AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು

Dhurandhar-Yash Raj Films: ಈ ಹಿಂದೆ ಬಂದಿದ್ದ ಸ್ಪೈ ಆಕ್ಷನ್ ಸಿನಿಮಾಗಳಾದ ‘ಟೈಗರ್’, ‘ಪಠಾಣ್’, ‘ವಾರ್’, ‘ಬ್ಯಾಂಗ್ ಬ್ಯಾಂಗ್’ ಇವೆಲ್ಲ ಸಿನಿಮಾಗಳಲ್ಲಿ ಸಿದ್ಧ ಸೂತ್ರವೇ ಇತ್ತು. ಆದರೆ ‘ಧುರಂಧರ್’ ಸಿನಿಮಾ, ಭಾರತದಲ್ಲಿ ಸ್ಪೈ ಥ್ರಿಲ್ಲರ್ ವ್ಯಾಕರಣವನ್ನೇ ಬದಲಾಯಿಸಿದೆ. ದಶಕಗಳಿಂದಲೂ ಸ್ಪೈ ಆಕ್ಷನ್ ಸಿನಿಮಾ ಜಾನರ್​​ ಮೇಲೆ ಗಟ್ಟಿ ಹಿಡಿತ ಹೊಂದಿದ್ದ ಯಶ್ ರಾಜ್ ಫಿಲಮ್ಸ್ ಇದೀಗ ತನ್ನ ಮುಂಬರುವ ಸಿನಿಮಾಗಳ ಚಿತ್ರಕತೆಯನ್ನು ಸಂಪೂರ್ಣ ಬದಲಾಯಿಸುತ್ತಿದೆ.

‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
Spy Universe
ಮಂಜುನಾಥ ಸಿ.
|

Updated on: Jun 03, 2026 | 1:35 PM

Share

ಬಾಲಿವುಡ್ (Bollywood) ಸ್ಪೈ ಸಿನಿಮಾಗಳೆಂದರೆ ಅವುಗಳಲ್ಲಿ ಮಾಸ್ ಸೀನ್​​ಗಳು, ಎಲಿವೇಷನ್​​ ಸೀನ್​​ಗಳು, ಓವರ್ ದಿ ಟಾಪ್ ಆಕ್ಷನ್, ಕಾಮಿಡಿ, ಐಟಂ ಹಾಡುಗಳು, ನಾಯಕನ ಥರಹೇವಾರಿ ಡ್ರೆಸ್ಸುಗಳು, ನಾಯಕಿಯ ಬಿಕಿನಿ ಸೀನ್ ಇರಲೇ ಬೇಕು ಎಂಬ ಸಂಪ್ರದಾಯ ಇತ್ತು. ಇವುಗಳ ಜೊತೆಗೆ ಭಾರತ ಮತ್ತು ಪಾಕಿಸ್ತಾನದ ಸ್ಪೈಗಳು ಒಟ್ಟಾಗಿ ಮತ್ತೊಬ್ಬ ವಿದೇಶಿ ವಿಲನ್ ವಿರುದ್ಧ ಹೊಡೆದಾಡುವ ಕತೆ ಇರುತ್ತಿತ್ತು. ಈ ಹಿಂದೆ ಬಂದಿದ್ದ ಸ್ಪೈ ಆಕ್ಷನ್ ಸಿನಿಮಾಗಳಾದ ‘ಟೈಗರ್’, ‘ಪಠಾಣ್’, ‘ವಾರ್’, ‘ಬ್ಯಾಂಗ್ ಬ್ಯಾಂಗ್’ ಇವೆಲ್ಲ ಸಿನಿಮಾಗಳಲ್ಲಿ ಮೇಲೆ ಹೇಳಿರುವ ಸೂತ್ರವೇ ಇತ್ತು. ಆದರೆ ‘ಧುರಂಧರ್’ ಸಿನಿಮಾ, ಭಾರತದಲ್ಲಿ ಸ್ಪೈ ಥ್ರಿಲ್ಲರ್ ವ್ಯಾಕರಣವನ್ನೇ ಬದಲಾಯಿಸಿದೆ. ದಶಕಗಳಿಂದಲೂ ಸ್ಪೈ ಆಕ್ಷನ್ ಸಿನಿಮಾ ಜಾನರ್​​ ಮೇಲೆ ಗಟ್ಟಿ ಹಿಡಿತ ಹೊಂದಿದ್ದ ಯಶ್ ರಾಜ್ ಫಿಲಮ್ಸ್ ಇದೀಗ ತನ್ನ ಮುಂಬರುವ ಸಿನಿಮಾಗಳ ಚಿತ್ರಕತೆಯನ್ನು ಸಂಪೂರ್ಣ ಬದಲಾಯಿಸುತ್ತಿದೆ.

ಯಶ್ ರಾಜ್ ಫಿಲಮ್ಸ್​, ಭಾರತದ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿದ್ದು, ಸ್ಪೈ ಆಕ್ಷನ್ ಸಿನಿಮಾಗಳನ್ನು ದಶಕಗಳಿಂದಲೂ ನಿರ್ಮಿಸುತ್ತಾ ಬರುತ್ತಿರುವುದು ಮಾತ್ರವಲ್ಲದೆ ಭಾರಿ ಯಶಸ್ಸನ್ನೂ ಗಳಿಸುತ್ತಿದೆ. ಈ ನಿರ್ಮಾಣ ಸಂಸ್ಥೆಯು ಒಂದು ಸಿದ್ಧ ಸೂತ್ರ ಇಟ್ಟುಕೊಂಡೇ ಸ್ಪೈ ಸಿನಿಮಾಗಳನ್ನು ನಿರ್ಮಿಸುತ್ತಾ ಬಂದಿದೆ. ಆದರೆ ಈಗ ‘ಧುರಂಧರ್’ ದೆಸೆಯಿಂದಾಗಿ ಯಶ್ ರಾಜ್ ಫಿಲಮ್ಸ್ ಸಹ ಸ್ಪೈ ಸಿನಿಮಾಗಳ ತಮ್ಮ ಸಿದ್ಧ ಸೂತ್ರದಲ್ಲಿ ಮಾರ್ಪಾಡು ಮಾಡುತ್ತಿದೆ.

ಯಶ್ ರಾಜ್ ಫಿಲಮ್ಸ್ ನಿರ್ಮಿಸಿರುವ ಹೊಸ ಸ್ಪೈ ಆಕ್ಷನ್ ಸಿನಿಮಾ ‘ಆಲ್ಫಾ’ ಬಿಡುಗಡೆ ಹಂತದಲ್ಲಿದೆ. ಈ ಸಿನಿಮಾನಲ್ಲಿ ಆಲಿಯಾ ಭಟ್ ಮತ್ತು ಶರ್ವರಿ ವಾಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಗ ‘ಧುರಂಧರ್’ ಸಿನಿಮಾ, ಸ್ಪೈ ಸಿನಿಮಾಗಳ ರೂಪವನ್ನೇ ಬದಲಿಸಿರುವ ಕಾರಣ, ಇದೀಗ ‘ಆಲ್ಫಾ’ ಸಿನಿಮಾನಲ್ಲಿಯೂ ಚಿತ್ರಕತೆಯನ್ನು ಬದಲಾಯಿಸಿ, ಕೆಲ ದೃಶ್ಯಗಳ ಮರುಚಿತ್ರೀಕರಣವನ್ನು ಸಹ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ.

ಇದನ್ನೂ ಓದಿ:ಹಾಲಿವುಡ್​ಗೆ ರೀಮೇಕ್ ಆದ ಭಾರತೀಯ ಸಿನಿಮಾಗಳಿವು

‘ಆಲ್ಫಾ’ ಸಿನಿಮಾನಲ್ಲಿಯೂ ಭಾರತ ಮತ್ತು ಪಾಕಿಸ್ತಾನದ ಸ್ಪೈಗಳು ಒಂದಾಗಿ ವಿಲನ್ ಎದುರು ಹೊಡೆದಾಡುವ ಕತೆಯನ್ನು ಮಾಡಲಾಗಿತ್ತಂತೆ. ಆದರೆ ‘ಧುರಂಧರ್’ ಸಿನಿಮಾವು, ಭಾರತದ ವಿರೋಧಿ ರಾಷ್ಟ್ರ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಕತೆ ಹೊಂದಿದ್ದು, ಆ ಸಿನಿಮಾಕ್ಕೆ ಭಾರಿ ಜನಮನ್ನಣೆ ವ್ಯಕ್ತವಾಗಿರುವ ಕಾರಣ, ಇದೀಗ ‘ಆಲ್ಫಾ’ ಕತೆಯನ್ನು ಬದಲಾಯಿಸಿ, ಪಾಕಿಸ್ತಾನದ ಏಜೆಂಟ್ ಜೊತೆ ಸೇರಿ ಮಿಷನ್ ನಡೆಸುವ ಕತೆಯನ್ನೇ ಕೈಬಿಡಲಾಗಿದೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ‘ಆಲ್ಫಾ’ ಸಿನಿಮಾದ ಇಬ್ಬರು ನಾಯಕಿಯರಲ್ಲಿ ಒಬ್ಬರು ಪಾಕಿಸ್ತಾನದ ಏಜೆಂಟ್, ಒಬ್ಬರು ಭಾರತದ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಈಗ ಆ ಕತೆಯನ್ನೇ ಬದಲಾಯಿಸಿ, ಇಬ್ಬರೂ ಭಾರತೀಯ ಏಜೆಂಟರುಗಳ ಪಾತ್ರವನ್ನು ಸೃಷ್ಟಿಸಲಾಗಿದೆಯಂತೆ. ಇದೇ ಕಾರಣಕ್ಕೆ ಕೆಲವು ದೃಶ್ಯಗಳ ಮರು ಚಿತ್ರೀಕರಣವನ್ನೂ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ‘ಆಲ್ಫಾ’ ಸಿನಿಮಾದ ಬಿಡುಗಡೆ ಸಹ ತಡವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ