Siddaramaiah | ನಾನು ಮೊನ್ನೆ ಟೈಲರ್​​ ಬಳಿ ನನ್ನ ಎದೆ ಚೆಕ್​ ಮಾಡಿಸಿದೆ.. ನಂದು 46 ಇಂಚಿನ ಎದೆ ಎಂದ ಸಿದ್ದರಾಮಯ್ಯ

Siddaramaiah ನಾನು ಮೊನ್ನೆ ಟೈಲರ್​​ ಬಳಿ ನನ್ನ ಎದೆ ಚೆಕ್​ ಮಾಡಿಸಿದೆ. ನಂದು 46 ಇಂಚಿನ ಎದೆ, ಮೋದಿದು 56 ಇಂಚಿನ ಎದೆ ಎಂದು ಜಿಲ್ಲೆಯ ಮಳವಳ್ಳಿಯಲ್ಲಿ ಸಿದ್ದರಾಮಯ್ಯ ನಗೆಚಟಾಕಿ ಹಾರಿಸಿದರು.

Siddaramaiah | ನಾನು ಮೊನ್ನೆ ಟೈಲರ್​​ ಬಳಿ ನನ್ನ ಎದೆ ಚೆಕ್​ ಮಾಡಿಸಿದೆ.. ನಂದು 46 ಇಂಚಿನ ಎದೆ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
KUSHAL V
|

Updated on:Feb 15, 2021 | 6:43 PM

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ತಮ್ಮದು 56 ಇಂಚಿನ ಎದೆ ಅಂತಾರೆ. ನಾನು ಮೊನ್ನೆ ಟೈಲರ್​​ ಬಳಿ ನನ್ನ ಎದೆ ಚೆಕ್​ ಮಾಡಿಸಿದೆ. ನಂದು 46 ಇಂಚಿನ ಎದೆ, ಮೋದಿದು 56 ಇಂಚಿನ ಎದೆ ಎಂದು ಜಿಲ್ಲೆಯ ಮಳವಳ್ಳಿಯಲ್ಲಿ ಸಿದ್ದರಾಮಯ್ಯ ನಗೆ ಚಟಾಕಿ ಹಾರಿಸಿದರು. ಜೊತೆಗೆ, ಎಷ್ಟು ಇಂಚಿನ ಎದೆ ಇದೆ ಅನ್ನುವುದು ಮುಖ್ಯ ಅಲ್ಲ. ಎದೆಯಲ್ಲಿ ಮಾನವೀಯತೆ, ಮನುಷ್ಯತ್ವ ಇರೋದು ಮುಖ್ಯ ಎಂದು ಸಿದ್ದರಾಮಯ್ಯ ಪ್ರಧಾನಿಯನ್ನು ನಯವಾಗಿ ಟೀಕಿಸಿದರು. (Average chest size for a man in India is 43 inches)

‘ಪ್ರಧಾನಿ ಮೋದಿ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ’ ಪ್ರಧಾನಿ ಮೋದಿ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ. ನಾನು ಸ್ವಾತಂತ್ರ್ಯ ಸಿಗುವ ಸ್ವಲ್ಪ ದಿನ ಮುಂಚೆ ಹುಟ್ಟಿದವನು. ಯಾರಾದರೂ ಬಿಜೆಪಿಯವರು ದೇಶಕ್ಕೆ ಪ್ರಾಣ ಕೊಟ್ಟಿದ್ದಾರಾ? ನಮ್ಮ ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದೆ ಎಂದು ಜಿಲ್ಲೆಯ ಮಳವಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿದರು.

‘ಎಷ್ಟೇ ಹಣ ಖರ್ಚಾದ್ರೂ ಪರವಾಗಿಲ್ಲ 10 ಕೆಜಿ ಅಕ್ಕಿ ನೀಡ್ತೇವೆ’ ನಾನು ಮುಖ್ಯಮಂತ್ರಿ ಆಗಿದ್ದಾಗ ಜನರಿಗೆ 7 ಕೆಜಿ ಅಕ್ಕಿ ನೀಡ್ತಿದ್ದೆ. ಆದರೆ ಸಿಎಂ ಯಡಿಯೂರಪ್ಪ ಅವರು 5 ಕೆಜಿಗೆ ಇಳಿಸಿದ್ದಾನೆ. ಮುಂದಿನ ದಿನಗಳಲ್ಲಿ 3 ಕೆಜಿಗೆ ಇಳಿಸ್ತಾನೆ, ನಂತರ ನಿಲ್ಲಿಸುತ್ತಾರೆ ಎಂದು ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಸಿದ್ದರಾಮಯ್ಯ ಏಕವಚನದಲ್ಲಿಯೇ ಕಟಕಿಯಾಡಿದರು.

ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ಬರಲೇ ಬೇಕು. ನಮ್ಮ ಸರ್ಕಾರ ಬಂದರೆ ಒಬ್ಬರಿಗೆ 10 ಕೆ.ಜಿ ಅಕ್ಕಿ ನೀಡುತ್ತೇನೆ. ಎಷ್ಟೇ ಹಣ ಖರ್ಚಾದ್ರೂ ಪರವಾಗಿಲ್ಲ 10 ಕೆ.ಜಿ ಅಕ್ಕಿ ನೀಡ್ತೇವೆ ಎಂದು ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಇದನ್ನೂ ಓದಿ: Siddaramaiah | ಅಭಿವೃದ್ಧಿ ಕೆಲಸ ಮಾಡಿದ ನರೇಂದ್ರ ಮೋದಿ ಎಲೆಕ್ಷನ್​ನಲ್ಲಿ ಮತ್ತೆ ಸೋಲಬೇಕಾ? -ಮತ್ತೆ ಪ್ರಧಾನಿ ಮೋದಿ ಜಪ ಮಾಡಿದ ಸಿದ್ದರಾಮಯ್ಯ!

Published On - 6:37 pm, Mon, 15 February 21