Hassan: ಮತ್ತೊಮ್ಮೆ ಸರ್ಕಾರಿ ಅಧಿಕಾರಿಯೊಬ್ಬರನ್ನು ಸಾರ್ವಜನಿಕವಾಗಿ ನಿಂದಿಸಿದ ಶಾಸಕ ಎಚ್ ಡಿ ರೇವಣ್ಣ

Hassan: ಮತ್ತೊಮ್ಮೆ ಸರ್ಕಾರಿ ಅಧಿಕಾರಿಯೊಬ್ಬರನ್ನು ಸಾರ್ವಜನಿಕವಾಗಿ ನಿಂದಿಸಿದ ಶಾಸಕ ಎಚ್ ಡಿ ರೇವಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 06, 2023 | 11:03 AM

ಹಾಸನ ತಾಲ್ಲೂಕಿನಲ್ಲಿರುವ ಮೇಳಗೋಡು ಗ್ರಾಮದಲ್ಲಿ ಅಲ್ಲಿನ ನಿವಾಸಿಗಳ ಕುಂದುಕೊರತೆಗಳನ್ನು ವಿಚಾರಿಸುವಾಗ ರೇವಣ್ಣ ಕೆಪಿಟಿಸಿಎಲ್ ಅಧಿಕಾರಿಯೊಬ್ಬರನ್ನು ಸಾರ್ವಜನಿಕವಾಗಿ ನಿಂದಿಸಿದರು.

ಹಾಸನ: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಸರ್ಕಾರಿ ಅಧಿಕಾರಿಗಳನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಳ್ಳೋದು ಇದು ಮೊದಲ ಸಲವಲ್ಲ ಕೊನೆಯ ಬಾರಿಯೂ ಅಲ್ಲ. ಕೆಲ ರಾಜಕೀಯ ನಾಯಕರ ಧೋರಣೆಯೇ ಹಾಗೆ. ಸರ್ಕಾರಿ ಅಧಿಕಾರಿಗಳನ್ನು ಕೇವಲವಾಗಿ ಪರಿಗಣಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ನಾವು ಖಂಡಿತವಾಗಿಯೂ ಸರ್ಕಾರಿ ಅಧಿಕಾರಿಗಳನ್ನು (government officials) ವಹಿಸಿಕೊಂಡು ಮಾತಾಡುತ್ತಿಲ್ಲ. ಅವರಲ್ಲೂ ದುಷ್ಟರು, ಲಂಚಬಾಕರು, ಸೂಕ್ತವಾಗಿ ಕರ್ತವ್ಯ ನಿರ್ವಹಿಸದವರು ಇರುತ್ತಾರೆ. ಹಾಗಂತ ಅವರನ್ನು ಸಾರ್ವಜನಿವಾಗಿ ಶಾಲಾ ಮಕ್ಕಳನ್ನು ಗದರುವಂತೆ ಗದರುವುದು ಯಾವುದೇ ರಾಜಕಾರಣಿಗೆ ಶೋಭೆಯಲ್ಲ. ಹಾಸನ ತಾಲ್ಲೂಕಿನಲ್ಲಿರುವ ಮೇಳಗೋಡು (Melagodu) ಗ್ರಾಮದಲ್ಲಿ ಅಲ್ಲಿನ ನಿವಾಸಿಗಳ ಕುಂದುಕೊರತೆಗಳನ್ನು ವಿಚಾರಿಸುವಾಗ ರೇವಣ್ಣ ಕೆಪಿಟಿಸಿಎಲ್ ಅಧಿಕಾರಿಯೊಬ್ಬರನ್ನು ಸಾರ್ವಜನಿಕವಾಗಿ ನಿಂದಿಸುತ್ತಿರುವುದು ಇಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 06, 2023 10:57 AM