AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಆರಾಮ ಜೀವನ ನಡೆಸೋದೆ ಕಷ್ಟ, ಎಷ್ಟು ದುಡಿದ್ರೂ ಸಾಕಾಗಲ್ಲ, ಅಸಲಿ ಪರಿಸ್ಥಿತಿ ಬಿಚ್ಚಿಟ್ಟ ಐಐಟಿ ಪಧವೀಧರೆ

ಈಗಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಕೂಡ ಕಡಿಮೆಯೇ. ತಿಂಗಳ ಪ್ರಾರಂಭದಲ್ಲಿ ಕೈ ತುಂಬಾ ಸಂಬಳ ಬಂದರೂ ತಿಂಗಳ ಕೊನೆಗೆ ಅಕೌಂಟ್ ಖಾಲಿಯಾಗಿರುತ್ತದೆ. ಇದು ಎಷ್ಟೋ ಜನರ ಪರಿಸ್ಥಿತಿಯಾಗಿದೆ. ಹೀಗಿರುವಾಗ ಮಹಿಳೆಯೊಬ್ಬರು ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದು, ಭಾರತದಲ್ಲಿ ಜೀವನ ನಡೆಸುವುದು ಎಷ್ಟು ಕಷ್ಟಕರ, ಮಧ್ಯಮ ಹಾಗೂ ಬಡವರ್ಗದ ಜನರು ಜೀವನ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕೆಯ ಮಾತನ್ನು ಒಪ್ಪಿಕೊಂಡಿದ್ದಾರೆ.

ಭಾರತದಲ್ಲಿ ಆರಾಮ ಜೀವನ ನಡೆಸೋದೆ ಕಷ್ಟ, ಎಷ್ಟು ದುಡಿದ್ರೂ ಸಾಕಾಗಲ್ಲ, ಅಸಲಿ ಪರಿಸ್ಥಿತಿ ಬಿಚ್ಚಿಟ್ಟ ಐಐಟಿ ಪಧವೀಧರೆ
ವೈರಲ್ ಪೋಸ್ಟ್Image Credit source: Getty Images / Twitter
ಸಾಯಿನಂದಾ
|

Updated on: May 07, 2025 | 5:45 PM

Share

ಈಗೇನಿದ್ದರೂ ಕೈಯಲ್ಲಿ ದುಡ್ಡಿ (money) ದರೆ ಮಾತ್ರ ಜೀವನ ನಡೆಸಲು ಸಾಧ್ಯ. ದುಬಾರಿ ದುನಿಯಾದಲ್ಲಿ ಬರುವ ಅಲ್ಪ ಸ್ವಲ್ಪ ಸಂಬಳದಲ್ಲಿ ದಿನನಿತ್ಯ ವೆಚ್ಚಗಳನ್ನು ತೂಗಿಸಿಕೊಂಡು ಹೋಗುವಷ್ಟರಲ್ಲಿ ಸಾಕಾಗಿರುತ್ತದೆ. ಅದರಲ್ಲಿ ದಿನಸಿ ವಸ್ತುಗಳಿಂದ ಹಿಡಿದು ಇಂಧನ ಬೆಲೆ, ಮನೆ ಬಾಡಿಗೆಯಲ್ಲಿ ಹೆಚ್ಚಳವಾಗಿರುವ ಕಾರಣ ಜೀವನ ನಡೆಸುವುದು ಕಷ್ಟಕರವಾಗಿದೆ. ಬೆಂಗಳೂರಿ (Bengaluru) ನಲ್ಲಿ ವಾಸಿಸುತ್ತಿರುವ ಐಐಟಿ ಪದವೀಧರ (IIT graduate) ರೊಬ್ಬರು ಭಾರತದಲ್ಲಿ ಹೆಚ್ಚುತ್ತಿರುವ ವೆಚ್ಚದ ಕುರಿತು ಪೋಸ್ಟ್ ಮಾಡಿದ್ದು, ಹೀಗಾಗಿ ಇಲ್ಲಿ ಜೀವನ ನಡೆಸುವುದು ಅಷ್ಟು ಸುಲಭವಲ್ಲ ಎನ್ನುವುದನ್ನು ಉಲ್ಲೇಖಿಸಿದ್ದಾರೆ.

@monali dambre ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಮೊನಾಲಿ ಡಾಂಬ್ರೆ ವಿವರವಾಗಿ ತಮ್ಮ ಮನಸ್ಸಿನ ಮಾತನ್ನು ಬರೆದುಕೊಂಡಿದ್ದಾರೆ, ಈ ಪೋಸ್ಟ್ ನಲ್ಲಿ, ʼಭಾರತದಲ್ಲಿ ನಿಜಕ್ಕೂ ಜೀವನ ವೆಚ್ಚವು ದುಬಾರಿಯಾಗುತ್ತಿದೆ ಎಂಬುದನ್ನ ನಾನೂ ನಿಧಾನವಾಗಿ ಒಪ್ಪಿಕೊಳ್ಳುತ್ತಿದ್ದೇನೆ. ಇಲ್ಲಿನ ಸಣ್ಣ ಮತ್ತು ಟೈಯರ್‌ 3 ನಗರಗಳಲ್ಲಿಯೂ ಜೀವನ ಸಾಗಿಸೋದು ಕಷ್ಟವಾಗುತ್ತಿದೆ. ಮಧ್ಯಮವರ್ಗ ಹಾಗೂ ಕೆಳವರ್ಗದವರಿಗೆ ತಮ್ಮ ಆದಾಯದಲ್ಲಿ ಬದುಕು ಸಾಗಿಸುವುದೇ ಕಷ್ಟವಾಗುತ್ತಿದೆ. ಭವಿಷ್ಯ ಏನು ಎಂದು ಯೋಚಿಸಿದರೇ ನಿಜಕ್ಕೂ ಆತಂಕವಾಗುತ್ತಿದೆ. ಹೌದು ನಾವು ಪ್ರತಿದಿನ ಬಳಸುವ ವಸ್ತುಗಳ ಬೆಲೆಯೇ ದುಬಾರಿಯಾಗುತ್ತಿದೆ. ಈ ಬೆಂಗಳೂರಲ್ಲಿ ವಾಸಿಸುತ್ತಿರುವ ನನಗೆ ನನ್ನ ದಿನಸಿ ಬೆಲೆಯೇ ಜಾಸ್ತಿಯಾಗುತ್ತಿದೆ. ಕೇವಲ ಅಗತ್ಯವಿರುವಷ್ಟೇ ಸಾಮಗ್ರಿಗಳನ್ನು ಖರೀದಿ ಮಾಡಿದರೂ ಕೂಡ ಬೆಲೆ ಮಾತ್ರ ಹೆಚ್ಚೇ ಆಗುತ್ತಿದೆ. ಹಣ್ಣು, ತರಕಾರಿ ಮತ್ತು ದಿನನಿತ್ಯ ಬೇಕಾಗುವ ಒಂದಷ್ಟು ಸಾಮಗ್ರಿಗಳು ತುಂಬಾನೇ ದುಬಾರಿಯಾಗಿವೆ. ವಸ್ತುಗಳಿರುವ ನಿಗದಿತ ಬೆಲೆಕ್ಕಿಂತ ಹೆಚ್ಚು ಹಣವನ್ನು ನೀಡಿ ಖರೀದಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
Image
ರೈಲಿನ ಎಸಿ ಕೋಚ್​​ ಟಾಯ್ಲೆಟ್​​ನಲ್ಲಿ ಹಾವು ಪತ್ತೆ; ಆಮೇಲೇನಾಯ್ತು?
Image
ನಿಮ್ಗೊತ್ತಾ ಬ್ರೇಕಪ್‌ನಿಂದಲೂ ಹಲವಾರು ಪ್ರಯೋಜನಗಳಿವೆಯಂತೆ
Image
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್

ಇದನ್ನೂ ಓದಿ : Operation Sindoor: ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ, #Itoldmodi ವೈರಲ್‌!

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈಗಾಗಲೇ ಐದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರು ಮಾಡಿರುವ ಕಾಮೆಂಟ್ ಗಳು ಹೀಗಿವೆ. ಒಬ್ಬ ಬಳಕೆದಾರರು, ಆಹಾರ ಹಾಗೂ ದಿನಸಿ ವಸ್ತುಗಳ ಮೇಲಿನ ಹಣದುಬ್ಬರ ತುಂಬಾನೇ ಹೆಚ್ಚಾಗಿದೆ. ಸಾಮಾನ್ಯವಾಗಿ ಜೀವನ ವೆಚ್ಚವು ವಾರ್ಷಿಕವಾಗಿ 5-6% ಮಿತಿಗಿಂತ ಹೆಚ್ಚಾಗಿದೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ವರ್ಷಗಳು ಉರುಳಿದಂತೆ ಮಧ್ಯಮ ಹಾಗೂ ಕೆಳವರ್ಗದ ಜನರು ಜೀವನ ನಡೆಸಲು ಅಸಾಧ್ಯ ಎಂದಿದ್ದಾರೆ. ಮತ್ತೊಬ್ಬರು, ಹೀಗೆ ಆದರೆ ಎಷ್ಟೇ ದುಡಿದರೂ ಕೂಡ ಜೀವನ ನಡೆಸಲು ಹಣವೇ ಸಾಕಾಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ