AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಕನ ಮದುವೆಗೆ ತಮ್ಮನ ದುಬಾರಿ ಉಡುಗೊರೆ ಹೇಗಿದೆ ನೋಡಿ

ಮದುವೆ ಎಂದರೆ ಸಂಭ್ರಮ, ಹೀಗಾಗಿ ಭಾರತದಲ್ಲಿ ಕೆಲವು ಕಡೆ ಮದುವೆ ಸಮಾರಂಭಗಳಿಗೆ ಲಕ್ಷಾಂತರ ಹಣ ಖರ್ಚು ಮಾಡುವುದನ್ನು ನೋಡಬಹುದು. ಕೆಲವು ವಧುವಿನ ಕಡೆಯವರು ವರನಿಗೆ ಕೆಲವು ಉಡುಗೊರೆಗಳನ್ನು ನೀಡುತ್ತಾರೆ. ಆದರೆ ಇಲ್ಲೊಬ್ಬ ಹುಡುಗನು ಅಕ್ಕನ ಮದುವೆ ಸಮಾರಂಭದಲ್ಲಿ ಅಕ್ಕನಿಗೆ ಮನೆಗೆ ಬೇಕಾದ ಎಲ್ಲಾ ಸಾಮಾನುಗಳನ್ನು ನೀಡಲಾಗಿರುವುದನ್ನು ವಿಡಿಯೋ ಮಾಡಿ ತೋರಿಸಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಅಕ್ಕನ ಮದುವೆಗೆ ತಮ್ಮನ ದುಬಾರಿ ಉಡುಗೊರೆ ಹೇಗಿದೆ ನೋಡಿ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: May 08, 2025 | 11:35 AM

Share

ಮದುವೆ (marriage) ಎಂದರೆ ಸಂಭ್ರಮವೇನೋ ಸರಿಯೇ, ಹೆಣ್ಣು ಮಕ್ಕಳ ಮದುವೆ ಹೆತ್ತವರಿಗೆ ಹೊರೆಯಾಗುತ್ತದೆ. ಆದರೆ, ಗಂಡಿನ ಮನೆಯವರ ಗೌರವಕ್ಕೆ ಧಕ್ಕೆ ಬರದಂತೆ ಅದ್ದೂರಿಯಾಗಿ ಮದುವೆ ಮಾಡಿಕೊಡಬೇಕಾಗುತ್ತದೆ.  ವರನಿಗೆ ಬೇಕಾದ ದುಬಾರಿ ಉಡುಗೊರೆ (gift) ಗಳನ್ನು ನೀಡಬೇಕಾಗುತ್ತದೆ. ಇನ್ನು ಕೆಲವೆಡೆ ಮಗಳು ಚೆನ್ನಾಗಿ ಇರಬೇಕೆಂದು ಮನೆಗೆ ಬೇಕಾದ ಫ್ಯಾನ್, ಫ್ರಿಡ್ಜ್, ಸೋಫಾ ಸೆಟ್ ಸೇರಿದಂತೆ ಇನ್ನಿತ್ತರ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗ (boy) ನೊಬ್ಬನು ತನ್ನ ಸಹೋದರಿಯ ಮದುವೆ ಸಮಾರಂಭದಲ್ಲಿ ಆಕೆಗೆ ಏನೆಲ್ಲಾ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದು ಹೇಳುತ್ತಿದ್ದಾನೆ. ಈ ವಿಡಿಯೋಗೆ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

@manusinghvlogs1999 ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ಬಿಹಾರದ್ದು ಎನ್ನಲಾಗಿದ್ದು, ಇದರಲ್ಲಿ ಹುಡುಗನೊಬ್ಬನು ತನ್ನ ಸಹೋದರಿ ಮದುವೆಯ ತಿಲಕ ಸಮಾರಂಭಕ್ಕಾಗಿ ತನ್ನ ಸಹೋದರಿಗೆ ನೀಡಲು ಸಿದ್ಧಪಡಿಸಿದ ಉಡುಗೊರೆಗಳನ್ನು ತೋರಿಸುತ್ತಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಹವಾನಿಯಂತ್ರಣ, ರೆಫ್ರಿಜರೇಟರ್, ಸೋಫಾಗಳು, ಕುರ್ಚಿಗಳು ಮತ್ತು ಹಾಸಿಗೆ ಸೇರಿದಂತೆ ಮನೆಗೆ ಬೇಕಾದ ಅಗತ್ಯ ವಸ್ತುಗಳು ಇಲ್ಲಿವೆ. ಎಲ್ಲವೂ ಒಳ್ಳೆಯ ಬ್ರ್ಯಾಂಡ್ ವಸ್ತುಗಳಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಸಹೋದರಿಗೆ ನೀಡಲು ಸಿದ್ಧಪಡಿಸಲಾಗಿದೆ ಎನ್ನುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
ಭಾರತದಲ್ಲಿ ಇರುವ ಏಕೈಕ ಪುರುಷ ನದಿ ಯಾವುದು ಗೊತ್ತಾ?
Image
ಭಾರತದಲ್ಲಿ ಆರಾಮ ಜೀವನ ನಡೆಸೋದೆ ಕಷ್ಟ ಎಂದ ಬೆಂಗಳೂರಿನ ಮಹಿಳೆ
Image
ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ: #Itoldmodi ವೈರಲ್‌!
Image
ಪಾಕ್ ಪರಿಸ್ಥಿತಿ ನೆನೆದು ಲೈವ್ ನಲ್ಲೇ ಅತ್ತ ಪಾಕಿಸ್ತಾನಿ ಸುದ್ದಿನಿರೂಪಕಿ

ಇದನ್ನೂ ಓದಿ : ಭಾರತದಲ್ಲಿ ಇರುವ ಏಕೈಕ ಪುರುಷ ನದಿ ಯಾವುದು ಗೊತ್ತಾ?

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಈಗಾಗಲೇ ಇಪ್ಪತ್ತಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಇದು ಸಹೋದರಿಗಾಗಿ ನೀಡುವ ಪ್ರೀತಿಯ ಉಡುಗೊರೆ’ ಎಂದಿದ್ದಾರೆ. ಇನ್ನೊಬ್ಬರು, ‘ಅಕ್ಕನ ಮದುವೆ ಎನ್ನುವ ಖುಷಿ ಆ ಹುಡುಗನ ಮುಖದಲ್ಲಿ ಎದ್ದು ಕಾಣುತ್ತಿದೆ. ಅದಲ್ಲದೇ ಖುಷಿಯನ್ನು ಯಾವ ರೀತಿ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ಬಿಹಾರಿ ಮದುವೆಯಲ್ಲಿ ಪ್ರತಿಯೊಬ್ಬ ತಂದೆಯೂ ತನ್ನ ಮಗಳಿಗೆ ಈ ರೀತಿ ಉಡುಗೊರೆಗಳನ್ನು ನೀಡುವುದು ಸರ್ವೇ ಸಾಮಾನ್ಯವಾಗಿದೆ. ಇದು ವರದಕ್ಷಿಣೆಯಲ್ಲ, ನಿಮ್ಮ ದೃಷ್ಟಿಕೋನದಲ್ಲಿ ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಹುಡುಗನ ಮುಖದಲ್ಲಿ ಎಷ್ಟು ಮುಗ್ದತೆಯಿದೆ ಎನ್ನುವುದನ್ನು ನೋಡಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು