ಪತ್ನಿಗೆ ಆಪರೇಷನ್ ಆಗಿ 14 ದಿನಗಳಾಗಿದೆ, ಆದರೂ ವಿಚಾರಣೆಗೆ ಬಂದಿದ್ದೇವೆ: ನಮಗೆ ಈಗ ಈ ದೇಶವೇ ಬೇಡ ಅನಿಸಿದೆ -ಕೆಜಿಎಫ್ ಬಾಬು

| Updated By: ಆಯೇಷಾ ಬಾನು

Updated on: Aug 01, 2022 | 9:18 PM

ಆದಾಯದ ಮೂಲ, ತೆರಿಗೆ ಕಟ್ಟಿರುವ ದಾಖಲೆಗಳನ್ನು ನೀಡುತ್ತಿದ್ದೇನೆ. ಪತ್ನಿಗೆ ಆಪರೇಷನ್ ಆಗಿ 14 ದಿನವಾಗಿದೆ, ವಿಚಾರಣೆಗೆ ಬಂದಿದ್ದೇವೆ. ನಿಯತ್ತಾಗಿ ತೆರಿಗೆ ಕಟ್ಟುವವನಿಗೆ ಕಿರುಕುಳ ನೀಡಲಾಗುತ್ತಿದೆ. ನಮಗೆ ಈಗ ಈ ದೇಶವೇ ಬೇಡ ಅನಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ನಿಗೆ ಆಪರೇಷನ್ ಆಗಿ 14 ದಿನಗಳಾಗಿದೆ, ಆದರೂ ವಿಚಾರಣೆಗೆ ಬಂದಿದ್ದೇವೆ: ನಮಗೆ ಈಗ ಈ ದೇಶವೇ ಬೇಡ ಅನಿಸಿದೆ -ಕೆಜಿಎಫ್ ಬಾಬು
ಪತ್ನಿಗೆ ಆಪರೇಷನ್ ಆಗಿ 14 ದಿನಗಳಾಗಿದೆ, ಆದರೂ ವಿಚಾರಣೆಗೆ ಬಂದಿದ್ದೇವೆ: ನಮಗೆ ಈಗ ಈ ದೇಶವೇ ಬೇಡ ಅನಿಸಿದೆ -ಕೆಜಿಎಫ್ ಬಾಬು
Follow us on

ಬೆಂಗಳೂರು: ಸ್ಕ್ರ್ಯಾಪ್ ಬ್ಯುಸಿನೆಸ್ ಶುರುಮಾಡಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬೆಳೆದ ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು(KGF Babu) ಸದ್ಯ ಇಡಿ(Enforcement Directorate) ವಿಚಾರಣೆ ಎದುರಿಸುತ್ತಿದ್ದು ದೆಹಲಿಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದರು. ಇನ್ನು ಕೆಜಿಎಫ್ ಬಾಬು ಜೊತೆ ಅವರ ಪತ್ನಿ ರುಕ್ಸಾನ್ ತಾಜ್ ಕೂಡ ವಿಚಾರಣೆಗೆ ಬಂದಿದ್ದು ಇಡಿ ವಿಚಾರಣೆ ವೇಳೆ ಬೆದರಿಸುವ ಪ್ರಯತ್ನ ಮಾಡಲಾಯ್ತು ಎಂದು ಆರೋಪ ಮಾಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪತಿ ರಾಜಕೀಯದಲ್ಲಿದ್ದಾರೆಂದು ಟಾರ್ಗೆಟ್ ಮಾಡಲಾಗುತ್ತಿದೆ. ಇಡಿ ಅಧಿಕಾರಿಗಳ ದಾಳಿ ವೇಳೆ ಒಂದು ವೈಯಕ್ತಿಕ ಡೈರಿ ಸಿಕ್ಕಿತ್ತು. ಡೈರಿ ಸಂಬಂಧ ಇಂದು ಪ್ರಶ್ನೆಗಳನ್ನು ಕೇಳಿದ್ರು. ಹಣಕಾಸು ವ್ಯವಹಾರದ ಬಗ್ಗೆ ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ವಿಚಾರಣೆ ವೇಳೆ ಶಾಸಕ ಜಮೀರ್ ಅಹ್ಮದ್ ವಿಚಾರ ಪ್ರಸ್ತಾಪಿಸಿಲ್ಲ ಎಂದು ಇಡಿ ವಿಚಾರಣೆ ಬಳಿಕ KGF ಬಾಬು ಪತ್ನಿ ರುಕ್ಸಾನ್ ತಾಜ್ ಹೇಳಿದ್ರು.

ಪತ್ನಿಗೆ ಆಪರೇಷನ್ ಆಗಿ 14 ದಿನಗಳಾಗಿದೆ, ಆದರೂ ವಿಚಾರಣೆಗೆ ಬಂದಿದ್ದೇನೆ

ಇನ್ನು ಇದೇ ವೇಳೆ ದೆಹಲಿಯ ಇಡಿ ಕಚೇರಿ ಬಳಿ ಕೆಜಿಎಫ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ಪರಿಷತ್ ಚುನಾವಣೆಗೆ ಸ್ಪರ್ಧಿಸಿದ ನಂತರ ಸಮಸ್ಯೆಯಾಗಿದೆ. ಇಡಿ ಕೇಳಿದ ಪ್ರಶ್ನೆಗಳಿಗೆ ಪತ್ನಿ ರುಕ್ಸಾನ್ ತಾಜ್ ಉತ್ತರಿಸಿದ್ದಾರೆ. ಇಡಿಯವರು ನನ್ನ ಆದಾಯದ ಮೂಲ ಕೇಳಿದ್ದರು ಉತ್ತರಿಸಿದ್ದೇನೆ. ವಿದೇಶಿ ವ್ಯವಹಾರ ಹೊಂದಿಲ್ಲ, ಅಕ್ರಮ ಹಣ ವರ್ಗಾವಣೆ ಮಾಡಿಲ್ಲ. ಆದಾಗ್ಯೂ ಜಾರಿ ನಿರ್ದೇಶನಾಲಯ ಅನಗತ್ಯ ವಿಚಾರಣೆ ನಡೆಸುತ್ತಿದೆ. ಎಲ್ಲಾ ವ್ಯವಹಾರ ಕಾನೂನುಬದ್ಧವಾಗಿದ್ದರೂ ಕಿರುಕುಳ ನೀಡ್ತಿದ್ದಾರೆ. 17 ಸಾವಿರ ಕೋಟಿ ಆಸ್ತಿ ಘೋಷಣೆ ಮಾಡಿದ್ದೇನೆ. ಆದಾಯದ ಮೂಲ, ತೆರಿಗೆ ಕಟ್ಟಿರುವ ದಾಖಲೆಗಳನ್ನು ನೀಡುತ್ತಿದ್ದೇನೆ. ಪತ್ನಿಗೆ ಆಪರೇಷನ್ ಆಗಿ 14 ದಿನವಾಗಿದೆ, ವಿಚಾರಣೆಗೆ ಬಂದಿದ್ದೇವೆ. ನಿಯತ್ತಾಗಿ ತೆರಿಗೆ ಕಟ್ಟುವವನಿಗೆ ಕಿರುಕುಳ ನೀಡಲಾಗುತ್ತಿದೆ. ನಮಗೆ ಈಗ ಈ ದೇಶವೇ ಬೇಡ ಅನಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ

ಮುಂದಿನ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಆದಾಯದ ಶೇ.25ರಷ್ಟು ಮೊತ್ತವನ್ನು ಕ್ಷೇತ್ರಕ್ಕೆ ಖರ್ಚುಮಾಡುವೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಹಣ ಖರ್ಚು ಮಾಡುತ್ತೇವೆ ಎಂದು ಕೆಜಿಎಫ್ ಬಾಬು ತಿಳಿಸಿದ್ದಾರೆ.

Published On - 9:18 pm, Mon, 1 August 22