ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿದ್ರಾ ಐಎಸ್​ಐಎಸ್​ ಉಗ್ರಗಾಮಿಗಳು? ಟಿವಿ9ಗೆ ಸಿಕ್ಕಿದೆ ಸ್ಪೋಟಕ ಅಂಶ

|

Updated on: Mar 06, 2023 | 11:38 AM

ಐಎಸ್​ಐಎಸ್​ ಉಗ್ರಗಾಮಿ ಸಂಘಟನೆ ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿದ್ದು, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಭಾರೀ ಸ್ಪೋಟ ನಡೆಸುವ ಸಂಚು ರೂಪಿಸಿದೆ ಎಂಬ ಅಂಶ ಐಸಿಸ್​ ಸಂಘಟನೆಯ ವಕ್ತಾರ ಐಎಸ್​​ಕೆಪಿ (ಇಸ್ಲಾಮಿಕ್ ಸ್ಟೇಟ್ಸ್ ಕೊರಸನ್ ಪ್ರಾವಿನ್ಸ್​​) ನಡೆಸುವ ವಾಯ್ಸ್ ಆಫ್ ಖೂರಸನ್​ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿದ್ರಾ ಐಎಸ್​ಐಎಸ್​ ಉಗ್ರಗಾಮಿಗಳು? ಟಿವಿ9ಗೆ ಸಿಕ್ಕಿದೆ ಸ್ಪೋಟಕ ಅಂಶ
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ಮಂಗಳೂರಿನ ಕಂಕನಾಡಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್​ ಸ್ಫೋಟದ (Mangaluru Blast) ಪ್ರಕರಣದ ಹೊಣೆ ಹೊತ್ತ ಬೆನ್ನಲ್ಲೇ ಮೊತ್ತೊಂದು ಸ್ಪೋಟಕ ಅಂಶ ಟಿವಿ9ಗೆ ಲಭ್ಯವಾಗಿದೆ. ಐಎಸ್​ಐಎಸ್​ ಉಗ್ರಗಾಮಿ ಸಂಘಟನೆ ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿದ್ದು, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಭಾರೀ ಸ್ಪೋಟ ನಡೆಸುವ ಸಂಚು ರೂಪಿಸಿದೆ ಎಂಬ ಅಂಶ ಐಸಿಸ್​ ಸಂಘಟನೆಯ ವಕ್ತಾರ ಐಎಸ್​​ಕೆಪಿ (ಇಸ್ಲಾಮಿಕ್ ಸ್ಟೇಟ್ಸ್ ಕೊರಸನ್ ಪ್ರಾವಿನ್ಸ್​​) ನಡೆಸುವ ವಾಯ್ಸ್ ಆಫ್ ಖೂರಸನ್​ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣದ ತನಿಖೆಗೆ ಎನ್​ಐಎ ಇಳಿದಾಗ ಸ್ಪೋಟಕ ಅಂಶ ಬಯಲಾಗಿದೆ. ಎನ್​ಐಎ ಈವರೆಗೂ 60 ಕಡೆ ದಾಳಿ ನಡೆಸಿದೆ.

ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು

ದಕ್ಷಿಣ ಭಾರತದಲ್ಲಿ ಐಸಿಸ್ ಮುಜಾಯಿದ್ದಿನ್​​ಗಳು ಇದ್ದಾರೆ. ಕಾಫಿರರನ್ನು (ಮುಸ್ಲಿಂ ವಿರೋಧಿಗಳು) ಬಾಂಬ್ ಇಟ್ಟು ಕೊಲ್ಲುವುದೆ ನಮ್ಮ ಉದ್ದೇಶ. ಅಲ್ಲಾಹ್​​ನ ಆರಾಧನೆ ಹೊರತು ನಿಮಗೆ ಶಾಂತಿ ಸಿಗಲ್ಲ. ನಮ್ಮ ಮುಜಾಹಿದ್​​ಗಳು ಅದಕ್ಕಾಗಿ ಅಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ವಾಯ್ಸ್ ಆಫ್ ಖೂರಸನ್​ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿತ್ತು.

ಮಂಗಳೂರು ಕುಕ್ಕರ್ ಬಾಂಬ್​ ಸ್ಫೋಟ ಹೊಣೆ ಹೊತ್ತ ಐಎಸ್​ಐಎಸ್​

2022ರ ನವೆಂಬರ್ 19 ರಂದು ಮಂಗಳೂರಿನ ಕಂಕನಾಡಿ ಬಳಿ ಸಂಭವಿಸಿದ ಆಟೋದಲ್ಲಿ ಕುಕ್ಕರ್ ಬಾಂಬ್​ ಸ್ಫೋಟ (Mangaluru Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್​ಐಎಸ್ (ISIS)​ ಉಗ್ರ ಸಂಘಟನೆ ಕೊನೆಗೂ ಸ್ಫೋಟದ ಹೊಣೆ ಹೊತ್ತಿದೆ. ಐಸಿಸ್​ ಸಂಘಟನೆಯ ವಕ್ತಾರ ಐಎಸ್​​ಕೆಪಿ (ಇಸ್ಲಾಮಿಕ್ ಸ್ಟೇಟ್ಸ್ ಕೊರಸನ್ ಪ್ರಾವಿನ್ಸ್​​) ನಡೆಸುವ ವಾಯ್ಸ್ ಆಫ್ ಕೂರಸ ನಿಯತಕಾಲಿಕೆಯಲ್ಲಿ ಕರ್ನಾಟಕದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು ಸ್ಪೋಟದ ಹೊಣೆ ಹೊತ್ತಿರುವ ಕುರಿತಾಗಿ ಪ್ರಕಟಿಸಲಾಗಿದೆ.

ಇತ್ತೀಚೆಗೆ ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ (Islamic Resistence Concil IRC) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು. ಶಂಕಿತ ಉಗ್ರ ಶಾರೀಕ್​ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಉಗ್ರರು ಎಚ್ಚರಿಕೆ ನೀಡಿದ್ದರು.

ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ನಮ್ಮ ಸಹೋದರ ಪ್ರಯತ್ನಿಸಿದ್ದ ಈ ಕಾರ್ಯಾಚರಣೆಯಲ್ಲಿ ಅದು ಯಶಸ್ವಿಯಾಗಲಿಲ್ಲ. ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ನಮ್ಮ ಇತರ ಸೋದರರನ್ನು ಬಂಧಿಸಲು ಯತ್ನಿಸುತ್ತಿವೆ, ಹಿಂಬಾಲಿಸುತ್ತಿವೆ. ಆದರೆ ಅವರಿಂದ ತಪ್ಪಿಸಿಕೊಳ್ಳಲು ನಾವು ಸಫಲರಾಗಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Mon, 6 March 23