ತುಮಕೂರು: ಕ್ರೇನ್ನಿಂದ ಕಳಜಿ ಬಿದ್ದ ಮೂಸಂಬಿ, ಸೇಬಿನ ಹಾರ; ಅಪಾಯದಿಂದ ಪಾರಾದ ಪರಮೇಶ್ವರ
ನಿನ್ನೆ (ಮಾ.5) ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಅವಘಡವೊಂದು ಸಂಭವಿಸಿದ್ದು, ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅಪಾಯದಿಂದ ಪಾರಾಗಿದ್ದಾರೆ.
ತುಮಕೂರು: ನಿನ್ನೆ (ಮಾ.5) ಜಿಲ್ಲೆಯ ಕೊರಟಗೆರೆ (Kortgere) ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ (Prajadhwani) ಯಾತ್ರೆಯಲ್ಲಿ ಅವಘಡವೊಂದು ಸಂಭವಿಸಿದ್ದು, ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ (G Parameshwara) ಅಪಾಯದಿಂದ ಪಾರಾಗಿದ್ದಾರೆ. ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದ ಬಳಿ ಬಸ್ ಯಾತ್ರೆ ಬಂದವೇಳೆ ಪರಮೇಶ್ವರ್ ಬಸ್ ಮೇಲೆ ಹತ್ತಿ ಜನರತ್ತ ಕೈ ಬೀಸುತ್ತಿದ್ದರು. ಈ ವೇಳೆ ಪರಮೇಶ್ವರ ಅವರಿಗೆ ಹಾಕಲೆಂದು ಬೃಹತ್ತಾದ ಮೂಸಂಬಿ ಹಾಗೂ ಸೇಬಿನ ಹಾರ ಅಭಿಮಾನಿಗಳು ಕ್ರೇನ್ ಮೂಲಕ ಹಾಕಲು ಮುಂದಾಗಿದ್ದರು. ಇನ್ನೇನು ಹಾರವನ್ನು ಹಾಕಬೇಕು ಎನ್ನುವಷ್ಟರಲ್ಲಿ ಹಾರ ಕ್ರೇನ್ನಿಂದ ಜಾರಿ ಕೆಳಗೆ ಬಿದ್ದಿದೆ. ಈ ಮೂಲಕ ಪರಮೇಶ್ವರ ಅಪಾಯದಿಂದ ಪಾರಾಗಿದ್ದಾರೆ. ಇದನ್ನು ಕಂಡು ಮೂಸಂಬಿ ಹಾಗೂ ಸೇಬಿಗೆ ಜನರು ಮುಗಿಬಿದ್ದರು.