ್ನು ಪರಿಷ್ಕರಿಸುವುದು ಅನಿವಾರ್ಯ ಎಂದಿದೆ ರಾಜ್ಯ ಸರ್ಕಾರ.

ಹೊಸ ಪಾರ್ಕಿಂಗ್​ ನೀತಿಯಲ್ಲಿ ಏನಿದೆ?

1.ಪಾರ್ಕಿಂಗ್​ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವುದು ಪಾದಚಾರಿಗಳ ಓಡಾಟ ಮತ್ತು ಇತರ ವಾಹನ ಸವಾರರಿಗೆ ತೊಂದರೆಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ರಸ್ತೆ ಬದಿಯ ಪಾರ್ಕಿಂಗ್​ ವ್ಯವಸ್ಥೆಗೆ ಅವಕಾಶ ನೀಡುವುದು. ಪ್ರಾದೇಶಿಕ ಮಟ್ಟದ ಪಾರ್ಕಿಂಗ್ ನಿರ್ವಹಣಾ ಯೋಜನೆಗಳನ್ನು ರೂಪಿಸುವುದು, ವಸತಿ ಪ್ರದೇಶದಲ್ಲಿ ಪಾರ್ಕಿಂಗ್ ನಿಯಂತ್ರಣ, ಸಾರಿಗೆ ವಾಹನಗಳ ಪಾರ್ಕಿಂಗ್​ ನಿಯಂತ್ರಣ ಮಾಡುವುದನ್ನು ಇದು ಒಳಗೊಂಡಿದೆ.

2.ಉಚಿತ ಪಾರ್ಕಿಂಗ್​ ವ್ಯವಸ್ಥೆ ಸ್ಥಗಿತ, ಪಾರ್ಕಿಂಗ್​ಗೆ ತೆರಬೇಕು ಶುಲ್ಕ ಈ ನೀತಿಯ ಅನ್ವಯ ಪಾರ್ಕಿಂಗ್​ಗೆ ಇನ್ನು ಮುಂದೆ ಶುಲ್ಕ ತೆರಬೇಕಾಗುತ್ತದೆ. ಈವರೆಗೆ ಉಚಿತವಾಗಿದ್ದ ಪಾರ್ಕಿಂಗ್​ಗೆ ಇನ್ನು ಮುಂದೆ ಶುಲ್ಕ ವಿಧಿಸಲಾಗುತ್ತದೆ. ಚಿಕ್ಕ ವಾಹನಗಳಿಗೆ ವಾರ್ಷಿಕ 1 ಸಾವಿರ ರೂಪಾಯಿ, ಮಧ್ಯಮ ಗಾತ್ರದ ಕಾರಿಗೆ ವಾರ್ಷಿಕ 3ರಿಂದ 4 ಸಾವಿರ ರೂಪಾಯಿ, MUV, SUV ಕಾರುಗಳಿಗೆ 5 ಸಾವಿರ ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ. ಪರ್ಮಿಟ್ ಪಡೆಯುವಾಗಲೇ ಪಾರ್ಕಿಂಗ್ ದರವನ್ನೂ ಪಾವತಿ ಮಾಡಬೇಕು.

3. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಸುಪರ್ದಿಗೆ ಪಾರ್ಕಿಂಗ್​ ನಿರ್ವಹಣೆ ಸಂಘಟಿತ ಆಫ್​ ಸ್ಟ್ರೀಟ್​ ಪಾರ್ಕಿಂಗ್ ಪೂರೈಕೆಯನ್ನು ವೇಗವಾಗಿ ಅಭಿವೃದ್ಧಿಗೊಳಿಸಲು ಮತ್ತು ಪರಿಣಾಮಕಾರಿಯಾಗಿ ನಿರ್ವಹಣೆಯನ್ನು PPP ಸುಪರ್ದಿಗೆ ನೀಡಲು ಹೊಸ ಪಾರ್ಕಿಂಗ್​ ನೀತಿಯಲ್ಲಿ ನಿರ್ಧರಿಸಲಾಗಿದೆ. ಇದರ ಅನ್ವಯ ನೀವು ನಿಮ್ಮ ಖಾಲಿ ಜಾಗವನ್ನು ಖಾಸಗಿಯವರಿಗೂ ಪಾರ್ಕಿಂಗ್​ಗೆ ನೀಡಬಹುದು. ಆದರೆ ಈ ಬಗ್ಗೆ ನಗರಾಡಳಿತಕ್ಕೆ ಮಾಹಿತಿ ನೀಡಬೇಕು.

4.ಇಷ್ಟುದಿನ ನಿಷ್ಕ್ರಿಯ ಮತ್ತು ದುರ್ಬಲವಾಗಿದ್ದ ಪಾರ್ಕಿಂಗ್ ನಿಯಂತ್ರಣಾ ನಿಯಮಗಳನ್ನು ಚುರುಕುಗೊಳಿಸುವುದು ನಗರಾಡಳಿತ ಪಾರ್ಕಿಂಗ್ ನಿರ್ವಹಣೆಯನ್ನು ತನ್ನ ಪ್ರಮುಖ ಕಾರ್ಯದಲ್ಲಿ ಒಂದನ್ನಾಗಿ ಪರಿಗಣಿಸಬೇಕು. ಸಮರ್ಥ ಮತ್ತು ವ್ಯವಸ್ಥಿತವಾಗಿ ಪಾರ್ಕಿಂಗ್​ ಸೇವೆ ಒದಗಿಸಬೇಕು ಎಂದು ಹೊಸ ನೀತಿಯಲ್ಲಿ ಉಲ್ಲೇಖಿಸಿಲಾಗಿದೆ.

ಇದನ್ನೂ ಓದಿ: Tv9 Facebook Live | ಬಿಬಿಎಂಪಿ ಹೊಸ ಪಾರ್ಕಿಂಗ್ ನೀತಿ; ವರವೋ? ಬರೆಯೋ?

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ