‘IAS ವರ್ಗಾವಣೆಯಲ್ಲಿ ಕೋಟ್ಯಂತರ ರೂ ಭ್ರಷ್ಟಾಚಾರವಾಗಿದೆ ಅಂತಾ BJP ಶಾಸಕರೇ CM ವಿರುದ್ಧ ಆರೋಪ ಮಾಡಿದ್ದಾರೆ’

42 IAS ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಸಿ BJP ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ನೀಡಿದ್ದ ಹೇಳಿಕೆ ಕುರಿತು ರಾಜ್ಯ ‘ಕೈ’ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟ್ವೀಟ್​ ಮಾಡಿದ್ದಾರೆ. ಅಧಿಕಾರಿಗಳ ಟ್ರಾನ್ಸ್​ಫರ್​ನಲ್ಲಿ ಕೋಟ್ಯಂತರ ರೂ. ಹೋಲ್‌ಸೇಲ್ ಭ್ರಷ್ಟಾಚಾರವಾಗಿದೆ ಎಂದು ಶಾಸಕ ಯತ್ನಾಳ್​ ಆರೋಪ ಮಾಡಿದ್ದರು.

‘IAS ವರ್ಗಾವಣೆಯಲ್ಲಿ ಕೋಟ್ಯಂತರ ರೂ ಭ್ರಷ್ಟಾಚಾರವಾಗಿದೆ ಅಂತಾ BJP ಶಾಸಕರೇ CM ವಿರುದ್ಧ ಆರೋಪ ಮಾಡಿದ್ದಾರೆ’
ರಣದೀಪ್ ಸುರ್ಜೇವಾಲಾ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Feb 15, 2021 | 5:51 PM

ದೆಹಲಿ: 42 IAS ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಸಿ BJP ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ನೀಡಿದ್ದ ಹೇಳಿಕೆ ಕುರಿತು ರಾಜ್ಯ ‘ಕೈ’ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟ್ವೀಟ್​ ಮಾಡಿದ್ದಾರೆ. ಅಧಿಕಾರಿಗಳ ಟ್ರಾನ್ಸ್​ಫರ್​ನಲ್ಲಿ ಕೋಟ್ಯಂತರ ರೂ. ಹೋಲ್‌ಸೇಲ್ ಭ್ರಷ್ಟಾಚಾರವಾಗಿದೆ ಎಂದು ಶಾಸಕ ಯತ್ನಾಳ್​ ಆರೋಪ ಮಾಡಿದ್ದರು.

ಓರ್ವ BJP ಶಾಸಕನೇ ನಿಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಇಂಥ ಆರೋಪಗಳು ಪ್ರತಿನಿತ್ಯವೂ ಕೇಳಿಬರುತ್ತಲೇ ಇವೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿನಿತ್ಯ ಕೇಳಿಬರುತ್ತಲೇ ಇವೆ ಎಂದು ತಮ್ಮ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ನಿಮಗೆ ರಾಜ್ಯದ ಹಿತಾಸಕ್ತಿಯ ಕುರಿತು ಕಾಳಜಿ ಇದ್ದರೆ ದಯವಿಟ್ಟು ರಾಜೀನಾಮೆ ನೀಡಿ ರಾಜ್ಯದ ಮಾನ ಉಳಿಸಿ ಎಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ B.S.ಯಡಿಯೂರಪ್ಪಗೆ ರಾಜ್ಯ ‘ಕೈ’ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ. ಟ್ವೀಟ್ ಮಾಡಿ ರಣದೀಪ್ ಸುರ್ಜೇವಾಲಾ ಈ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: 30ಕ್ಕೂ ಹೆಚ್ಚು ಸೈಟ್‌ಗಳಿಗೆ ನಕಲಿ ದಾಖಲೆ‌ ಸೃಷ್ಟಿಸಿದ ಆರೋಪ: ನಾಲ್ವರು BDA ಇಂಜಿನಿಯರ್ಸ್​ ಪೊಲೀಸ್ ಕಸ್ಟಡಿಗೆ