ಫ್ಯಾಕ್ಟರಿ ತ್ಯಾಜ್ಯದಿಂದ ನೀರು ಕಲುಷಿತ; ಲಕ್ಷಾಂತರ ಮೀನುಗಳ ಮಾರಣಹೋಮ
ಫ್ಯಾಕ್ಟರಿ ತ್ಯಾಜ್ಯದಿಂದ ನೀರು ಕಲುಶಿತವಾಗಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊರವಲಯದ ಕೊಕ್ಕನಘಟ್ಟ ಗ್ರಾಮದ ಕೆರೆಯಲ್ಲಿ ನಡೆದಿದ್ದು, ಲಕ್ಷಾಂತರ ಮೌಲ್ಯದ ಮೀನುಗಳ ಸಾಮೂಹಿಕ ಸಾವಿನಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ.
ಹಾಸನ: ಫ್ಯಾಕ್ಟರಿ ತ್ಯಾಜ್ಯದಿಂದ ನೀರು ಕಲುಷಿತವಾಗಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊರವಲಯದ ಕೊಕ್ಕನಘಟ್ಟ ಗ್ರಾಮದ ಕೆರೆಯಲ್ಲಿ ನಡೆದಿದ್ದು, ಲಕ್ಷಾಂತರ ಮೌಲ್ಯದ ಮೀನುಗಳ ಸಾಮೂಹಿಕ ಸಾವಿನಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಸಮೀಪವಿರುವ ಹಿಮತ್ ಸಿಂಘ್ಕಾ ಫ್ಯಾಕ್ಟರಿಯಿಂದ ರಾತ್ರೋರಾತ್ರಿ ತ್ಯಾಜ್ಯದ ನೀರನ್ನು ಕೆರೆಗೆ ಹರಿಸಿದ ಕಾರಣ ಕಲುಷಿತ ನೀರಿನಿಂದ ಮೀನುಗಳ ಸಾವನ್ನಪ್ಪಿವೆ ಎಂಬ ಆರೋಪ ಕೇಳಿಬಂದಿದೆ.
ನೀರಿನ ಕಲುಷಿತಗೊಂಡಿದ್ದರಿಂದ ಜನ, ಜಾನುವಾರುಗಳ ಜೀವಕ್ಕೂ ಕಂಟಕ ಎದುರಾಗುತ್ತದೆ. ಕೂಡಲೆ ನಿರಂತರವಾಗಿ ವಿಷಕಾರಿ ನೀರನ್ನ ಕರೆಗೆ ಹರಿಸುತ್ತಿರುವ ಫ್ಯಾಕ್ಟರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕರೋಡ್ಪತಿ ಆಗೋ ಆಸೆಗೆ ಬಿದ್ದು.. 84 ಸಾವಿರ ರೂ. ಲಾಸ್ ಮಾಡ್ಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ!