Video: ಕೈಗೆ ಕೋಟಿ ರೂ ಸಿಗುತ್ತಿದ್ದಂತೆ ಭಾರತೀಯರು ಭಾರತಕ್ಕೆ ಮರಳುವುದು ಅಸಾಧ್ಯ; ಅನಿವಾಸಿ ಭಾರತೀಯ ಹೀಗೆಂದಿದ್ದೇಕೆ?
ಓದು ಮುಗಿಯುತ್ತಿದ್ದಂತೆ ವಿದೇಶಕ್ಕೆ ಹಾರುವ ಯುವಕ ಯುವತಿಯರು ಅಲ್ಲೇ ಸೆಟಲ್ ಆಗಲು ಬಯಸುತ್ತಾರೆ. ಹೀಗಾಗಿ ತಮ್ಮ ಹುಟ್ಟೂರಿಗೆ ಮತ್ತೆ ಮರಳಬೇಕು ಎನ್ನುವ ಪ್ರಯತ್ನವನ್ನು ಕೂಡ ಮಾಡಲ್ಲ. ಹೀಗಿರುವಾಗ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರೊಬ್ಬರು, ಕೋಟ್ಯಂತರ ರೂಪಾಯಿ ಗಳಿಸಿದ ನಂತರ ಭಾರತಕ್ಕೆ ಮರಳುವುದು ಅನೇಕ ಭಾರತೀಯರಿಗೆ ಕಷ್ಟಕರವಾಗುತ್ತದೆ ಎಂದಿದ್ದಾರೆ. ಈ ರೀತಿ ಎನ್ನಲು ನೀಡಿದ ಕಾರಣ ಇಲ್ಲಿದೆ ನೋಡಿ.

ಕೆಲವರಿಗೆ ವಿದೇಶ (foreign) ಅಂದ್ರೆ ಅದೇನೋ ವ್ಯಾಮೋಹ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಎನ್ನುವುದು ಹೆಚ್ಚಿನವರ ಭಾವನೆ. ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಅಮೆರಿಕದಲ್ಲಿ (America) ವಾಸಿಸುವ ಅನಿವಾಸಿ ಭಾರತೀಯರೊಬ್ಬರು, ಮನೆಗೆ ಮರಳುವ ಕನಸಿನೊಂದಿಗೆ ವಿದೇಶಕ್ಕೆ ತೆರಳುವ ಅನೇಕ ಭಾರತೀಯರು ವರ್ಷಗಳ ಕಾಲ ಅಲ್ಲಿಯೇ ಉಳಿಯುತ್ತಾರೆ ಎಂದಿದ್ದಾರೆ. ಈ ವಿಡಿಯೋ ಆನ್ಲೈನ್ ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ನಿತಿನ್ ಎಂಬ ಬಳಕೆದಾರರು desidad_in_america ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ನಾನು 5–8 ಕೋಟಿ ಗಳಿಸುತ್ತೇನೆ, ಮತ್ತು ನಂತರ, ನಾನು ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳುವುದು ಬಹುತೇಕ ಅಸಾಧ್ಯ. ಇಂದಿಗೆ ನಾನು ಇಲ್ಲಿಗೆ ಬಂದು 15 ವರ್ಷಗಳಾಗಿವೆ, ಮತ್ತು ನಾನು 5-8 ಕೋಟಿ ಗಳಿಸಿ ಅದನ್ನು ಬ್ಯಾಂಕಿನಲ್ಲಿ ಇಟ್ಟ ಬಳಿಕ ನಾನು ಭಾರತಕ್ಕೆ ಹೊರಟು ಹೋಗುತ್ತೇನೆ ಎಂದು ನಾನು ಭಾವಿಸಿದಾಗಲೆಲ್ಲಾ, ಅದು ಬಹುತೇಕ ಅಸಾಧ್ಯವಾಗುತ್ತದೆ ಎಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದಕ್ಕೆ ಅತ್ಯಂತ ದೊಡ್ಡ ಕಾರಣವೆಂದರೆ ಅದುವೇ ಈ ಸಂಬಳ. ಅಮೆರಿಕದಲ್ಲಿ, ನಾವು ಅನಿವಾಸಿ ಭಾರತೀಯರು ಬಂದಾಗ ನಾವೆಲ್ಲರೂ ಹಣ ಸಂಪಾದಿಸುತ್ತೇವೆ, ಭಾರತಕ್ಕೆ ಕಳುಹಿಸುತ್ತೇವೆ ಸ್ವಲ್ಪ ಸಮಯ ಬಿಟ್ಟು ಇಲ್ಲಿಂದ ಹೊರಡುತ್ತೇವೆ ಎಂಬ ಕನಸನ್ನು ಹೊತ್ತು ಬರುತ್ತೇವೆ. ಆದರೆ ಇಲ್ಲಿ ನಮಗೆ ಸಿಗುವ ಸಂಬಳ ತುಂಬಾ ಹೆಚ್ಚಾಗಿದೆ. ಮೆಕ್‌ಡೊನಾಲ್ಡ್ಸ್, ಡೋರ್‌ಡ್ಯಾಶ್ ಅಥವಾ ಉಬರ್‌ನಂತಹ ಉದ್ಯೋಗಗಳಲ್ಲಿ ಕೆಲಸ ಮಾಡುವ ಜನರು ಸಹ ತಿಂಗಳಿಗೆ ಸುಮಾರು $3,000 ರಿಂದ $3,500 ಗಳಿಸಬಹುದು. ಅಂದರೆ ಭಾರತದ ರೂಪಾಯಿಗೆ ಹೋಲಿಸಿದರೆ 3 ಲಕ್ಷದಿಂದ 3.5 ಲಕ್ಷದವರೆಗೆ ಇರುತ್ತದೆ ಎಂದು ಹೇಳಿದ್ದಾರೆ.
ಈಗ, ಅದೇ ವ್ಯಕ್ತಿ ಭಾರತದ ಮೆಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಅವರಿಗೆ 25,000 ಅಥವಾ 30,000 ರೂಪಾಯಿ ಸಂಬಳ ಸಿಗುತ್ತದೆ. ಒಬ್ಬ ವ್ಯಕ್ತಿಯು 30,000 ರೂಪಾಯಿಗಳಿಂದ ತಮ್ಮ ಖರ್ಚುಗಳನ್ನು ಹೇಗೆ ನಿರ್ವಹಿಸಬಹುದು?. ಬಾಡಿಗೆ, ವಿಮೆ, ಫೋನ್ ಬಿಲ್‌ಗಳು ಮತ್ತು ಇತರ ಖರ್ಚುಗಳನ್ನು ಪಾವತಿಸಿದ ನಂತರವೂ, ಅಮೆರಿಕದಲ್ಲಿ ಅನೇಕರು ತಿಂಗಳಿಗೆ ಸುಮಾರು 1 ಲಕ್ಷ ರೂಪಾಯಿಗಳನ್ನು ಉಳಿಸುತ್ತಾರೆ. ತಿಂಗಳಿಗೆ ಒಂದು ಲಕ್ಷ ಎಂದರೆ ವರ್ಷಕ್ಕೆ 12 ಲಕ್ಷ ರೂಪಾಯಿಗಳಾಗುತ್ತದೆ ಎಂದು ಹೇಳಿರುವುದನ್ನು ಕಾಣಬಹುದು.
ಒಬ್ಬ ವ್ಯಕ್ತಿ ಒಮ್ಮೆ ಈ ಜೀವನಶೈಲಿಗೆ ಒಗ್ಗಿಕೊಂಡರೆ, ಅವನಿಗೆ ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಅದು ಅಸಾಧ್ಯದ ಮಾತು. ಅದಕ್ಕಾಗಿಯೇ ಯಾರಾದರೂ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಅಥವಾ ಪ್ರಪಂಚದ ಬೇರೆಲ್ಲಿಗೂ ಬಂದರೂ, ಅವರು ಭಾರತಕ್ಕೆ ಹಿಂತಿರುಗುವ ಬಗ್ಗೆ ಯೋಚಿಸಲು ಸಹ ಸಾಧ್ಯವಿಲ್ಲ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಹೋಲಿಕೆ ಒಳ್ಳೆಯದು. ಆದರೆ ಅಮೆರಿಕದಲ್ಲಿ ವೆಚ್ಚಗಳು ಸಹ ತುಂಬಾ ಹೆಚ್ಚು ಎಂದಿದ್ದಾರೆ. ಇನ್ನೊಬ್ಬರು, ಭಾರತೀಯರು ತಮ್ಮ ಹುಟ್ಟೂರನ್ನು ಭಾವನಾತ್ಮಕವಾಗಿ ಮಿಸ್ ಮಾಡಿಕೊಳ್ಳುತ್ತಾರೆ, ಆದರೆ ಪ್ರಾಯೋಗಿಕವಾಗಿ ಅಲ್ಲಿ ಬದುಕು ಕಟ್ಟಿಕೊಳ್ಳೋದು ಕಷ್ಟಕರವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ದುಡ್ಡೇ ಮುಖ್ಯವಲ್ಲ, ಕುಟುಂಬದೊಂದಿಗೆ ಖುಷಿಯಿಂದ ಇದ್ದರೆ ಅದಕ್ಕಿಂತ ಅಮೂಲ್ಯವಾದದ್ದು ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




