ಮೋದಿ ವಿರೋಧಿಸುವ ಗುಂಗಿನಲ್ಲಿ ನಾಳೆ ದಾವೂದ್​​ನನ್ನೂ ಬೆಂಬಲಿಸುತ್ತೀರಿ: ಸಿದ್ದರಾಮಯ್ಯಗೆ ಪ್ರಲ್ಹಾದ್​ ಜೋಶಿ ತಿರುಗೇಟು

ಸಿದ್ದರಾಮಯ್ಯ ಮಾಡಿರುವ ಟ್ವೀಟ್​ಗೆ ಉತ್ತರಿಸಿರುವ ಧಾರವಾಡ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್​ ಜೋಶಿ ಸಿಡಿದೆದ್ದಿದ್ದಾರೆ.

  • TV9 Web Team
  • Published On - 20:23 PM, 15 Feb 2021
ಮೋದಿ ವಿರೋಧಿಸುವ ಗುಂಗಿನಲ್ಲಿ ನಾಳೆ ದಾವೂದ್​​ನನ್ನೂ ಬೆಂಬಲಿಸುತ್ತೀರಿ: ಸಿದ್ದರಾಮಯ್ಯಗೆ ಪ್ರಲ್ಹಾದ್​ ಜೋಶಿ ತಿರುಗೇಟು
ಸಿದ್ದರಾಮಯ್ಯ-ಪ್ರಲ್ಹಾದ್​ ಜೋಶಿ

ಬೆಂಗಳೂರು: ಟೂಲ್​ಕಿಟ್​ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ಮೂಲದ ದಿಶಾ ರವಿ ವಿಚಾರ ರಾಜಕೀಯ ಕೆಸರೆರೆಚಾಟಕ್ಕೆ ವೇದಿಕೆ ಆಗಿದೆ. ದಿಶಾ ಅವರನ್ನು ಬಂಧಿಸಿದ್ದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದರು. ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ತಿರುಗೇಟು ನೀಡಿದ್ದು, ಮೋದಿ ವಿರೋಧಿಸುವ ಗುಂಗಿನಲ್ಲಿ ನಾಳೆ ನೀವು ದಾವೂದ್​​​ನನ್ನೂ ಬೆಂಬಲಿಸುತ್ತೀರಿ ಎಂದಿದ್ದಾರೆ.

ದಿಶಾ ಅವರನ್ನು ಬಂಧಿಸುವಾಗ ನಿಯಮಗಳನ್ನು ಪಾಲನೆ ಮಾಡಿಲ್ಲ ಎನ್ನುವ ವರದಿಯನ್ನು ಟ್ವೀಟ್​ ಮಾಡಿದ್ದ ಸಿದ್ದರಾಮಯ್ಯ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಿತ ಹೆಣ್ಣುಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ. ದಿಶಾ ರವಿ ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ, ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು. ನೆನಪಿರಲಿ, ನಾರಿ‌ ಮುನಿದರೆ ಮಾರಿ ಎಂದಿದ್ದರು.

ಈ ಟ್ವೀಟ್​ಗೆ ಉತ್ತರಿಸಿರುವ ಧಾರವಾಡ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್​ ಜೋಶಿ, ದೇಶದ್ರೋಹಿ, ಸಮಾಜ ವಿರೋಧಿ PFI SDPI ಮೇಲಿನ ಕೇಸ್ ವಾಪಸ್ ಪಡೆದ ನಿಮ್ಮಿಂದ ಇನ್ನೇನು ಅಪೇಕ್ಷಿಸಬಹುದು? ನಿಮ್ಮ ನಾಯಕಿ ಸೋನಿಯಾ ಗಾಂಧಿ ಬಾಟ್ಲಾ ಹೌಸ್ ಎನ್ಕೌಂಟರ್ ಸಂದರ್ಭದಲ್ಲಿ ಏನು ಹೇಳಿದರು ಮತ್ತು ಏನು ಮಾಡಿದರು ನಿಮಗೆ ನೆನಪಿದೆಯಾ? ಮೋದಿ ವಿರೋಧಿಸುವ ಗುಂಗಿನಲ್ಲಿ ನಾಳೆ ದಾವುದ್​ನನ್ನೂ ಬೆಂಬಲಿಸುತ್ತೀರಿ ಎಂದು ಆರೋಪಿಸಿದ್ದಾರೆ.

ರೈತರ ಹೋರಾಟಕ್ಕೆ ಬೆಂಬಲ ನೀಡಿದ ದಿಶಾ ರವಿ ಅವರ ವಿರುದ್ಧ ನೀವು ಹೇಗೆ ದೇಶ ದ್ರೋಹದ ಪ್ರಕರಣ ದಾಖಲು ಮಾಡುತ್ತೀರಾ? ಈ ಪ್ರಕರಣದ ಹಿಂದೆ ರಾಜಕೀಯ ಷಢ್ಯಂತ್ರ ಇದೆ ಎಂದು ಆರೋಪಿಸಿದ್ದರು.

ಈ ಟ್ವೀಟ್​ಗೂ ಉತ್ತರಿಸಿರುವ ಪ್ರಲ್ಹಾದ್​ ಜೋಶಿ, ನೀವು ರೈತರ ಬಗ್ಗೆ ಅರ್ಧದಷ್ಟು ಯೋಚಿಸಿದ್ದರೆ ರಾಜ್ಯದಲ್ಲಿ ಅವರ ಸ್ಥಿತಿ ವಿಭಿನ್ನವಾಗಿರುತ್ತದೆ. ಎದ್ದೇಳಿ ಸಿದ್ದರಾಮಯ್ಯ ಅವರೇ. ರಾಷ್ಟ್ರವು ಈಗಾಗಲೇ ಎದ್ದಿದೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: Siddaramaiah | ನಾನು ಮೊನ್ನೆ ಟೈಲರ್​​ ಬಳಿ ನನ್ನ ಎದೆ ಚೆಕ್​ ಮಾಡಿಸಿದೆ.. ನಂದು 46 ಇಂಚಿನ ಎದೆ ಎಂದ ಸಿದ್ದರಾಮಯ್ಯ