Sign In

By signing in or creating an account, you agree with Associated Broadcasting Company's Terms & Conditions and Privacy Policy.

Israel-Hamas war: ಇಸ್ರೇಲ್‌ನಲ್ಲಿ ಸಿಲುಕಿದ್ದಾರೆ 12 ಸಾವಿರ ಕನ್ನಡಿಗರು!

Israel-Hamas war: ಉತ್ತರ ಕನ್ನಡದ 3,000 ಕ್ಕೂ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಕುಮಟಾ, ಕಾರವಾರ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರದ ಜನ ಸೇರಿದಂತೆ ವಿವಿಧ ಜಿಲ್ಲೆ ಜನರು ಇಲ್ಲಿ ವಾಸವಾಗಿದ್ದೇವೆ ಎಂದು ಟೆಲ್ ಅವೀವ್ ನಿವಾಸಿ ದೀಪಕ್ ಪಿಂಟೋ ದೂರವಾಣಿ ಮೂಲಕ ತಿಳಿಸಿದ್ದಾರೆ.

Israel-Hamas war: ಇಸ್ರೇಲ್‌ನಲ್ಲಿ ಸಿಲುಕಿದ್ದಾರೆ 12 ಸಾವಿರ ಕನ್ನಡಿಗರು!
ಕ್ರಿಜೋಸ್ಟ್ ಪೌಲ್ ವಾಲ್, ಶಿರಸಿ (ಎಡಚಿತ್ರ) ಜೇಮ್ಸ್ ಮಿರಾಂದ, ಹೊನ್ನಾವರ (ಬಲಚಿತ್ರ)
Follow us
ವಿವೇಕ ಬಿರಾದಾರ
|

Updated on: Oct 11, 2023 | 8:38 AM

ಕಾರವಾರ ಅ.11: ಇಸ್ರೇಲ್​ ಮತ್ತು ಹಮಾಸ್​​ ನಡುವಿನ ಯುದ್ಧ (Israel-Hamas war) ಐದನೇ ದಿನಕ್ಕೆ ಕಾಲಿಟ್ಟಿದೆ. ಈ ಕದನದಲ್ಲಿ 1500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ಈ ಯುದ್ಧ ಪೀಡಿತ ಇಸ್ರೇಲ್‌ನಲ್ಲಿ (Israel) ರಾಜ್ಯದ 12,000 ಕ್ಕೂ ಹೆಚ್ಚು ಕನ್ನಡಿಗರು (Kannadiga’s) ಸಿಲುಕಿಕೊಂಡಿದ್ದು, ಸುರಕ್ಷಿತವಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್​ ಎಕ್ಸಪ್ರೆಸ್​ ವರದಿ ಮಾಡಿದೆ. ಅವರನ್ನು ಭಾರತ ಮತ್ತು ಇಸ್ರೇಲ್​​ ಸರ್ಕಾರಗಳು ಬೆಂಬಲವಾಗಿ ನಿಂತಿವೆ. ಮತ್ತು ಭಾರತೀಯ ರಾಯಭಾರ ಕಚೇರಿ ಅವರಿಗೆ ಟೋಲ್-ಫ್ರೀ ಸಂಖ್ಯೆಯನ್ನು ನೀಡಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದು ಹೇಳಿದೆ. ಇಸ್ರೇಲ್​ನಲ್ಲಿರುವ ಕನ್ನಡಿಗರು ಮನೆಗೆ ಕರೆ ಮಾಡಿ ತಮ್ಮ ಸಂಬಂಧಿಕರಿಗೆ ತಾವು ಸುರಕ್ಷಿತವಾಗಿದ್ದಾರೆ ಎಂದು ಭರವಸೆ ನೀಡುತ್ತಿದ್ದಾರೆ. ಉತ್ತರ ಕನ್ನಡದ 3,000 ಕ್ಕೂ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಕುಮಟಾ, ಕಾರವಾರ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರದ ಜನ ಸೇರಿದಂತೆ ವಿವಿಧ ಜಿಲ್ಲೆ ಜನರು ಇಲ್ಲಿ ವಾಸವಾಗಿದ್ದೇವೆ. ನಮ್ಮ ಬಗ್ಗೆ ಚಿಂತೆ ಮಾಡಬೇಡಿ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಟೆಲ್ ಅವೀವ್ ನಿವಾಸಿ ದೀಪಕ್ ಪಿಂಟೋ ದೂರವಾಣಿ ಮೂಲಕ ತಿಳಿಸಿದ್ದಾರೆ.

ಹೊನ್ನಾವರದವರು ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲ್​​ನಲ್ಲಿದ್ದಾರೆ. ಒಟ್ಟು 12 ಸಾವಿರ ಜನ ಕನ್ನಡಿಗರು ಇಸ್ರೇಲ್​​ನಲ್ಲಿ ವಾಸವಾಗಿದ್ದಾರೆ. ಈ ವಲಸಿಗರು ಮನೆಗಳಲ್ಲಿ ಕೇರ್‌ಟೇಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ನಮಗೆ ಉತ್ತಮ ಸಂಬಳ ನೀಡಲಾಗುತ್ತದೆ. ನಾವು ಕೆಲಸ ಮಾಡುವ ಮನೆಗಳ ಮಾಲೀಕರು ನಮಗೆ ಬಾಡಿಗೆಗೆ ಮನೆಗಳನ್ನು ನೀಡುತ್ತಾರೆ. ವಸತಿ, ಆಹಾರ ಮತ್ತು ಸಂಬಳವನ್ನು ನೀಡುತ್ತಿದ್ದಾರೆ. ರೂಪಾಯಿ ಲೆಕ್ಕದಲ್ಲಿ 1.5 ಲಕ್ಷ ರೂ. ಸಂಭಳ ಸಿಗುತ್ತಿದೆ. ಇದಕ್ಕಿಂತ ಕಡಿಮೆ ಸಂಬಳ ಯಾರಿಗೂ ಇಲ್ಲ ಎಂದರು.

ನಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ನಮಗೆ ಕರೆಗಳು ಬರುತ್ತಿವೆ. ಇಲ್ಲಿ ನಮ್ಮ ಜೀವಕ್ಕೆ ಯಾವುದೇ ಅಪಾಯವಿಲ್ಲ. ಇಸ್ರೇಲ್ ಮತ್ತು ಭಾರತ ಎರಡೂ ಸರ್ಕಾರಗಳು ನಮ್ಮನ್ನು ನೋಡಿಕೊಳ್ಳುತ್ತಿವೆ. ನಮ್ಮಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಟೆಲ್ ಅವೀವ್‌ನಿಂದ ಸುಮಾರು 100 ಕಿಮೀ ದೂರದಲ್ಲಿರುವ ಹಡೆರಾದಲ್ಲಿ ಇರುವ ಗಾಡ್‌ಫ್ರೇ ಫೆರ್ನಾಂಡಿಸ್ ಹೇಳಿದರು.

ಇದನ್ನೂ ಓದಿ: ಇಸ್ರೇಲ್​ನಲ್ಲಿರುವ ಕನ್ನಡಿಗರು ಸುರಕ್ಷಿತ, ಆದರೆ ಕರ್ನಾಟಕದಲ್ಲಿ ಅವರ ಕುಟುಂಬಗಳು ಆತಂಕದಲ್ಲಿವೆ!

ಫರ್ನಾಂಡಿಸ್ ಹೊನ್ನಾವರದ ಕಾಸರಕೋಡಿನವರಾಗಿದ್ದು, ಕಳೆದ ಎರಡು ವರ್ಷಗಳಿಂದ ಇಸ್ರೇಲ್‌ನಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟು ದಿನ ಟೆಲ್ ಅವೀವ್‌ನಲ್ಲಿ ಯಾವುದೇ ಶೆಲ್ ದಾಳಿ ನಡೆಯದಿದ್ದರೂ, ಸೋಮವಾರ ಕೆಲವು ಕ್ಷಿಪಣಿಗಳು ಇಸ್ರೇಲ್ ರಾಜಧಾನಿಗೆ ಅಪ್ಪಳಿಸಿದವು. ಆದರೆ ಹೆಚ್ಚಿನ ಹಾನಿಯಾಗಿಲ್ಲ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ಮೂಲದ ದೇವದಾಸ್ ಶೆಟ್ಟಿ 15 ವರ್ಷಗಳ ಹಿಂದೆ ಇಸ್ರೇಲ್ ಗೆ ತೆರಳಿದ್ದರು. ವಿಡಿಯೋ ಸಂದೇಶದಲ್ಲಿ ಅವರು ಇಸ್ರೇಲ್‌ನಲ್ಲಿ ಕೆಲಸ ಮಾಡುವವರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ತನ್ನ ನಾಗರಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ಇಸ್ರೇಲ್‌ನಲ್ಲಿ ಉಡುಪಿ ಜಿಲ್ಲೆಯ ಸುಮಾರು 200 ಜನರು ಇರಬಹುದು ಮತ್ತು ಮನೆಗೆ ಹಿಂದಿರುಗಿದವರು ಆತಂಕಪಡುವ ಅಗತ್ಯವಿಲ್ಲ. ಜನರು ಸುರಕ್ಷಿತವಾಗಿರಲು ಎಲ್ಲೆಂದರಲ್ಲಿ ಬಂಕರ್‌ಗಳಿವೆ.

ಇಸ್ರೇಲ್ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದರು. “ಇಸ್ರೇಲ್‌ನಲ್ಲಿರುವ ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ ಅಥವಾ ಯುದ್ಧದ ಕಾರಣದಿಂದಾಗಿ ನಿಮಗೆ ತಕ್ಷಣದ ಸಹಾಯ ಬೇಕಾದರೆ, ನೀವು ಸಹಾಯವಾಣಿಗೆ ಕರೆ ಮಾಡಬಹುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಇಸ್ರೇಲ್‌ನಲ್ಲಿ ಸಿಲುಕಿರುವ ಕರ್ನಾಟಕದ ಜನರ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ಸಹಾಯವಾಣಿ (080-22340676 ಮತ್ತು 080-22253707) ತೆರೆದಿದೆ. ಕಾಲ್ ಸೆಂಟರ್ ಈವರೆಗೆ ಕೇವಲ ಒಂದು ಕರೆಯನ್ನು ಸ್ವೀಕರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏಕೆಂದರೆ ಅನೇಕ ಜನರು ವಿದೇಶಾಂಗ ಸಚಿವಾಲಯದ ಸಹಾಯವಾಣಿಗಳಿಗೆ ನೇರವಾಗಿ ಡಯಲ್ ಮಾಡುತ್ತಿರಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ