AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ದೆಯಲ್ಲಿದ್ದಾಗಲೇ ಪತ್ನಿ ಮೂಗನ್ನೇ ಕಚ್ಚಿ ತಿಂದ ಪತಿ, ಇಲ್ಲಿದೆ ಅಸಲಿ ವಿಚಾರ

ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಕೆಲವು ಘಟನೆಯನ್ನು ಕಂಡಾಗ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಅದರಲ್ಲಿಯೂ ಈ ಗಂಡ ಹೆಂಡಿರ ನಡುವೆ ಜಗಳದ ವೇಳೆ ಮಾಡಿಕೊಳ್ಳುವ ಎಡವಟ್ಟುಗಳು ಒಂದೆರಡಲ್ಲ, ಕೆಲವೊಮ್ಮೆ ಈ ಜಗಳಗಳು ಹೊಡೆದಾಟಕ್ಕೂ ಕಾರಣವಾಗುತ್ತದೆ. ಇಲ್ಲೊಬ್ಬನು ತನ್ನ ಪತ್ನಿಯ ಮೂಗು ಕಚ್ಚಿ ತಿಂದಿದ್ದಾನೆ. ಏನೋ ಕೋಪದಿಂದ ಈ ರೀತಿ ಮಾಡಿದ್ದಾನೆ ಇರಬೇಕು ಎಂದುಕೊಂಡಿದ್ದೀರಾ. ಆದರೆ ಈತ ಮಾತ್ರ ಹೆಂಡತಿಯ ಮೂಗು ಸುಂದರವಾಗಿದೆ ಎಂದು ಕಚ್ಚಿ ತಿಂದಿದ್ದು, ಈ ಘಟನೆಯೂ ನಡೆದದ್ದು ಎಲ್ಲಿ, ಏನಿದು ಪ್ರಕರಣ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿದ್ದೆಯಲ್ಲಿದ್ದಾಗಲೇ ಪತ್ನಿ ಮೂಗನ್ನೇ ಕಚ್ಚಿ ತಿಂದ ಪತಿ, ಇಲ್ಲಿದೆ ಅಸಲಿ ವಿಚಾರ
ಸಂತ್ರಸ್ತೆ ಮಧು
ಸಾಯಿನಂದಾ
|

Updated on: May 08, 2025 | 6:15 PM

Share

ಪಶ್ಚಿಮ ಬಂಗಾಳ, ಮೇ 8: ಪ್ರತಿಯೊಬ್ಬ ಗಂಡ (husband) ನಿಗೂ ತನ್ನ ಹೆಂಡತಿಯೂ ಹೇಗಿದ್ದರೂ ಕೂಡ ಚಂದನೇ, ಹೀಗಾಗಿ ಕೆಲವೊಮ್ಮೆ ಹೆಂಡತಿ ಹೊಗಳಿ ಅಟ್ಟಕ್ಕೆ ಏರಿಸುವವರು ಇದ್ದಾರೆ. ಆದರೆ ಇಲ್ಲೊಬ್ಬನು ತನ್ನ ಪತ್ನಿಯ ಮೂಗು ಸುಂದರವಾಗಿದೆ ಎಂದು ಯಾವಾಗಲೂ ಹೊಗಳುತ್ತಲೇ ಇದ್ದನು. ಆದರೆ ಕೊನೆಗೆ ಈ ವ್ಯಕ್ತಿಯೂ ಪತ್ನಿಯ ಸುಂದರ ಮೂಗನ್ನು ಕಚ್ಚಿ ತಿಂದಿದ್ದಾನೆ. ಈ ವಿಚಿತ್ರ ಘಟನೆಯೂ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ (nadia district of West Bengal) ಯ ಶಾಂತಿಪುರ ಪೊಲೀಸ್ ಠಾಣೆ ವ್ಯಾಪ್ತಿ (shantipur police station jurisdiction) ಯ ವಾರ್ಡ್ ಸಂಖ್ಯೆ 11ರ ಬರ್ಪಾರಾ ಪ್ರದೇಶ ದಲ್ಲಿ ನಡೆದಿದೆ ಎನ್ನಲಾಗಿದೆ. ಗಾಯಾಳುವನ್ನು ಮಧು (madhu) ಎಂದು ಗುರುತಿಸಲಾಗಿದೆ. ಈಕೆಯ ಪತಿ ಬಾಪನ್ ಈ ಕೃತ್ಯ ಎಸಗಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಏನಿದು ಘಟನೆ?

ಮಧು ಖತುನ್ ಬರ್ಪಾರಾ ಪ್ರದೇಶದ ಬಾಪನ್ ಅವರನ್ನು ಒಂಬತ್ತು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿ ಸುಖವಾಗಿ ಸಂಸಾರ ನಡೆಸುತ್ತಿದ್ದರು. ಹೀಗಿರುವಾಗ ಬಾಪನ್ ತನ್ನ ಪತ್ನಿಯ ಮುಖ ಹಾಗೂ ಮೂಗನ್ನು ಹೊಗಳುತ್ತಿದ್ದನು, ಕಚ್ಚಿ ತಿನ್ನುವುದಾಗಿ ಹೇಳುತ್ತಿದ್ದನು. ಆದರೆ ಈ ಪತಿ.ಮಹಾಶಯನು ಹೇಳಿದ್ದಂತೆಯೇ ಮಾಡಿದ್ದಾನೆ. ಹೌದು, ಮೇ 3 ರಂದು ಮುಂಜಾನೆ ಮೂರು ಗಂಟೆ ವೇಳೆಗೆ ಬಾಪನ್ ತನ್ನ ಪತ್ನಿ ನಿದ್ದೆ ಮಾಡುತ್ತಿದ್ದಾಗ ಆಕೆಯ ಮೂಗನ್ನು ಕಚ್ಚಿ ತಿಂದಿದ್ದಾನೆ. ಈ ವೇಳೆ ನೋವಿನಿಂದ ಎಚ್ಚರಗೊಂಡ ಮಧುವು ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ತನ್ನ ತಾಯಿಯ ಜೊತೆಗೆ ಶಾಂತಿಪುರ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೀಡಿದ್ದಾಳೆ.

ಇದನ್ನೂ ಓದಿ : ಅಬ್ಬಬ್ಬಾ, ಬಾಲಿವುಡ್ ಹಾಡಿಗೆ ಜಬರ್ದಸ್ತ್ ಸ್ಟೆಪ್ ಹಾಕಿದ ತುಂಬು ಗರ್ಭಿಣಿ

ಇದನ್ನೂ ಓದಿ
Image
ಭಾರತದಲ್ಲಿ ಇರುವ ಏಕೈಕ ಪುರುಷ ನದಿ ಯಾವುದು ಗೊತ್ತಾ?
Image
ಭಾರತದಲ್ಲಿ ಆರಾಮ ಜೀವನ ನಡೆಸೋದೆ ಕಷ್ಟ ಎಂದ ಬೆಂಗಳೂರಿನ ಮಹಿಳೆ
Image
ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ: #Itoldmodi ವೈರಲ್‌!
Image
ಪಾಕ್ ಪರಿಸ್ಥಿತಿ ನೆನೆದು ಲೈವ್ ನಲ್ಲೇ ಅತ್ತ ಪಾಕಿಸ್ತಾನಿ ಸುದ್ದಿನಿರೂಪಕಿ

ತನ್ನ ಪತಿ ಮಾಡಿರುವ ಕೆಲಸಕ್ಕೆ ಪ್ರತಿಕ್ರಿಯಿಸಿರುವ ಮಧು, ನನ್ನ ಪತಿಗೆ ಕುಡಿತದ ಚಟವಿತ್ತು. ಅದಲ್ಲದೇ, ನನ್ನ ಮುಖ ಮತ್ತು ಮೂಗನ್ನು ಹೊಗಳುತ್ತಿದ್ದರು. ಅವರು ನನ್ನ ಮೂಗನ್ನು ಕಚ್ಚಿ ತಿನ್ನುವುದಾಗಿ ಹೇಳುತ್ತಿದ್ದರು. ನಾನು ತಮಾಷೆಗೆ ಹೇಳುತ್ತಾರೆ ಎಂದು ಭಾವಿಸಿದ್ದೆ, ಆದರೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿರಲಿಲ್ಲ. ಅವರು ಶುಕ್ರವಾರ ರಾತ್ರಿ ನನ್ನ ಮೂಗನ್ನು ಕಚ್ಚಿ ತಿಂದಿದ್ದಾರೆ. ಅದಲ್ಲದೇ, ನನ್ನ ಮುಖ ಸುಂದರವಾಗಿರುವುದರಿಂದ ನನ್ನ ಪತಿ ಕೂಡ ನನ್ನ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕುತ್ತಿದ್ದರು’ ಎಂದಿದ್ದಾಳೆ. ಈ ಘಟನೆಗೆ ಸಂಬಂಧ ಪಟ್ಟಂತೆ ಶಾಂತಿಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈಗಾಗಲೇ ಆರೋಪಿ ಬಾಪನ್ ಶೇಖ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ