AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

IPL 2026 SRH: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 15 ಪಂದ್ಯಗಳನ್ನಾಡಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡವು ಒಟ್ಟು 9 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಈ 9 ಗೆಲುವುಗಳೊಂದಿಗೆ ಪ್ಲೇಆಫ್​ಗೇರಿದ್ದ ಎಸ್​ಆರ್​ಹೆಚ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ಮೂಲಕ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತ್ತು.

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
SRHImage Credit source: IPL
ಝಾಹಿರ್ ಯೂಸುಫ್
|

Updated on:Jun 03, 2026 | 9:29 PM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮುಕ್ತಾಯದ ಬೆನ್ನಲ್ಲೇ ಸನ್​ರೈಸರ್ಸ್ ಹೈದರಾಬಾದ್ (SRH)​ ತಂಡಕ್ಕೆ ಆಘಾತ ಎದುರಾಗಿದೆ. ಎಸ್​ಆರ್​ಹೆಚ್​ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins)​ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಡೌಟ್ ಎಂಬ ಸುದ್ದಿ ಹೊರಬಿದ್ದಿದೆ.

ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದಾಗಿ ಪ್ಯಾಟ್ ಕಮಿನ್ಸ್ ಐಪಿಎಲ್​ 2027ರ ಟೂರ್ನಿಯಿಂದ ದೂರ ಉಳಿಯುವ ಸುಳಿವು ನೀಡಿದ್ದಾರೆ.

ಮುಂದಿನ 18 ತಿಂಗಳುಗಳಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, ಮೆಲ್ಬೋರ್ನ್‌ನಲ್ಲಿ 150ನೇ ವರ್ಷದ ಐತಿಹಾಸಿಕ ಟೆಸ್ಟ್, ಆ್ಯಶಸ್ ಸರಣಿ ಹಾಗೂ 2027ರ ಏಕದಿನ ವಿಶ್ವಕಪ್‌ನಂತಹ ಟೂರ್ನಿಗಳನ್ನು ಆಡಬೇಕಿದೆ.

ಈ ಬಗ್ಗೆ ಸಿಡ್ನಿ ಹೆರಾಲ್ಡ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ಯಾಟ್ ಕಮಿನ್ಸ್, “ಮುಂದಿನ ವರ್ಷದ ಯಾವುದಾದರೂ ಒಂದು ಹಂತದಲ್ಲಿ ಯಾವುದಕ್ಕಾದರೂ ಬ್ರೇಕ್ ನೀಡಲೇಬೇಕಾಗುತ್ತದೆ. ಆದರೆ ಅದು ಖಂಡಿತವಾಗಿಯೂ ಆಸ್ಟ್ರೇಲಿಯಾದ ಟೆಸ್ಟ್ ಪಂದ್ಯಗಳು ಅಥವಾ ಏಕದಿನ ವಿಶ್ವಕಪ್‌ ಪಂದ್ಯಗಳಂತೂ ಅಲ್ಲ” ಎಂದು ನೇರವಾಗಿ ಹೇಳಿದ್ದಾರೆ.

ಅಲ್ಲದೆ ” ಐಪಿಎಲ್​ ಟೂರ್ನಿ ಹತ್ತಿರ ಬಂದಾಗ ನಾನು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ಫ್ರಾಂಚೈಸಿ (SRH) ಜೊತೆಗೂ ಮಾತನಾಡಿ ಯಾವುದು ಸೂಕ್ತವೋ ಹಾಗೆ ಮಾಡುತ್ತೇನೆ” ಎಂದು ಕಮಿನ್ಸ್ ತಿಳಿಸಿದ್ದಾರೆ.

ಈ ಮೂಲಕ ಫ್ರಾಂಚೈಸಿ ಲೀಗ್‌ಗಳಿಗಿಂತ ತಮಗೆ ದೇಶದ ಪರ ಆಡುವ ಟೆಸ್ಟ್ ಪಂದ್ಯಗಳು ಮತ್ತು ಐಸಿಸಿ ಟೂರ್ನಿಗಳೇ ಮುಖ್ಯ ಎಂದು ಪ್ಯಾಟ್ ಕಮಿನ್ಸ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಗಾಯದ ಸಮಸ್ಯೆಯಿಂದಾಗಿ ಅವರು ಐಪಿಎಲ್ ಸೀಸನ್-19ರ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅಷ್ಟೇ ಅಲ್ಲದೆ ಸನ್​ರೈಸರ್ಸ್ ಹೈದರಾಬಾದ್ ಪರ ಈ ಬಾರಿ ಕೇವಲ 8 ಪಂದ್ಯಗಳನ್ನು ಆಡಲಷ್ಟೇ ಶಕ್ತರಾಗಿದ್ದರು.

ಇದನ್ನೂ ಓದಿ: ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ

ಇತ್ತ ಕಮಿನ್ಸ್ ಅಲಭ್ಯತೆಯ ನಡುವೆ ಮೊದಲ 7 ಪಂದ್ಯಗಳಲ್ಲಿ ಇಶಾನ್ ಕಿಶನ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ತಂಡವನ್ನು ಯಶಸ್ವಿಯಾಗಿಯೇ ಮುನ್ನಡೆಸಿದ್ದರು. ಹೀಗಾಗಿ ಮುಂದಿನ ಸೀಸನ್​ನಲ್ಲಿ ಪ್ಯಾಟ್ ಕಮಿನ್ಸ್ ಅಲಭ್ಯರಾದರೆ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಇಶಾನ್ ಕಿಶನ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.

Published On - 1:55 pm, Wed, 3 June 26

Follow Us
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ವಾಹನ ನಿಲುಗಡೆ
ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ವಾಹನ ನಿಲುಗಡೆ
ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?
ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?
ಜಮೀರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲ
ಜಮೀರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲ
ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್
ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್
‘ಟಾಕ್ಸಿಕ್’ನ ‘ತಬಾಹಿ’ ವೈರಲ್: ಹಾಡು ಬರೆದಿರುವ ಭಟ್ಟರು ಹೇಳಿದ್ದೇನು?
‘ಟಾಕ್ಸಿಕ್’ನ ‘ತಬಾಹಿ’ ವೈರಲ್: ಹಾಡು ಬರೆದಿರುವ ಭಟ್ಟರು ಹೇಳಿದ್ದೇನು?
ಬೆಂಗಳೂರು ಮೆಟ್ರೋದಲ್ಲಿ ಪ್ರೇಮಿಗಳ ರೋಮ್ಯಾನ್ಸ್
ಬೆಂಗಳೂರು ಮೆಟ್ರೋದಲ್ಲಿ ಪ್ರೇಮಿಗಳ ರೋಮ್ಯಾನ್ಸ್
ಮುಂದುವರಿದ ಮುನಿಸು?: ಸಿಎಂ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್​​ ಗೈರು
ಮುಂದುವರಿದ ಮುನಿಸು?: ಸಿಎಂ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್​​ ಗೈರು